ಕಲ್ಬುರ್ಗಿ,ಜೈಲಿನೊಳಗೆ ಆರ್. ಡಿ. ಪಾಟೀಲ್ ಮಾತನಾಡಿದ ವಿಡಿಯೋ ವೈರಲ್ ಹಿನ್ನಲೆಯಲ್ಲಿ ಜೈಲು ಅಧೀಕ್ಷಕಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಸೆಂಟ್ರಲ್ ಜೈಲಿನಿಂದ ಬೇರೆಡೆ ಶಿಫ್ಟ್ ಮಾಡುವಂತೆ ಪತ್ರ ಬರೆದ ಸೆಂಟ್ರಲ್ ಜೈಲ್ ಅಧೀಕ್ಷಕಿ ಡಾ. ಅನಿತಾ ವಿರುದ್ಧ ಆರ್ ಡಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಜೈಲು ಅಧೀಕ್ಷಕಿ ಡಾ. ಅನಿತಾ ವಿರುದ್ಧ 10 ಲಕ್ಷ ರೂಪಾಯಿ ಡಿಮ್ಯಾಂಡ್ ಆರೋಪ ಮಾಡಿದ್ದಾರೆ. ಜೈಲಿನ ಇತರೆ ಅಧಿಕಾರಿಗಳ ಎದರು ಜೈಲು ಅಧೀಕ್ಷಕಿ ಲಂಚ ಬೇಡಿರುವ ಬಗ್ಗೆ ನೇರವಾಗಿ ತಿಳಿಸಿರುವ ಆರ್. ಡಿ. ಪಾಟೀಲ್ ಹಣ ನೀಡದಿದ್ದಲ್ಲಿ ಬ್ಯಾರಕ್ ನಿಂದ ಸೆಲ್ ಗೆ ಹಾಕೋದಾಗಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಪಿಎಸ್ಐ ಪರೀಕ್ಷೆ ಹಗರಣದ ಆರೋಪಿಯಾಗಿದ್ದ ಆರ್. ಡಿ. ಪಾಟೀಲ್ ಈಗ ಡಾ. ಅನಿತಾ ಆರೋಪ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಆರ್. ಡಿ. ಪಾಟೀಲ್ ಸದ್ಯ ಆರ್. ಡಿ. ಪಾಟೀಲ್, ರನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಪತ್ರ ಬರಿದೆರುವ ಜೈಲು ಅಧೀಕ್ಷಕಿ ಅನಿತಾ ವಿರುದ್ದವೇ ಈಗ ಆರೋಪ ಕೇಳಿಬಂದಿದೆ.
ಕಳೆದ ಒಂದೇ ತಿಂಗಳಲ್ಲಿ ಆರ್. ಡಿ. ಪಾಟೀಲ್ ಮೇಲೆ ಎರಡು FIR ದಾಖಲಾಗಿದೆ.ಈ ಹಿನ್ನಲೆಯಲ್ಲಿ 10 ಲಕ್ಷ ಹಣ ಬೇಡಿಕೆ ಈಡೇರಸದಿದಕ್ಕೆ ನನ್ನನ್ನು ಟಾರ್ಗೆಟ್ ಮಾಡಿ Torture ಕೊಡುತ್ತಿದ್ದಾರೆ ಎಂದು ಆರೋಪಿಸಿ ಆರ್.ಡಿ. ಪಾಟೀಲ್ ಆರೋಪ ಮಾಡಿದ್ದರೆ.
ಜೈಲು ಅಧೀಕ್ಷಕಿ ಡಾ. ಅನಿತಾ ಪಾಟೀಲ್ ಬಿಗಿ ಕ್ರಮದ ನಡುವೆಯೂ ಬಿಂದಾಸ್ ಆಗಿ ಬಳಕೆಯಾಗುತ್ತಿರುವ ಮೊಬೈಲ್ ಫೋನ್ ಹಾಗೂ ಇತರೆ ಜೈಲಿನ ಇತರೆ ಅಧಿಕಾರಿಗಳು ಜೊತೆಗೆ ಮಾತನಾಡುತ್ತಿರುವ ವಿಡಿಯೋ ಮಾಡಿರುವದೇ, ಜೈಲಿನಲ್ಲಿ ಮೊಬೈಲ್ ಬಿಂದಾಸಾಗಿ ಬಳಕೆ ಆಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಜೈಲು ಅಧೀಕ್ಷಕಿ ಡಾ.ಅನಿತಾ ಪಾಟೀಲ್ ಅವರ ಕರಾರುವಾಕ್, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಜೈಲಿನಲ್ಲಿರುವ ಈ ರೀತಿಯ ಆರೋಪಿಗಳಿಗೆ ಸಹಿಸಲು ಸಾಧ್ಯವಾಗದೆ ಖಡಕ್ ನಿಷ್ಠಾವಂತ ಪ್ರಾಮಾಣಿಕ ದಕ್ಷ ಅಧಿಕಾರಿಯಾದ ಡಾ. ಅನಿತಾ ಅಂತವರ ಪ್ರಾಮಾಣಿಕ ಕೆಲಸಕ್ಕೆ ಆರೋಪಿಸುವ ಮೂಲಕ ಪ್ರಾಮಾಣಿಕ ಅಧಿಕಾರಿಗಳನ್ನು ಕುಗ್ಗಿಸುವಂತ ಕೆಲಸ ಮಾಡಿತ್ತಿರುವುದು ವಿಷಾದನೀಯ ಸಂಗತಿಯಾಗಿದೆ.



