ಶಿವಮೊಗ್ಗ ನಗರದ ಮಿಳ್ಘಟ್ಟ ಮುಖ್ಯ ರಸ್ತೆಯ ಅಣ್ಣ ನಗರ 4ನೆ ತಿರುವಿನ ಕಾರ್ನರ್ ಜಾಗದಲ್ಲಿ ಸ್ಥಳೀಯರು ತಿಳಿಸುವ ಪ್ರಕಾರ ಸುಮಾರ್ 40×70 ಖಾಲಿ ಸೈಟ್ ನಲ್ಲಿ ಒಂದು ವಾಣಿಜ್ಯ ಕಟ್ಟಡ ಕಾಮಗಾರಿ ಆಗುತ್ತಿದೆ. ಅಕ್ಕಪಕ್ಕದ ಸ್ಥಳೀಯ ನಿವಾಸಿಗಳು ಈ ಜಾಗವು ಶಿವಮೊಗ್ಗದ ಖ್ಯಾತ ಗುರುಗಳು ಎಂದು ಪ್ರಸಿದ್ದಿ ಪಡೆದಿರುವ ಬೆಜ್ಜವಳ್ಳಿಯ ಸಂತೋಷ್ ಗುರೂಜಿ ಅವರಿಗೆ ಸೇರಿದ ಜಾಗ ಎಂದು ತಿಳಿಸುತ್ತಿದ್ದಾರೆ.
ಈ ಜಾಗದ ಕುರಿತಾಗಿ ಸಾಕಷ್ಟು ವಿಚಾರ ಕೇಳಿಬರುತ್ತಿದೆ.
ಸೈಟ್ ಸಂಪೂರ್ಣ ಜಾಗದಲ್ಲಿ ಕಟ್ಟಡ ನಿರ್ಮಿಸಲು ಮಹಾನಗರ ಪಾಲಿಕೆ ಹೇಗೆ ಅನುಮತಿ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ? ಅದಕ್ಕೆ ಕಾರಣವೇನೆಂದರೆ ವಾಸ್ತವ ವಿಚಾರಕ್ಕೆ ಬರುವುದಾದರೆ ನಗರದ ಮಿಳ್ಘಟ್ಟ ರಸ್ತೆಯು ಅಗಲೀಕರಣ ಆಗುತ್ತಿದೆ ಸದರಿ ರಸ್ತೆಯ ಕಾರ್ನರ್ ನಲ್ಲಿಯೆ ಈ ಸೈಟ್ ಇದೆ. ಹಾಗಾಗಿ ರಸ್ತೆ ಅಗಲೀಕರಣ ಇದ್ದರು ಸಹ ಸಂಪೂರ್ಣ ಜಾಗದ ಅನುಮತಿ ಕುರಿತು ಪ್ರಶ್ನೆ ಸ್ಥಳೀಯರಲ್ಲಿ ಎದ್ದಿದೆ?
ಇದಲ್ಲದೆ ಈ ಕಟ್ಟಡ ಕಾಮಗಾರಿ ಮಾಡುತ್ತಿರುವ ಮೇಸ್ತ್ರಿಯು ರಸ್ತೆಯನ್ನ, ಚರಂಡಿಯನ್ನ ಮುಚ್ಚುವಂತೆ ರಸ್ತೆ ಅಕ್ಕ ಪಕ್ಕ ಜಾಗದಲ್ಲೆಲ್ಲಾ ಮರಳು ಜೆಲ್ಲಿ ಇತ್ಯಾದಿ ಸುರಿದಿದ್ದಾರೆ, ಹಾಗೂ ಸಿಮೆಂಟ್ ಬ್ರಿಕ್ಸ್ ಗಳನ್ನು ಮುಖ್ಯ ರಸ್ತೆಯಲ್ಲಿ ಇಟ್ಟಿದ್ದಾರೆ, ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯರಿಗೆ ಇದರಿಂದ ಓಡಾಡಲು, ತೀವ್ರ ತೊಂದರೆ ಉಂಟಾಗುತ್ತಿದೆ.
ಈ ಸಮಸ್ಯೆ ಕುರಿತಾಗಿ ಹಲವಾರು ಬಾರಿ ಮೇಸ್ತ್ರಿ ಹಾಗೂ ಬೆಜ್ಜವಳ್ಳಿಯ ಸಂತೋಷ್ ಗುರೂಜಿ ಕಾಮಗಾರಿ ವೀಕ್ಷಿಸಲು ಬಂದಾಗ ಸ್ಥಳೀಯರು ತಿಳಿಸಿದರು ಸಹ ಯಾವದನ್ನು ಸರಿಪಡಿಸಿಕೊಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.

ಇದರಿಂದ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ನಮ್ಮ ಇ-ಕನ್ನಡ ಮಾಧ್ಯಮದ ಗಮನಕ್ಕೆ ತಂದಿರುತ್ತಾರೆ.
ಇದರೊಟ್ಟಿಗೆ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆ ಸಹ ಒಡೆದು ಹಾಕಿದ್ದಾಗಿ ದೂರುತ್ತಿದ್ದಾರೆ ಸಾರ್ವಜನಿಕರು.
ಇದರಿಂದ ಚರಂಡಿ ಅಥವಾ ರಾಜಕಾಲುವೆಯಲ್ಲಿ ಕಸ ಮರಳು ಮಣ್ಣು ಸೇರಿಕೊಂಡು ಸರಾಗವಾಗಿ ಹರಿಯಲು ಆಗದೆ ಮುಚ್ಚಿ ಹೋಗಿರುತ್ತೆ.ಇದರಿಂದ ಸಾಂಕ್ರಾಮಿಕ ಕಾಯಿಲೆಗೆ ಅಹ್ವಾನವಾಗಿದೆ.

ಸೈಟ್ ಪಕ್ಕದಲ್ಲಿ ಅಶ್ವಿನಿ ಕ್ಲಿನಿಕ್ ಸಹ ಇದ್ದು ಇಲ್ಲಿಗೆ ಬರುವ ರೋಗಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇದರ ಜೊತೆಗೆ ವಾಣಿಜ್ಯ ಕಟ್ಟಡ ಆಗುತ್ತಿದೆ ಕಟ್ಟಡ ಪೂರ್ಣವಾದ ನಂತರ ಆಸ್ಪತ್ರೆ ಹಾಗೂ ಬ್ಯಾಂಕ್ ಬರಲಿದೆ ಎಂದು ಸ್ಥಳೀಯರು ತಿಳಿಸುತ್ತಿದ್ದಾರೆ.ಆದರೆ ಈ ಕಟ್ಟಡಕ್ಕೆ ಪಾರ್ಕಿಂಗ್ (Cellular Parking) ವ್ಯವಸ್ಥೆಯಿಲ್ಲದೆ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಜನಸಾಮಾನ್ಯರಿಗೆ ಒಂದು ಕಡೆ ಪ್ರತಿನಿತ್ಯ ಸಮಸ್ಯೆಯಾಗುತ್ತಿದ್ದಾರೆ, ಮತ್ತೊಂದು ಕಡೆ ಮಹಾನಗರ ಪಾಲಿಕೆ ವಿರುದ್ಧ ಆರೋಪಗಳು ಕೇಳಿಬರುತ್ತಿದೆ.

ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆಯ ಅಣ್ಣ ನಗರದ ಇಂಜಿನಿಯರ್ ಶ್ರೀಕಾಂತ್ ಅವರನ್ನು ನಮ್ಮ ಇ-ಕನ್ನಡ ಮಾಧ್ಯಮ ಸಂಪರ್ಕಿಸಿದಾಗ, ಮಾಹಿತಿ ಹೇಳಲು ತಡವಡಿಸಿದ ಇಂಜಿನಿಯರ್, ನನ್ನ ಗಮನಕ್ಕೆ ಮಾಹಿತಿಯೇಯಿಲ್ಲ ಹಾಗೂ ಪಕ್ಕದ ವಾರ್ಡ್ ಇಂಜಿನಿಯರ್ ಏನಾದರು ಅನುಮತಿ ಕೊಟ್ಟಿದ್ದಾರಾ? ಎಂದು ನೋಡುತ್ತೇನೆ ಅಂದರು.
ಇದು ನಿಮ್ಮದೇ ವಾರ್ಡ್ ಸಮಸ್ಯೆ ಕುರಿತು ನಿಮ್ಮ ಗಮನಕ್ಕೆ ಮಾಹಿತಿ ಇಲ್ಲವೇ ಎಂಬ ಮರು ಪ್ರಶ್ನೆಗೆ ನಾನು ತ್ವರಿತವಾಗಿ ಸ್ಥಳ ಪರಿಶೀಲನೆ ಮಾಡಿ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಎಂಜಿನಿಯರ್ ಗೆ ಮಾಹಿತಿ ಇಲ್ಲದಾಗಿದ್ದು. ಅನುಮತಿಯೇ ಪಡೆಯದೇ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರಾ? ಈ ಬಗ್ಗೆ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಆಗಲಿದೆಯ? ಮಹಾನಗರ ಪಾಲಿಕೆಯ ಆಯುಕ್ತರು ಈ ಬಗ್ಗೆ ಏನು ಕ್ರಮಕ್ಕೆ ಮುಂದಾಗುತ್ತಾರೆ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ.



