ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಈ ಕೆಳಕಂಡ ಮಾಹಿತಿ ತಿಳಿಸಿರುತ್ತಾರೆ.
ಪ್ರತಿಯೊಂದು ಮಗುವಿಗೂ ಶಿಕ್ಷಣವು ಉಚಿತವಾಗಿ ಸಿಗಬೇಕು. ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಶಾಲೆಗಳಿರಬೇಕು -ಇವು ನಮ್ಮ ದೇಶದ ಮಹಾನ್ ನವೋದಯ ಚಿಂತಕರು ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಕನಸಾಗಿತ್ತು. ಆದರೆ, ಭಾರತಕ್ಕೆ ಸ್ವಾತಂತ್ರ‍್ಯ ಬಂದು ೭೮ ವರ್ಷಗಳಾದರೂ ಈ ಆಶಯವು ಕನಸಾಗಿಯೇ ಉಳಿದಿವೆ. ಸರ್ಕಾರಿ ಶಿಕ್ಷಣ ವ್ಯವಸ್ಥೆ ಅಳಿವಿನ ಅಂಚಿನಲ್ಲಿದೆ, ಶಿಕ್ಷಣದ ವ್ಯಾಪಾರೀಕರಣದ ಪಿಡುಗು ಎಲ್ಲೆ ಆವರಿಸುತ್ತಿದೆ. ಜನಸಾಮಾನ್ಯರ ತಲೆಯ ಮೇಲೆ ದುಬಾರಿ ಶುಲ್ಕಗಳ ಹೊರೆಯಿದೆ. ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಮತ್ತು ನಿರುದ್ಯೋಗ ಬೃದಾಕಾರವಾಗಿ ಬೆಳೆಯುತ್ತಿದೆ. ಇವು ಇಂದು ನಮ್ಮ ಮುಂದಿರುವ ದೊಡ್ಡ ಸವಾಲುಗಳು.ಈ ನಿರಂತರ ಸಮಸ್ಯೆಗಳಿಗೆ ಪರಿಹಾರವೇನು?

ಶಿಕ್ಷಣ ಕ್ಷೇತ್ರದಲ್ಲಿನ ಎಲ್ಲಾ ಕಾಯಿಲೆಗಳಿಗೆ ‘ರಾಷ್ಟ್ರೀಯ ಶಿಕ್ಷಣ ನೀತಿ (NEP) ೨೦೨೦’ ಒಂದೇ ‘ಸಂಜೀವಿನಿ’ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಈ ನೀತಿಯನ್ನು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ, ಯಾವುದೇ ಸಾರ್ವಜನಿಕ ಚರ್ಚೆ ಅಥವಾ ಸಂಸತ್ತಿನಲ್ಲಿ ಸರಿಯಾದ ವಿಮರ್ಶೆ ನಡೆಸದೆ ದೇಶದ ಮೇಲೆ ಹೇರಲಾಯಿತು. NEP ೨೦೨೦ ರ ಶಿಫಾರಸುಗಳು ಹೀಗಿವೆ:

ಶಾಲೆಗಳ ವಿಲೀನದ ಹೆಸರಿನಲ್ಲಿ ದೇಶಾದ್ಯಂತ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದು ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿಯುವಂತಿದೆ! ಶಿಕ್ಷಣದಲ್ಲಿ ವ್ಯಾಪಾರೀಕರಣ ಹಾಗೂ ತಾರತಮ್ಯ ಹೆಚ್ಚಿಸುವುದು, ಶಿಕ್ಷಣವನ್ನು ಮೂಲಭೂತ ಹಕ್ಕಿನ ಬದಲು ಒಂದು ಮಾರಾಟದ ಸರಕು ಮಾಡುವುದು.ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಕೈಬಿಟ್ಟಿದೆ. ಅದು ʼಹಣ ಕೊಡಿ ಅಥವಾ ಹೆಣ ಆಗಿʼ ಎಂಬ ಕ್ರೂರ ನಿಲುವು ತಳೆದಿದೆ! ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು.ಇದು ದೇಸಿಯ ಭಾಷೆಗಳು ಮತ್ತು ಇಂಗ್ಲೀಷ್ ಭಾಷೆಯ ಮಹತ್ವವನ್ನು ಕಡೆಗಣಿಸುತ್ತದೆ. ಜ್ಞಾನ ಸಂಪಾದನೆ, ಒಳ್ಳೆಯ ಉದ್ಯೋಗ ಪಡೆಯುವುದು ಹಾಗೂ ಉನ್ನತ ನಿಪುಣತೆಗೆ ಕೊಡಲಿ ಪೆಟ್ಟು ಕೊಡುತ್ತದೆ.ಅಧಿಕಾರದಲ್ಲಿ ಇರುವ ಪಕ್ಷವು ಪಠ್ಯಪುಸ್ತಕಗಳನ್ನು ತಿರುಚಲು ಅವಕಾಶ ನೀಡುತ್ತದೆ. ಈಗಿನ ಆಳ್ವಿಕರು ʼಶಿಕ್ಷಣದ ಭಾರತೀಕರಣʼ ಎಂಬ ಹೆಸರಿನಲ್ಲಿ ತರ್ಕವಿಲ್ಲದ ಮತ್ತು ಮೂಢನಂಬಿಕೆಯ ವಿಚಾರಗಳನ್ನು ಮಕ್ಕಳ ತಲೆಗೆ ತುಂಬುತ್ತಿದ್ದಾರೆ; ಅಸಹಿಷ್ಣುತೆ ಮತ್ತು ಕೋಮು ದ್ವೇಷದ ಬೀಜಗಳನ್ನು ಪಠ್ಯಕ್ರಮದಲ್ಲಿ ಬಿತ್ತುತ್ತಿದ್ದಾರೆ.

ಧರ್ಮನಿರಪೇಕ್ಷ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳ ಅಳಿದುಳಿದ ಅವಶೇಷಗಳನ್ನು ಹಂತಹಂತವಾಗಿ ನಾಶ ಮಾಡಲಾಗುತ್ತಿದೆ.ಶಿಕ್ಷಣದ ಸಂಪೂರ್ಣ ಕೇಂದ್ರೀಕರಣ ಗೊಳಿಸುವ ನೀಲಿ ನಕ್ಷೆ – ಶಾಲೆ-ಕಾಲೇಜುಗಳ ಆಡಳಿತ, ಪಠ್ಯಕ್ರಮ, ಬೋಧನೆ ಮತ್ತು ಪರೀಕ್ಷೆಗಳನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರವೇ ತನ್ನ ಕೈಗೆ ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ‘ವಿಕ್ಷಿತ್ ಭಾರತ್ ಶಿಕ್ಷಣ ಅಧಿಷ್ಠಾನ ವಿಧೇಯಕ ೨೦೨೫’ (Viksit Bharat Shiksha Adhishthan ಬಿಲ್ 2025) ಅನ್ನು ತರಲಾಗುತ್ತಿದೆ. ಇದುವರೆಗೆ ಸಾಪೇಕ್ಷ ಸ್ವಾತಂತ್ರ‍್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಯುಜಿಸಿ, ಎಐಸಿಟಿಇ ಮತ್ತು ಎನ್‌ಸಿಟಿಇ ನಂತಹ ಸ್ವಯತ್ತ ಸಂಸ್ಥೆಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಇದು ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಹಾಗೂ ನಮ್ಮ ದೇಶದ ಒಕ್ಕೂಟ ವ್ಯವಸ್ಥೆ (ರಾಜ್ಯಗಳ ಅಧಿಕಾರಕ್ಕೆ)ಯ ಮೇಲಿನ ಅತಿಕ್ರಮಣವಾಗಿದೆ.ಇದು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬೇಧಭಾವ ಸೃಷ್ಠಿಸುತ್ತದೆ. ಪ್ರಜಾಪ್ರಭುತ್ವ, ಬಹುತ್ವ ಹಾಗೂ ಧರ್ಮನಿರಪೇಕ್ಷತೆಯ ಬೇರುಗಳಿಗೆ ಬೆಂಕಿ ಬೀಳುವ ಸಾಧ್ಯತೆಯಿದೆ. ಇವರು ನೀಡುತ್ತಿರುವ ಮುಲಾಮು, ರೋಗಕ್ಕಿಂತ ಹೆಚ್ಚು ಭಯಂಕರವಾಗಿದೆ! ಎಲ್ಲೆಲ್ಲಿ ಎನ್.ಇ.ಪಿ ಅನುಷ್ಠಾನ ಮಾಡಲಾಗಿದೆಯೋ ಅಲ್ಲೆಲ್ಲಾ ಅದು ಶಿಕ್ಷಣದ ಮರಣ ಮೃದಂಗ ಬಾರಿಸಿದೆ.

ಜನ ಸಂಸತ್ತು’ ( People’s Parliament ) ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಮುಖ ಗಣ್ಯರು:ಉದ್ಘಾಟಕರು: ಪ್ರೊ. ಸುಖದೇವ್ ಥೋರಟ್ (ಮಾಜಿ ಅಧ್ಯಕ್ಷರು, ಯು.ಜಿ.ಸಿ)ನ್ಯಾಯಮೂರ್ತಿ ಜೆ. ಚಲಮೇಶ್ವರ್ (ನಿವೃತ್ತ ನ್ಯಾಯಾಧೀಶರು, ಸುಪ್ರೀಂ ಕೋರ್ಟ್)ಶ್ರೀ ಪ್ರಕಾಶ್ ಎನ್. ಶಾ (ಅಖಿಲ ಭಾರತ ಅಧ್ಯಕ್ಷರು, ಎ ಐ ಎಸ್ ಇ ಸಿ )ಡಾ. ಪರಕಾಲ ಪ್ರಭಾಕರ್ (ಅರ್ಥಶಾಸ್ತ್ರಜ್ಞರು)ಪ್ರೊ. ರಾಮ್ ಪುನಿಯಾನಿ (ನಿವೃತ್ತ ಪ್ರಾಧ್ಯಾಪಕರು ಐಐಟಿ ಮುಂಬೈ)ಪ್ರೊ. ಆದಿತ್ಯ ಮುಖರ್ಜಿ (ಇತಿಹಾಸಕಾರರು, ನಿವೃತ್ತ ಪ್ರಾಧ್ಯಾಪಕರು ಜೆಎನ್‌ಯು)ಪ್ರೊ. ಮೃದುಲಾ ಮುಖರ್ಜಿ (ಇತಿಹಾಸಕಾರರು, ನಿವೃತ್ತ ಪ್ರಾಧ್ಯಾಪಕರು ಜೆಎನ್‌ಯು) ಜವಾಹರ್ ಸರ್ಕಾರ್ (ಮಾಜಿ ನಿರ್ದೇಶಕರು, ಪ್ರಸಾರ ಭಾರತಿ)ಡಾ. ನಿರಂಜನ್ ಆರಾಧ್ಯ (ಅಭಿವೃದ್ಧಿ ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು)ಪ್ರೊ. ಪುರುಷೋತ್ತಮ ಬಿಳಿಮಲೆ (ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ)ಪ್ರೊ. ಜವಾಹರ್ ನೇಸನ್ (ಮಾಜಿ ಉಪಕುಲಪತಿಗಳು, ಜೆಎಸ್ಎಸ್ ತಾಂತ್ರಿಕ ವಿಶ್ವವಿದ್ಯಾಲಯ ಮೈಸೂರು)ಪ್ರೊ. ಸಚ್ಚಿದಾನಂದ ಸಿನ್ಹಾ (ನಿವೃತ್ತ ಪ್ರಾಧ್ಯಾಪಕರು ಜೆಎನ್‌ಯು)ಪ್ರೊ. ಅರುಣ್ ಕುಮಾರ್ (ಅರ್ಥಶಾಸ್ತ್ರಜ್ಞರು, ನಿವೃತ್ತ ಪ್ರಾಧ್ಯಾಪಕರು ಜೆಎನ್‌ಯು)

ಪ್ರೊ. ಎ. ಮುರಿಗೆಪ್ಪ (ಮಾಜಿ ಉಪಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ)ಪ್ರೊ. ಚಂದ್ರಶೇಖರ್ ಚಕ್ರವರ್ತಿ (ಮಾಜಿ ಉಪಕುಲಪತಿಗಳು ಪಶ್ಚಿಮ ಬಂಗಾಳ)ಪ್ರೊ. ಧ್ರುವಜ್ಯೋತಿ ಮುಖರ್ಜಿ (INSA ವಿಜ್ಞಾನಿ, ಭೂವಿಜ್ಞಾನಿ, ಕೋಲ್ಕತ್ತಾ)ಡಾ. ಸೌಮಿತ್ರೋ ಬ್ಯಾನರ್ಜಿ (ಮಾಜಿ ನಿರ್ದೇಶಕರು, IISER ಕೋಲ್ಕತ್ತಾ)ಪ್ರೊ. ಎ.ಹೆಚ್. ರಾಜಾಸಾಬ್ (ಮಾಜಿ ಉಪಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ)ಪ್ರೊ. ಅಲಿ ರಜಾ ಮೂಸ್ವಿ (ಉಪಕುಲಪತಿಗಳು, ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯ, ಕಲಬುರಗಿ)ಶ್ರೀ ಅಲ್ಲಮಪ್ರಭು ಬೆಟ್ಟದೂರು (ಶಿಕ್ಷಣ ತಜ್ಞರು, ಅಧ್ಯಕ್ಷರು, ಎ ಐ ಎಸ್ ಇ ಸಿ) ಕರ್ನಾಟಕ)ಡಾ. ಶಿಂಟಿ ಆಂಟೋನಿ (ಪ್ರಾಂಶುಪಾಲರು, ಎಂ.ಎಸ್. ರಾಮಯ್ಯ ಶಿಕ್ಷಣ ಕಾಲೇಜು, ಬೆಂಗಳೂರು)ಡಾ. ಎ.ಆರ್. ವಾಸವಿ (ಶಿಕ್ಷಣ ತಜ್ಞರು, ಬೆಂಗಳೂರು)ಡಾ. ವಿಕ್ಟರ್ ಲೋಬೋ (ಉಪಕುಲಪತಿಗಳು, ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ, ಬೆಂಗಳೂರು)

ಪ್ರೊ. ಆರ್. ಮಹಾಲಕ್ಷ್ಮಿ (ಇತಿಹಾಸ ಪ್ರಾಧ್ಯಾಪಕರು, ಐತಿಹಾಸಿಕ ಅಧ್ಯಯನ ಕೇಂದ್ರ, ಜೆಎನ್‌ಯು, ದೆಹಲಿ)ಡಾ. ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ (ಕಾರ್ಯದರ್ಶಿ); ಸಿಂಡಿಕೇಟ್ ಸದಸ್ಯರು, ಬೆಂಗಳೂರು ನಗರ ವಿಶ್ವವಿದ್ಯಾಲಯ)ಪ್ರೊ. ತರುಣ್ ಕಾಂತಿ ನಸ್ಕರ್ (ಜಾದವ್‌ಪುರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು; ಪ್ರಧಾನ ಕಾರ್ಯದರ್ಶಿ, ಎ ಐ ಎಸ್ ಇ ಸಿ )ಡಾ. ಮಹಾಬಲೇಶ್ವರ ರಾವ್ (ಶಿಕ್ಷಣ ತಜ್ಞರು, ಸಮನ್ವಯಾಧಿಕಾರಿ, ಡಾ. ಟಿ.ಎಂ.ಎ. ಪೈ ಶಿಕ್ಷಣ ಕಾಲೇಜು) ಮತ್ತು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



