ಶಿವಮೊಗ್ಗ | ಭಾಷೆ ಬಳಕೆಯಿಂದ ಸಂವರ್ಧನೆ : ಗೊ.ರು.ಚನ್ನಬಸಪ್ಪ

ಶಿವಮೊಗ್ಗ

ಶಿವಮೊಗ್ಗ (ಶಂಕರಘಟ್ಟ),ಭಾಷೆಯನ್ನು ಎಲ್ಲಾ ವಲಯಗಳಲ್ಲಿ ಕ್ರಿಯಾಶೀಲವಾಗಿ ಬಳಸಿಕೊಳ್ಳಬೇಕು, ಭಾಷೆಯನ್ನು ಬಳಸುತ್ತಾ ಹೋದಂತೆ ಅದು ಅಭಿವೃದ್ಧಿಯಾಗುತ್ತಾ ಹೋಗುತ್ತದೆ ಎಂದು ಖ್ಯಾತ ಸಾಹಿತಿ ಗೋರು ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದ ಸಾಹಿತ್ಯಸಂಘದ ವತಿಯಿಂದ ಇಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಭಾಷೆಗೆ ಸಮೃದ್ಧವಾದ ಇತಿಹಾಸವಿದೆ. ಹಣ ಬಳಸಿದರೆ ಖರ್ಚಾಗುತ್ತದೆ. ಭಾಷೆ ಬಳಸಿದರೆ ಸಂವರ್ಧನೆ ಆಗುತ್ತದೆ ಎಂದು ತಿಳಿಸಿದರು.ಪ್ರತಿ ವ್ಯಕ್ತಿಯಲ್ಲಿಯೂ ಸಂಸ್ಕಾರವಿರುತ್ತದೆ. ಇದಕ್ಕೆ ಜಾನಪದ ತಳಹದಿಯಾಗಿದೆ. ಜಾನಪದ ಜೀವನ ಉಸಿರಾಗಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಪ್ರಶಾಂತ ನಾಯಕ, ಪ್ರೊ. ಬಸವರಾಜ ನೆಲ್ಲಿಸರ ಉಪಸ್ಥಿತರಿದ್ದರು. ಡಾ. ಪುರುಷೋತ್ತಮ ಪ್ರಾರ್ಥನೆ ಮಾಡಿದರು. ನವೀನ್ ಮಂಡಗದ್ದೆ ನಿರೂಪಿಸಿದರು.

Author