ಹಾವೇರಿ | ಸಚಿವ ಜಮಿರ್ ಅಹ್ಮದ್ ಪುತ್ರನಿಂದ ಸ್ಪೋಟಕ ಮಾಹಿತಿ ; ನಟ ದರ್ಶನ್ ಅವರಿಗೆ ಜನವರಿಯೊಳಗೆ ಜಾಮೀನು ದೊರೆಯತ್ತೆ

ಹಾವೇರಿ

ಹಾವೇರಿಯಲ್ಲಿ ಕಲ್ಟ್ ಸಿನಿಮಾ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಪುತ್ರ ನಟ ಜೈದ್ ಖಾನ್ ಜನವರಿ 23ನೆ ತಾರೀಕು ಒಳಗೆ ದರ್ಶನ್ ಅಣ್ಣ ಅವರಿಗೆ ಜಾಮೀನು ಸಿಗದಿದ್ದರೆ ಜೈಲಿಗೆ ಹೋಗಿ ದರ್ಶನ್ ಅವರ ದರ್ಶನ ತೆಗೆದುಕೊಂಡು ಬರುತ್ತೇನೆ ಎಂದರು.

ಮುಂದುವರೆದು ಮಾತನಾಡಿದ ಅವರು ಡೆವಿಲ್ ಸಿನಿಮಾ ತುಂಬಾ ಚೆನ್ನಾಗಿದೆ ಹಾಗೂ ಡೆವಿಲ್ ಸಿನಿಮಾ ನೋಡಿ ನಾನು ಕಲಿತಿಕೊಂಡಿದ್ದು ಏನಂದರೆ ನಮ್ಮ ಸಿನಿಮಾ ಕಥೆ ಹೇಗೆ ಇರಲಿ ಆದರೆ ದರ್ಶನ್ ಎಂಬ ಹೆಸರಿಂದ ಸಿನಿಮಾ ಸಕ್ಸಸ್ ಆಗಲಿದೆ ಎಂದರು.

ಸಚಿವ ಜಮೀರ್ ಅಹ್ಮದ್ Controversial ಹೇಳಿಕೆಗಳಿಂದ ನಿಮ್ಮ ಸಿನಿಮಾ ಮೇಲೆ ಎಫೆಕ್ಟ್ ಆಗಿದ್ದೀಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಹೌದು ಖಂಡಿತ ಆಗಿದೆ ಎಂದು ಒಪ್ಪಿಕೊಂಡರು. ಹಾಗೂ ಅವರ ಹೇಳಿಕೆಗಳಿಂದ ನಮ್ಮ ಸಿನಿಮಾ ಬೈಕಾಟ್ ಮಾಡಿದ್ದರು ಎಂದರು.

ಮನಸ್ಸಲ್ಲಿ ಸಾಕಷ್ಟು ವಿಚಾರವಿದೆ ಅದನ್ನೆಲ್ಲಾ ಈಗ ಹೇಳಲು ಆಗುವುದಿಲ್ಲವೆಂದರು.ಹಾಗಾಗಿ ನಾವು ಗೆದ್ದ ಮೇಲೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಸಿನಿಮಾ ಪೈರಸಿ ಕುರಿತು ಮಾತನಾಡಿದ ಅವರು ಇದರ ಸಂಬಂಧ ಕಾಯ್ದೆ ರೂಪಿಸಬೇಕಾ ಎಂಬ ಪ್ರಶ್ನೆಗೆ ಮಾಡುವುದಾದರೆ ಮಾಡಲಿ ಸಂತೋಷ ಇಲ್ಲವಾದರೆ ಬಿಡಿ.

ಆದರೆ ಅಪ್ಪಿತಪ್ಪಿ ಸಿಕ್ಕುಹಾಕಿಕೊಂಡರೆ ಬಿಡುವುದಿಲ್ಲ ಹಾಗಾಗಿ ಹುಷಾರು ಎಂದು ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದರು.

Author