ನಿಮ್ಮ ‘ಇ-ಕನ್ನಡ ನ್ಯೂಸ್‘ ಹೊಸ ನ್ಯೂಸ್ ಚಾನೆಲ್ ಆರಂಭವಾಗುತ್ತಿರುವ ಈ ವಿಶೇಷ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
ನಿಮ್ಮ ಈ ಕ್ಷೇತ್ರದಲ್ಲಿ ಸತ್ಯ, ನೈತಿಕತೆ ಮತ್ತು ಜನಸೇವೆಯ ಮೌಲ್ಯಗಳನ್ನು ಕಾಪಾಡುತ್ತಾ, ನಿಮ್ಮ ಚಾನೆಲ್ ಸಮಾಜಕ್ಕೆ ಬೆಳಕು ನೀಡುವ ಜವಾಬ್ದಾರಿಯುತ ಧ್ವನಿಯಾಗಿ ಬೆಳೆದುಕೊಳ್ಳಲಿ ಎಂಬುದು ನನ್ನ ಮನದಾಳದ ಆಶಯ.
ನಿಖರವಾದ ಸುದ್ದಿ, ಸಮತೋಲನಯುತ ವರದಿ ಹಾಗೂ ನಿರ್ಮಾಣಾತ್ಮಕ ಚರ್ಚೆಗಳ ಮೂಲಕ ಜನಮಾನಸಕ್ಕೆ ವಿಶ್ವಾಸಾರ್ಹ ಮಾಹಿತಿ ತಲುಪಿಸಲಿ. ನಿಮ್ಮ ತಂಡದ ಪರಿಶ್ರಮ, ದೃಢಸಂಕಲ್ಪ ಹಾಗೂ ನೀತಿಪರವಾದ ಕಾರ್ಯಶೈಲಿ ಯಶಸ್ಸಿನ ಹೆಜ್ಜೆ ಗುರುತು ಮೂಡಿಸಲಿ.

ಹೊಸ ಪ್ರಯಾಣಕ್ಕೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು.ನಿಮ್ಮ ನ್ಯೂಸ್ ಚಾನೆಲ್ ರಾಜ್ಯ,ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದು ಜನಪ್ರಿಯವಾಗಲಿ ಎಂದು ಹಾರೈಸುತ್ತೇನೆ ಎಂದು ಮೈಸೂರು ಜಿಲ್ಲೆಯ ಶಿಕ್ಷಕರು ಹಾಗೂ ಓದುಗರಾದ ವಾಸುದೇವಮೂರ್ತಿ ಎಸ್ ಅವರು ಹಾರೈಸಿದ್ದಾರೆ.
ಈ ಮೂಲಕ ನಿಮ್ಮ ಶುಭ ಹಾರೈಕೆಗೆ ನಮ್ಮಿಂದ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ.



