ಕುಷ್ಟಗಿ, ಪೊಲೀಸ್ ಇಲಾಖೆಯಲ್ಲಿ 365 ದಿನವೂ ಕೆಲಸಮಾಡಬೇಕು, ಒಂದು ದಿನವೂ ರಜೆ ಸಿಗಲ್ಲ. ಈ ಕೆಲಸ ಮಾಡುವುದಕ್ಕಿಂತ ಎಗ್ ರೈಸ್ ಮಾರಿಕೊಂಡು ಬದುಕುವುದು ಎಷ್ಟೋ ವಾಸಿ!”
ಇದು ತಾಲ್ಲೂಕಿನ ಹನುಮಸಾಗರ ಪೊಲೀಸ್ ಠಾಣೆಯ ಪೇದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.ತನ್ನ ಮಾತೃ ಇಲಾಖೆಯ ಕೆಲಸದ ಒತ್ತಡ ಮತ್ತು ರಜೆ ಇಲ್ಲದ ಸ್ಥಿತಿಯ ಬಗ್ಗೆ ಪೇದೆ ಬ್ರಹ್ಮಾನಂದ ಗದ್ದಿ ಹಾಕಿರುವ ಈ ಪೋಸ್ಟ್ ಈಗ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಇತ್ತೀಚೆಗೆ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಅವರು ಈ ವರ್ಷ 8,300 ಪೊಲೀಸ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪೇದೆ ಈ ಪೋಸ್ಟ್ ಹಾಕಿದ್ದಾರೆ. “ಪೊಲೀಸ್ ಇಲಾಖೆಗೆ ಸೇರುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಈ ಇಲಾಖೆಗಿಂತ ಬೇರೆ ಇಲಾಖೆಗೆ ಹೋಗುವುದು ಉತ್ತಮ” ಎಂದು ವಾಟ್ಸಾಪ್ ಸ್ಟೇಟಸ್ ಹಾಕುವ ಮೂಲಕ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡುವಂತೆ ಅಸಮಾಧಾನ ಸೋಟಿಸಿದಾರೆ.
ಈ ಬೆಳವಣಿಗೆ ತನ್ನ ಮಾತೃ ಇಲಾಖೆಯ ಬಗ್ಗೆ ಅಸಮಾಧಾನ ಮೂಲಕ ವ್ಯಕ್ತ ಪಡಿಸಿರುವ ರೀತಿ ಇಲಾಖೆಯ ಶಿಸ್ತು ಗೌರವ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾನೆ.



