ಶಿವಮೊಗ್ಗ | ಸೂಡಾದಲ್ಲಿ ಭ್ರಷ್ಟಾಚಾರವಾಗಿದ್ದರೆ ಸೂಕ್ತ ತನಿಖೆ ನಡೆಸಲಿ ನನ್ನ ಸಹಮತವಿದೆ : ಎಚ್. ಎಸ್. ಸುಂದರೇಶ್

ಶಿವಮೊಗ್ಗ

ಶಿವಮೊಗ್ಗ,ಸೂಡಾದಲ್ಲಿ ಭ್ರಷ್ಟಾಚಾರವಾಗಿದ್ದರೆ ಸೂಕ್ತ ತನಿಖೆ ನಡೆಸಲಿ ನನ್ನ ಸಹಮತವಿದೆ.ಕೇವಲ ನನ್ನ ಅವಧಿ ಮಾತ್ರವಲ್ಲ ಎಲ್ಲ ಅಧ್ಯಕ್ಷರ ಅವಧಿಯಲ್ಲಾದ ಕಾಮಗಾರಿಗಳ ಬಗ್ಗೆಯೂ ಸಮಗ್ರ ನಡೆಯಲಿ ಎಂದು ಸೂಡಾ ಅಧ್ಯಕ್ಷ ಹೆಚ್ ಸುಂದರೇಶ್ ಹೇಳಿದರು.

ಶಿವಮೊಗ್ಗದ ಸೂಡಾ ಕಚೇರಿಯಲ್ಲಿ ನಿನ್ನೆ ದಿವಸ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಬಿಪ್ರಸನ್ನಕುಮಾರ್ ಸೂಡಾದಲ್ಲಿನ 13 ಕಾಮಗಾರಿಗಳ ಅವ್ಯವಾಹರದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ನಾನು ಅಧ್ಯಕ್ಷರಾಗುವ ಮುನ್ನವೇ ಹಲವು ಕಾಮಗಾರಿಗಳು ಮುಗಿದಿವೆ.ಗುತ್ತಿಗೆದಾರರು ನೀಡಿರುವ ದೂರಿನ ಮೇರೆಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಲೋಪವೆಸಗಿರುವ ಅಧಿಕಾರಿಗೆ ಶಿಕ್ಷೆಯಾಗಲಿ ಯಾರು ಬೇಡವೆಂದಿದ್ದಾರೆ?

ಸೂಡಾಅಭಿಯಂತರ ದಿನೇಶ್ ಮೇಲೆ ಅವ್ಯವಹಾರದ ಆರೋಪದ ಹಿನ್ನಲೆ ಬೇರೆಡೆ ವರ್ಗಾವಣೆಮಾಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಭ್ರಷ್ಟಾಚಾರವಾಗಿದ್ದರೆ ಅಧಿಕಾರಿಗಳನ್ನ ರಕ್ಷಿಸುವ ಪ್ರಶ್ನೆಯಿಲ್ಲ..ಹಾಗೆಲ್ಲ ವರ್ಗಾವಣೆ ಮಾಡುವ ಅಧಿಕಾರವೂ ನಮಗಿಲ್ಲ..ಕಾಮಗಾರಿ ಟೆಂಡರ್ ಪ್ರಕ್ರಿಯೆಗಳು ತಾಂತ್ರಿಕವಾಗಿ ಪಾರದರ್ಶಕವಾಗಿ ನಡೆಯುತ್ತವೆ ಅಷ್ಟುಸುಲಭವಾಗಿ ಬೇಕಾದವರಿಗೆ ನೀಡಲು ಸಾಧ್ಯವಿಲ್ಲ ಎಂದು ಸುಂದರೇಶ್ ಸಮರ್ಥನೆ ನೀಡಿದರು.

ಈವರೆಗೆ ನಡೆದ ಕಾಮಗಾರಿಗಳಲ್ಲಿ ಲೋಪವಾಗಿದ್ದರೆ ಅಕ್ರಮವೆಸಗಿದ ಅಧಿಕಾರಿ ವರ್ಗಾವಣೆಯಾದರೂ ಮಾಡಿದ ತಪ್ಪು ವರ್ಗಾವಣೆಯಾಗುದಿಲ್ಲ ಸಮಗ್ರ ತನಿಖೆ ನಡೆದು ಯಾರೇ ತಪ್ಪೇಸಗಿದರೂ ಶಿಕ್ಷಯಾಗಲಿ..ಪ್ರಾಧಿಕಾರಕ್ಕೆ ನಷ್ಟ ಉಂಟುಮಾಡಿದ್ದರೆ ಮುಲಾಜಿಲ್ಲದೇ ವಸೂಲಾಗಲಿ ಎಂದು ಆರೋಪಗಳಿಗೆ ಪ್ರತಿಕ್ರಿಯಿಸಿದರು.ಇನ್ನು ಪ್ರಾಧಿಕಾರದ ಅಧ್ಯಕ್ಷನಾಗಿ ನನ್ನ ಅವಧಿ ಕೆಲವೇ ದಿನಗಳು ಮಾತ್ರಬಾಕಿ ಇದೆ.ಫೆಭ್ರವರಿ 26ಕ್ಕೆ ಅಧಿಕಾರವಧಿ ಮುಗಿಯಲಿದೆ ಎಂದರು.

ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಗರದ ಹಲವೆಡೆ ಪಾರ್ಕ್ಗಳನ್ನ ಅಭಿವೃದ್ದಿಪಡಿಸಲಾಗಿದೆ.ಇಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ ಲೋಪಗಳಾಗದಂತೆ ಸ್ಥಳೀಯನಿವಾಸಿಗಳು ಸಂಘಸಂಸ್ಥೆಗಳೇ ನೋಡಿಕೊಳ್ಳುತ್ತವೆ ಎಂದರು.

ಸೂಡಾದಿಂದ ಎಲ್ಲೆಲ್ಲಿ ಅಪಾರ್ಟ್ಮೆಂಟ್ , ಲೇಔಟ್ ನಿರ್ಮಾಣ!

ಶಿವಮೊಗ್ಗದ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕ್ಕೆ ಅಮೃತ್ ಸಿಟಿ ಯೋಜನೆಯಡಿ ಜಿಐಎಸ್ ಆಧಾರಿತ ಮಹಾಯೋಜನೆ 2041 ರ ತಾತ್ಕಾಲಿಕ ಮಾಸ್ಟರ್ ಪ್ಲಾನ್ ಅನುಮೋದನೆಗಾಗಿ ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ.ಸೂಡಾ ವತಿಯಿಂದ ನಿಧಿಗೆ ಗ್ರಾಮದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಸತಿ ಬಡಾವಣೆಯ ಅಭಿವೃದ್ದಿಪಡಿಸಲು ಅಂದಾಜುಪಟ್ಟಿ ತಯಾರಿಸಿ ಅನುಮೋದನೆಗಾಗಿ ಆಯುಕ್ತಾಲಯಕ್ಕೆ ಕಳಿಸಿದ್ದು ಒಂದೆರಡು ತಿಂಗಳಲ್ಲಿ ಅನುಮೋದನೆ ಸಿಗಲಿದೆ ಎಂದರು.ಊರಗಡೂರಿನಲ್ಲಿ 4 ಎಕರೆ ಜಾಗದಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಲು ಆಯುಕ್ತಾಲಕ್ಕೆ ಪೂರ್ವಾನುಮತಿಗೆ ಯೋಜನಾ ವರದಿ ಸಲ್ಲಿಸಲಾಗಿದೆ.

ಈಗಾಗಲೇ ಊರುಗಡೂರಿನಲ್ಲಿ 400 ನಿವೇಶನ ಸಿದ್ದವಾಗಿದ್ದು ಮೀಸಲಾತಿ ಅನ್ವಯ ಹಂಚಿಕೆಯಾಗಬೇಕಿದೆ ಎಂದರು.

ಗೋಪಿಶೆಟ್ಟಿ ಗ್ರಾಮದಲ್ಲಿ 30 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಬಡಾವಣೆಗೆ ವಿನ್ಯಾಸ ನಕ್ಷೆ ತಾಂತ್ರಿಕ ಅನುಮತಿ ಬೇಕಿದೆ..ರೈತರಿಂದ ವಶಪಡಿಸಿಕೊಂಡ ಜಮೀನಿನ ಪರಿಹಾರದಲ್ಲಿ ಒಂದಷ್ಟು ತೊಂದರೆಗಳಿವೆ, ಅದೆಲ್ಲ ನಿವಾರಣೆಯಾದ ಬಳಿಕ ಕಡಿಮೆ ದರದಲ್ಲಿ ಬಡವರಿಗೆ ನಿವೇಶನ ನೀಡುವ ಕಾರ್ಯ ಕೈಗೂಡಲಿದೆ ಎಂದರು.

ಪ್ರಾಧಿಕಾರದ ವತಿಯಿಂದ ದೇವಕಾತಿಕೊಪ್ಪ, ಚೆನ್ನಮ್ಮಾಂಬಪುರ, ಆಲ್ಕೊಳ,ಬೊಮ್ಮನಕಟ್ಟೆ ಗ್ರಾಮದ ಕರೆಗಳ ಅಭಿವೃದ್ದಿಪಡಿಸುವ ಯೋಜನೆ ಕೈಗೊಂಡಿರುವುದಾಗಿ ತಿಳಿಸಿದರು.ಇನ್ನು ಹೆಚ್ಚುತ್ತಿರುವ ತಾಪಮಾನ ಹಿನ್ನಲೆ ನಗರಾಭಿವೃದ್ಧಿ ಪ್ರಾಧಿಕಾರದ ಜಾಗಗಳಲ್ಲಿ 5 ಸಾವಿರ ಗಿಡನೆಡುವ ಕಾರ್ಯಕ್ರಮ ಜೂನ್ನಲ್ಲಿ ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಯುಕ್ತ ವಿಶ್ವನಾಥ್ ಎಸ್ ಮುದ್ದಜ್ಜಿ ಸದಸ್ಯರಾದ ಅರುಣಾಕುಮಾರಿ,ಪ್ರಾನ್ಸಿಸ್, ಎಂಜಿನಿಯರ್ ಬಸವರಾಜ್ ಉಪಸ್ಥಿತರಿದ್ದರು.

Author