ಶಿವಮೊಗ್ಗ | ಶೀಘ್ರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕೆ “ಪಬ್ಲಿಕ್ ಐ” ಚಾನೆಲ್ : ಎಸ್ಪಿ ನಿಖಿಲ್ ಹೇಳಿಕೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್. ಬಿ ಇಂದು ಮಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಮೊಟ್ಟ ಮೊದಲಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯ ಮಾಡಲು ಅವಕಾಶ ಸಿಕ್ಕಿರುವುದು ಅತ್ಯಂತ ಸಂತೋಷವಾಗಿದೆ ಎಂದರು.

ನಾವೆಲ್ಲರೂ ಸೇರಿ ಅಂದರೆ ನಮ್ಮ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿವರ್ಗ, ಮಾಧ್ಯಮಗಳು ಹಾಗೂ ಸಾರ್ವಜನಿಕರ ಎಲ್ಲರೂ ಕೈಜೋಡಿಸುವ ಮೂಲಕ ಶಿವಮೊಗ್ಗವನ್ನು ಮತ್ತಷ್ಟು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸೋಣವೆಂದರು.

ನನ್ನ ಮೊದಲ ಆದ್ಯತೆ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ತಡೆಗಟ್ಟುವುದು ಎಂದರು. ಯಾರೇ ಸಂತ್ರಸ್ತರು ಪೊಲೀಸ್ ಠಾಣೆಗೆ ಆಗಮಿಸಿದರೆ ಅವರಿಗೆ ಮೊದಲು ಗೌರಯುತವಾಗಿ ನಡೆದುಕೊಳ್ಳುವುದು ನಮ್ಮ ಆದ್ಯತೆ ಎಂದರು.

ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಿಗೆ ಶೀಘ್ರದಲ್ಲಿ ಭೇಟಿ ನೀಡುವ ಮೂಲಕ ಜಿಲ್ಲೆಯ ಸಂಪೂರ್ಣ ಸಮಗ್ರ ಚಿತ್ರಣ ಪಡೆಯುತ್ತೇನೆ ಎಂದರು. ಸದ್ಯದ ಮಟ್ಟಿಗೆ ನಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಮಾಹಿತಿ ಪಡೆದಿದ್ದೇನೆ .ಸಾರ್ವಜನಿಕ ಶಾಂತಿ ನೆಮ್ಮದಿ ಕಾಪಾಡುವುದು ನನ್ನ ಮೊದಲ ಆದ್ಯತೆ ಆಗಿರಲಿದೆ ಎಂದರು.

ಶೀಘ್ರದಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ವಾಟ್ಸಾಪ್ ಚಾನೆಲ್ ಪ್ರಾರಂಭ ಮಾಡುತ್ತೇವೆ ಅದನ್ನು “ಪಬ್ಲಿಕ್ ಐ”(PUBLIC EYE) ಎಂಬ ಹೆಸರನ್ನು ಇಡುತ್ತೇವೆ.ಈ ಮೂಲಕ ಜಿಲ್ಲೆಯ ನಾಗರಿಕರು ಯಾವದೇ ರೀತಿಯ ಸಮಸ್ಯೆಗಳನ್ನು ಈ ವಾಟ್ಸಾಪ್ ಚಾನೆಲ್ ನಲ್ಲಿ ತಿಳಿಸಬಹುದಾಗಿದೆ. ಈ ಒಂದು ವಾಟ್ಸಪ್ ಗೆ ಮಾಧ್ಯಮದವರು ಕೂಡ ಸಹಕರಿಸಿ ಎಂದರು.

ಮುಂದುವರೆದು ಮಾತನಾಡಿದ ಅವರು ನಶೆ ಮುಕ್ತ ಶಿವಮೊಗ್ಗ ಇದು ನಮ್ಮ ಧ್ಯೇಯ ಆಗಿದೆ ಎಂದರು.ಎಲ್ಲಿವರೆಗೂ ಡ್ರಗ್ಸ್ ಗೆ ಬೇಡಿಕೆ ಇರತ್ತೋ ಅಲ್ಲಿವರೆಗೂ ಸಪ್ಲೈ ಇರತ್ತೆ ಹಾಗಾಗಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಮಾದಕ ವಸ್ತುಗಳಿಂದ ಆಗುವ ತೊಂದರೆಗಳನ್ನು ಮನದಟ್ಟು ಮಾಡಿಸುವುದು ಹಾಗೂ ಈಗಾಗಲೇ ವ್ಯಾಸನ ಆಗಿರುವವರಿಗೆ Rehabilitation ಕೇಂದ್ರಗಳಿಂದ ವ್ಯಸನ ಮುಕ್ತರನ್ನಗಿಸುವುದು ಎಂದರು. ಯಾವಾಗ ಬೇಡಿಕೆ ಇರುವುದಿಲ್ಲ ಆಗ ಮಾದಕ ವಸ್ತು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾವು ವ್ಯಾಸನ ಮಾಡಿಕೊಳ್ಳದಂತೆ ಯುವ ಸಮುದಾಯವನ್ನು ತಡೆಯುವ ನಿಟ್ಟಿನಲ್ಲಿ ಕರ್ತವ್ಯ ಮಾಡುತ್ತೇವೆ ಎಂದಿದ್ದಾರೆ.

ಸನ್ಮಿತ್ರ ಕಾರ್ಯಕ್ರಮ ಈಗಾಗಲೇ ರಾಜ್ಯಾಧ್ಯತ ಚಾಲ್ತಿಯಲ್ಲಿದೆ ಎಂದರು.ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗ ಇಡುವುದು ಹಾಗೂ ಯುವಕರು ಹೆಚ್ಚಿನದಾಗಿ ಹೇಗೆಲ್ಲ ಸಾಮಾಜಿಕ ಜಾಲತಾಣ ದುರುಪಯೋಗಕ್ಕೆ ಒಳಗಾಗುತ್ತಾರೆ ಎಂಬೆಲ್ಲ ಇತ್ಯಾದಿ ವಿಚಾರಗಳನ್ನು ಗಮನಿಸುತ್ತೆವೆ ಹಾಗೆಯೇ ಅದರಿಂದ ಆಗುವ ದುಶ್ಪರಿಣಾಮಕ್ಕೆ ನಿಯಂತ್ರಣ ತರುತ್ತೇವೆ ಎಂದಿದ್ದಾರೆ.

ಬಹು ಮುಖ್ಯವಾಗಿ ರಸ್ತೆ ಸುರಕ್ಷತೆ ಹಾಗೂ ಸಾವು ನೋವುಗಳು ಆಗದಂತೆ ತಡೆಯುವುದು ಒಂದು ಜೀವದ ಬೆಲೆ ಅತ್ಯಂತ ಮುಖ್ಯವಾಗಿರಲಿದೆ ಹಾಗಾಗಿ ಇದರ ಕುರಿತಾಗಿ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಎಲ್ಲರೂ ಒಟ್ಟಾಗಿ ಅಪಘಾತ ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತೇವೆ ಎಂದರು. ಒಂದು ಜೀವ ಉಳಿಸುವ ಕಾರ್ಯಕ್ಕಿಂತ ಮತ್ತೊಂದು ಮಿಗಿಲಾದದ್ದು ಯಾವದು ಶ್ರೇಷ್ಠ ಅನಿಸುವುದಿಲ್ಲವೆಂದರು.

ಹಾಗೆಯೇ ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುತ್ತಾರೆ ಎಂಬ ಕಾರಣಕ್ಕೆ ಹೆಲ್ಮೆಟ್ ಬಳಸುತ್ತಿದ್ದೇವೆ ಎಂದು ಭಾವಿಸಬೇಡಿ ನಿಮಗಾಗಿ ನಿಮ್ಮ ಪ್ರೀತಿಯ ಕುಟುಂಬ ಮನೆಯಲ್ಲಿ ಕಾಯುತ್ತ ಇರುತ್ತಾರೆ ಹಾಗಾಗಿ ಹೆಲ್ಮೆಟ್ ಬಳಸುವ ಮುಲಕ ಜೀವ ಮುಖ್ಯ ಅನ್ನುವುದನ್ನ ಮನದಟ್ಟು ಮಾಡಿಕೊಂಡು ವಾಹನ ಚಲಾಯಿಸಿ ಎಂದು ಕಿವಿ ಮಾತು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ಸೌಹಾರ್ದಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ಕೊನೆಯಲ್ಲಿ ಜಿಲ್ಲೆಯ ನಾಗರೀಕರಿಗೆ ಎಸ್ಪಿ ನಿಖಿಲ್ ಅವರು ಸೂಚನೆ ಏನಂದರೆ ಪೊಲೀಸ್ ಅಂದರೆ ಭಯ ಬೇಡ ಪೊಲೀಸ್ ಅಂದರೆ ಭರವಸೆ ಇರಲಿ!

ಮತ್ತೊಮ್ಮೆ ಎಲ್ಲರೂ ಕೈ ಜೋಡಿಸುವದು ಮೂಲಕ ಜಿಲ್ಲೆಯನ್ನು ಮಾದರಿ ಶಿವಮೊಗ್ಗವಾಗಿ ಮಾಡೋಣ ಎಂದರು.

Author