ಮನೆಯಲ್ಲಿ ಕಲಹ ; ಊರಹೊರಗೆ ಬಂದು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಸುಟ್ಟು ಕರಕಲಾದ ಬಿಜೆಪಿ ಮುಖಂಡ

ದಾವಣಗೆರೆ

ದಾವಣಗೆರೆ,ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆಯಾಗಿದ್ದು, ದಾವಣಗೆರೆ ಹೊರವಲಯದಲ್ಲಿ ಕಾರಿನಲ್ಲಿ ಕಾರ್ಪೋರೇಟ್‌ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ, ಮಾಹಿತಿ ತಿಳಿದ ಕೂಡಲೆ ಇಬ್ಬರು ಮಕ್ಕಳು ದುಡುಕಿನ ನಿರ್ಧಾರಕ್ಕೆಯತ್ನಿಸಿದ್ದಾರೆ.

ದಾವಣಗೆರೆ ನಗರದ 43ನೇ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಸಂಕೋಳ್ ಚಂದ್ರಶೇಖರ ಶವ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ವಿಷಯ ಸಂಕೋಳ್ ಚಂದ್ರಶೇಖರ ಅವರ ಇಬ್ಬರು ಮಕ್ಕಳಿಗೆ ತಿಳಿಯುತ್ತಿದ್ದಂತೆ ಅವರು ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಅಸ್ವಸ್ಥಗೊಂಡಿರುವ ಇಬ್ಬರ ಮಕ್ಕಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸಾಲ ವಿಚಾರದಲ್ಲಿ ಮನೆಯಲ್ಲಿ ನಡೆದ ಜಗಳವೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು ಮೂವರು ಆತ್ಮಹತ್ಯೆ ಮಾಡಿಕೊಳ್ಳವ ನಿರ್ಧಾರಮಾಡಿ ಬದುಕು ಅಂತ್ಯಗೊಳಿಸಿಕೊಳ್ಳಲು ಮುಂದಾಗಿದ್ದರು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮಾಜಿ ಕಾರ್ಪೋರೇಟರ್ ಆಗಿರುವ ಸಂಕೋಳ್ ಚಂದ್ರಶೇಖರ್ ಸಾಲ ಮಾಡಿಕೊಂಡಿದ್ದರು. ಸಾಲ ಹೊರೆ ಹೆಚ್ಚಾಗುತ್ತಿದ್ದ ಕಾರಣ ಮನೆಗೆ ಸಾಲಗಾರರು ಆಗಮಿಸಲು ಆರಂಭಿಸಿದ್ದರು. ಇದರಿಂದ ಸಂಕೋಳ್ ಚಂದ್ರಶೇಖರ ಅವರ ಇಬ್ಬರು ಮಕ್ಕಳಾದ 20 ವರ್ಷದ ನರೇಶ ಹಾಗೂ 23 ವರ್ಷದ ಪವಿತ್ರಾಗೆ ತೀವ್ರ ಕಿರಿಕಿರಿಯಾಗುತ್ತಿತ್ತು. ಎಲ್ಲೇ ಹೋದರೂ ಸಾಲದ ವಿಚಾರವಾಗಿ ಜನರು ಪ್ರಶ್ನೆ ಮಾಡುತ್ತಿದ್ದರು.

ಹೀಗಾಗಿ ಆಕ್ರೋಶಗೊಂಡಿದ್ದ ಮಕ್ಕಳು ನಿನ್ನೆ (ಜ.10) ಸಂಕೋಳ್ ಚಂದ್ರಶೇಖರ ಮನೆಗೆ ಆಗಮಿಸುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡಿದ್ದರು. ಇದು ಮುಂದವರದರೆ ನಾವು ಸಾಯಬೇಕಾಗುತ್ತದೆ ಎಂದು ಮಕ್ಕಳು ಎಚ್ಚರಿಕೆ ನೀಡಿದ್ದರು.

ಈ ಮಾತು ಸಂಕೋಳ್ ಚಂದ್ರಶೇಖರ ಅವರ ತೀವ್ರ ಘಾಸಿಗೊಳಿಸಿತ್ತು ಎನ್ನಲಾಗಿದೆ.ಇದರಿಂದ ಬೇಸತ್ತು ಕಾರಿನೊಳಗೆ ಕುಳಿತು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತಮ್ಮ ಬದುಕನ್ನು ತಮ್ಮ ಕೈಯಾರೆ ಅಂತ್ಯಗೊಳಿಸಿಕೊಂಡಿದ್ದಾರೆ

Author