ಶಿವಮೊಗ್ಗ | ಷಡಕ್ಷರಿಯವರ ಸರ್ಕಾರಿ ವಸತಿ ಗೃಹ ತೆರವುಗೊಳಿಸುವಂತೆ, ಕಾಂಗ್ರೆಸ್ ನ ಶಿವಕುಮಾರಿಂದ, ಜಿಲ್ಲಾಧಿಕಾರಿಗೆ ದೂರು

ಶಿವಮೊಗ್ಗ

ಶಿವಮೊಗ್ಗ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಪ್ರಸ್ತುತ ಬಸವನಗುಡಿಯ ಸರ್ಕಾರಿ ವಸತಿ ಗೃಹದಲ್ಲಿ ವಾಸವಿದ್ದು.

ಆದರೆ ಸುಮಾರು 3 ವರ್ಷಗಳ ಹಿಂದೆಯೇ ಶಿವಮೊಗ್ಗ ಜಿಲ್ಲೆಯಿಂದ ಬೇರೆ ಕಚೇರಿಗೆ ವರ್ಗಾವಣೆಯಾಗಿರುತ್ತಾರೆ, ಹೀಗಿದ್ದು ಸರ್ಕಾರಿ ವಸತಿ ತೆರವುಗೊಳಿಸದೇ ವಾಸ್ತವ್ಯ ಮುಂದುವರೆಸಿರುವ ಕುರಿತು ಶಿವಮೊಗ್ಗ ಕಾಂಗ್ರೆಸ್ ನಾರ್ತ್ ಬ್ಲಾಕ್ ಅಧ್ಯಕ್ಷ ಶಿವಕುಮಾರ್ ಆರೋಪಿಸಿ ಸೂಕ್ತ ಕ್ರಮ ಜರುಗಿಸುವ ಮೂಲಕ ಸರ್ಕಾರಿ ವಸತಿ ಗೃಹ ಖಾಲಿ ಮಾಡಿಸುವಂತೆ ನಿನ್ನೆ ದಿವಸ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಸರ್ಕಾರಿ ವಸತಿ ಗೃಹ ಬಸವನಗುಡಿಯಲ್ಲಿ ಇನ್ನು 6 ಸರ್ಕಾರಿ ವಸತಿ ಗೃಹ ಖಾಲಿ ಇದೆ ಎಂಬ ಮಾಹಿತಿಯಾಗಿದೆ.

ಆದರೆ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಇನ್ನು ವಸತಿ ಪಡೆದಿಲ್ಲ, ಇದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಇನ್ನು ನಿಯೋಜನೆ ಮಾಡಿಲ್ಲ ಎಂಬ ಪ್ರಶ್ನೆ ಎದ್ದಿದ್ದೆ?

ಇದರೊಟ್ಟಿಗೆ ಷಡಕ್ಷರಿ ಅವರ ವಸತಿ ಗೃಹ ಮೇಲೆಯೇ ಮಾತ್ರ ಯಾಕೆ ಕಣ್ಣು ಬಿದ್ದಿದೆ? ಇದರಲ್ಲಿ ರಾಜಕೀಯ ನಡೆಯುತ್ತಿದ್ದೀಯ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಲ್ಲಿ ಮೂಡಿದೆ!

Author