ಚಿಕ್ಕಮಗಳೂರು | ಅಪಘಾತದಲ್ಲಿ ಮೃತನಾದ ಪತಿಯ ಅಂಗಾಂಗ ದಾನ ಮಾಡಿದ ಪತ್ನಿ ; ಸಾವಿನಲ್ಲೂ ಸಾರ್ಥಕತೆ ಮೆರೆದ ಪತ್ನಿ

ಚಿಕ್ಕಮಗಳೂರು

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. ಸಾವಿನಲ್ಲೂ ಸಾರ್ಥಕತೆಯನ್ನು ನೊಂದ ಕುಟುಂಬ ಮೆರೆದಿದ್ದು, ಸಮಾಜಕ್ಕೆ ಮಾದರಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಂಜುನಾಥ್ (35) ಅಪಘಾತದಲ್ಲಿ ಮೃತಪಟ್ಟವರು. ಆಟೋ ಅಪಘಾತದಲ್ಲಿ ಮಂಜುನಾಥ್ ಅವರ ಮೆದುಳಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದು ಮೆದುಳು ನಿಷ್ಕ್ರಿಯಗೊಂಡಿತ್ತು.

ಕೊಪ್ಪ, ಹಾಗೂ ಮಣಿಪಾಲ್​ನಲ್ಲಿ ಚಿಕಿತ್ಸೆ ಬಳಿಕವೂ ಮಂಜುನಾಥ್ ವಿಧಿವಶರಾದರು.

ಕುಟುಂಬದಿಂದ ಮಹತ್ವದ ನಿರ್ಧಾರ:

ಮಂಜುನಾಥ್ ಸಾವಿನ ಬಳಿಕ ಅವರ ಕುಟುಂಬದ ಸದಸ್ಯರು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ನಿನ್ನೆ ದಿವಸ (ಗುರುವಾರ) ಮಧ್ಯಾಹ್ನ ಮುಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗ ದಾನಕ್ಕೆ ಅವರ ಪತ್ನಿ ಮುಂದಾದರು. ಈ ಮೊದಲು ಮಣಿಪಾಲ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿ ಫೀಸ್ ಫ್ರೀ ಮಾಡಿಕೊಡ್ತೀವಿ ಎಂದಿದ್ದರಂತೆ.

ಆದರೆ, ಪತಿ ತೀರಿಕೊಂಡ ದುಃಖದಲ್ಲಿದ್ದ ಪತ್ನಿಗೆ ಅದಕ್ಕೆ ಮನಸ್ಸು ಒಪ್ಪಿರಲಿಲ್ಲ. ಆಗ ಹಣ ನೀಡಿ ಪತಿಯ ಶವವನ್ನು ಪಡೆದುಕೊಂಡು ಮನೆಗೆ ಬಂದಿದ್ದರು.ಆದರೆ, ಆ ಬಳಿಕ ಮನಸ್ಸು ಕರಗಿದ ಮಂಜುನಾಥ್ ಪತ್ನಿ ಅಪೂರ್ವ ಶೆಟ್ಟಿಯವರು ಗಂಡನ ಸಾವಿನ ನೋವಿನಲ್ಲೇ ಅಂಗಾಂಗ ದಾನಕ್ಕೆ ಮುಂದಾದರು. ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಗುರುವಾರ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಸರ್ಕಾರದ ನಿಯಮಾನುಸಾರ ಅಂಗಾಂಗ ದಾನಕ್ಕೆ ಮಂಜುನಾಥ್ ಅವರ ಪತ್ನಿ ಅಪೂರ್ವ ಒಪ್ಪಿದರು.

ಪತಿ ಮತ್ತೊಬ್ಬರಲ್ಲಿ ಜೀವಂತವಾಗಿರಲಿ ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.4 ವರ್ಷ ಹಾಗೂ 1 ವರ್ಷದ ಇಬ್ಬರು ಗಂಡು ಮಕ್ಕಳಿರುವ ಈ ಕುಟುಂಬಕ್ಕೆ ಇದ್ದ ಏಕೈಕ ಆಸರೆ ಮಂಜುನಾಥ್ ಅವರು ಇನ್ನಿಲ್ಲವಾಗಿದ್ದಾರೆ.

ಹೀಗಾಗಿ, ಈ ಬಡ ಕುಟುಂಬ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂಘ ಸಂಸ್ಥೆಗಳ ಸಹಾಯವನ್ನು ಈ ಕುಟುಂಬ ಬಯಸಿದೆ.

ನಿನ್ನೆ ದಿವಸ ಮಧ್ಯಾಹ್ನ ಮುಂಜುನಾಥ್​ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗ ದಾನ ಮಾಡುವ ಕಾರ್ಯ ನಡೆಯಿತು.

Author