ಮೈಸೂರು, ಸತ್ತ ಆಡಳಿದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊತ್ತಿದ್ದಾರೆ, ಡಿಕೆ ಹಿಂದೆ ಹೊತ್ತಿದ್ದಾರೆ.ಆಡಳಿತದ ಹೆಣವನ್ನು ಮುಂದೆ ಹೊರಲು ಡಿಕೆ ಯತ್ನಿಸುತ್ತಿದ್ದಾರೆ.ಹೆಣ ಮುಂದೆ ಯಾರಾದರೂ ಹೊರಲಿ, ಹಿಂದೆ ಯಾರಾದರೂ ಹೊರಲಿ.ಅದರಲ್ಲೇನೂ ವ್ಯತ್ಯಾಸ ಇಲ್ಲವೆಂದು ಮಾಜಿ ಸಂಸದ ಪ್ರತಾಪ್ ಸಿಂಹ ಇಂದು ಮೈಸೂರಿನಲ್ಲಿ ಮಾತನಾಡಿ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಯಾವತ್ತಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ.ಸಿದ್ದರಾಮಯ್ಯ ಬಹಳ ಬೇಗ ಜನರ ಮನಸ್ಸಿನಿಂದ ದೂರ ಆಗುತ್ತಾರೆ.ಜನ ಸಿದ್ದರಾಮಯ್ಯ ರನ್ನು ಮರೆಯುವ ದಿನಗಳು ಬಹಳ ದೂರವಿಲ್ಲವೆಂದರು.
ಡಿಕೆ ಜೊತೆ ಪೈಪೋಟಿ ಮಾಡುತ್ತಾ ಇನ್ನಷ್ಟು ದಿನ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿ ಕೊಳ್ಳಬಹುದು.ಏನೂ ಪ್ರಯೋಜನ ಇಲ್ಲ.ಜನ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ಇನ್ನೂ ಎರಡೂವರೆ ವರ್ಷ ಈ ಸತ್ತ ಆಡಳಿತ ಸಹಿಸಿಕೊಳ್ಳಲೇ ಬೇಕು.ಈ ಸರಕಾರ ಏನು ಬೀಳುವುದಿಲ್ಲ.ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು ಅಷ್ಟೆ ಎಂದಿದ್ದಾರೆ.



