ಶಿವಮೊಗ್ಗ, ಎಸ್ಎಸ್ಎಲ್ಸಿ ಮಕ್ಕಳಿಗಾಗಿ ಡಿಸೆಂಬರ್ 13ರ ಬೆಳಗ್ಗೆ 9.30ಕ್ಕೆ “ಪರೀಕ್ಷೆ ಒಂದುಹಬ್ಬ ಸಂಭ್ರಮಿಸಿ” ಎಂಬ ಕಾರ್ಯಕ್ರಮವನ್ನು .ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಗಂಗೋತ್ರಿ ಪಿ ಯು ಕಾಲೇಜಿನ ಚೇರ್ಮನ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟನೆ ಮಾಡುತ್ತಿದ್ದು, ಅಧ್ಯಕ್ಷತೆಯನ್ನು ನಾನು ವಹಿಸುತ್ತಿದ್ದೇನೆ. ಮುಖ್ಯ ಎಸ್.ಆರ್.ಮಂಜುನಾಥ್, ಮ್ಯಾಮ್ ಕೋಸ್ ವ್ಯವಸ್ಥಪಕ ನಿರ್ದೇಶಕರಾದ ಶ್ರೀಕಾಂತ ಬರುವೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್,ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಹೇಮಂತ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಅನನ್ಯ ವಿದ್ಯಾಪೀಠದ ಕಾರ್ಯದರ್ಶಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದvಅಧ್ಯಕ್ಷ ಗಿರೀಶ್ ಮತ್ತು ವ್ಯಕ್ತಿತ್ವ ವಿಕಸನ ಗುರು ಚೇತನ್ ರಾಮ್ ಉಪಸ್ಥಿತರಿರುತ್ತಾರೆ ಎಂದರು.
1500 ಮಕ್ಕಳಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಚೇತನ್ ರಾಮ್ ಪರೀಕ್ಷೆಯ ಸವಾಲುಗಳು ಕುರಿತುಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 1.30 ರಿಂದ ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ, ಪರೀಕ್ಷೆಯಲ್ಲಿ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ ಎಂಬುದರ ಕುರಿತು ಮಾತನಾಡಲಿದ್ದಾರೆ.
ಅನಂತರದಲ್ಲಿ ಚೇತನ್ ರಾಮ್ ಅವರು ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಎಂಬುದರ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿbಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಕಚೇರಿಯ ಶೈಕ್ಷಣಿಕ ವಿಭಾಗದ ಉಪನಿರ್ದೇಶಕ ಜಿ ವಿ ಹರಿಪ್ರಸಾದ್ ಪರಿಕ್ಷೆಯ ರೂಪುರೇಶೆಗಳ ಬಗ್ಗೆ ಮಾತನಾಡುತ್ತಾರೆ ಎಂದರು.



