ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದಕ್ಷಿಣ ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ವಿಭಾಗ ಆಹಾರ ಗುಣಮಟ್ಟದ ಪೂರೈಕೆ ಸಮಿತಿ ಸದಸ್ಯರಾಗಿ ಶಿವಮೊಗ್ಗದಿಂದ ಸ್ಟೇಲ್ಲಾ ಮಾರ್ಟಿನ್ ನೇಮಕ

ಶಿವಮೊಗ್ಗ

ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ವಿಭಾಗದ ಹಾಸ್ಟೆಲ್‌ಗಳಲ್ಲಿ ಆಹಾರ ಗುಣಮಟ್ಟದ ಪೂರೈಕೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಲು, ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಮಿತಿಯ ಕಾರ್ಯವ್ಯಾಪ್ತಿಯೊಂದಿಗೆ ಈ ಕೆಳಕಂಡಂತೆ ಸಮಿತಿಯನ್ನು ರಚಿಸಿ, ಆದೇಶಿಸಿದೆ.

ಅದರಂತೆ, ಶ್ರೀಮತಿ ಬಲ್ಕಿಸ್ ಬಾನು, ಮಾನ್ಯ ಶಾಸಕರು, ವಿಧಾನ ಪರಿಷತ್ ಅವರು ಅಧ್ಯಕ್ಷರಾಗಿರುತ್ತಾರೆ ಹಾಗೂ ಶಿವಮೊಗ್ಗದಿಂದ ಸದಸ್ಯರಾಗಿ ಸ್ಟೇಲ್ಲಾ ಮಾರ್ಟಿನ್ ಅವರು ಆಯ್ಕೆ ಆಗಿರುತ್ತಾರೆ.

Author