ಶಿವಮೊಗ್ಗ | ರಾಜ್ಯ ಸರ್ಕಾರದ ಬೆಳೆ ವಿಮೆ ಧೋರಣೆ ಕುರಿತು ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಅಂಕಿ ಅಂಶ ಬಿಡುಗಡೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲೆಯ ಬೆಳೆ ವಿಮೆ ದೋರಣೆಯ ಬಗ್ಗೆ ತಾಲ್ಲೂಕುವಾರು ಸಮಸ್ಯೆಗಳ ಪಟ್ಟಿ ಮೂಲಕ ಮಾಹಿತಿ ನೀಡಿದ್ದು ಅದರಂತೆ,

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಟ್ಟು ರೈತರು 18,388 ಜಮಾ ಆಗಿರುವ ಮೊತ್ತ 2,196.77 ಲಕ್ಷ ಆಗಿರತ್ತೆ. ಅದರಂತೆ ತೀರ್ಥಹಳ್ಳಿ ತಾಲ್ಲೂಕು ಅತೀ ಹೆಚ್ಚು ಮಳೆ ಬಿಳುವ ಪ್ರದೇಶವಾಗಿದ್ದು, ಕುಡುಮಲ್ಲಿಗೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಳೆ ವಿಮೆಯು 0 ಬಂದಿದ್ದು ಯಾವ ಆಧಾರದ ಮೇಲೆ ಪರಿಗಣಿಸಿರುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಗ್ರಾಮ ಪಂಚಾಯ್ತಿಯ ಮಳೆಮಾಪನಗಳಲ್ಲಿ ಕುಂದು ಕೊರತೆ ಸರಿಪಡಿಸುವುದು ಹಾಗೂ ಎಲ್ಲಾ ಗ್ರಾಮ ಪಂಚಾಯ್ತಿಯಲ್ಲಿ ಮಳೆ ಮಾಪನಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಕೊರಿದ್ದಾರೆ.

ಹೊಸನಗರ ತಾಲ್ಲೂಕಿನ ಒಟ್ಟು ರೈತರು 9,869 ಜಮಾ ಆಗಿರುವ ಮೊತ್ತ421.02 ಲಕ್ಷ ಆಗಿದೆ.ಸಾಗರ ತಾಲ್ಲೂಕಿನ ಒಟ್ಟು ರೈತರು 13,641ಜಮಾ ಮೊತ್ತ 963.69 ಲಕ್ಷ ಗ್ರಾಮ ಪಂಚಾಯ್ತಿಯ ಮಳೆಮಾಪನಗಳಲ್ಲಿ ಕುಂದು ಕೊರತೆ ಸರಿಪಡಿಸುವುದು ಹಾಗೂ ಎಲ್ಲಾ ಗ್ರಾಮ ಪಂಚಾಯ್ತಿಯಲ್ಲಿ ಮಳೆ ಮಾಪನಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.ಮೇ ತಿಂಗಳ ಅತ್ಯಂದೊಳಗೆ ಜಿಲ್ಲೆಯ ಎಲ್ಲಾ ಮಳೆ ಮಾಪನಗಳನ್ನು ಸೇವೆಯಲ್ಲಿರುವುದನ್ನು ಕಡ್ಡಾಯವಾಗಿ ಖಾತರಿಗೊಳಿಸಬೇಕು.ಮಳೆ ಹೆಚ್ಚು ಆಗಿರುವ ಗ್ರಾಮ ಪಂಚಾಯ್ತಿಯ ಮಳೆ ವರದಿಯನ್ನೆ ಎಲ್ಲಾ ಪಂಚಾಯ್ತಿಗಳಲ್ಲಿ ಕಡ್ಡಾಯಗೊಳಿಸಬೇಕು. 2 ಕೀ ಮೀ ವ್ಯಾಪ್ತಿಯಲ್ಲಿರುವ ಪಂಚಾಯ್ತಿಯ (ARIEL ವಿವ್)ಪರಿಗಣಿಸದೆ 70 ಕೀ మిల ಸುತ್ತಳತೆಯ ಮಳೆಯ ನಿಖರತೆಯನ್ನು ನಿಗಧಿ ಪಡಿಸಿರುವು ಅವೈಜ್ಞಾನಿಕವಾಗಿರುತ್ತದೆ ಎಂದು ಆರೋಪಿಸಿದ್ದಾರೆ. ಇದು ಹೊಸನಗರ ಭಾಗದಲ್ಲಿ ಕಂಡು ಬಂದಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಹೊಸನಗರ ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯ್ತಿಯಲ್ಲಿ ಗುಂಟೆಗೆ 0 ಯ ವಿಮೆ ಬಂದಿದ್ದು, ಜೇನಿ 3.70 ಪೈಸೆ ನೀಡಿರುತ್ತಿರಿ. ಹಾಗೇ ಸುಳುಗೋಡು ಪಂಚಾಯ್ತಿ ವ್ಯಾಪ್ತಿಯಲ್ಲಿ 900 ಗುಂಟೆಗೆ ನೀಡಿದ್ದು, ಅವೈಜ್ಞಾನಿಕ ಎಂದು ಪರಿಗಣಿಸುತ್ತದೆ ಎಂದು ತಿಳಿಸಿದ್ದಾರೆ.ಸೊರಬ ತಾಲ್ಲೂಕಿನ ಒಟ್ಟು ರೈತರು 21,327 ಜಮಾ ಆಗಿರುವ ಮೊತ್ತ 3456.07 ಲಕ್ಷ ಹಾಗೂಹಾನಿಗೊಳಗಾದ ಮೆಕ್ಕೆ ಜೋಳ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಿಂದ ಬೆಳೆ ಪೂರ ಹಾಳಾಗಿದ್ದು, 2 ದಿನ ತಿಂಗಳ ನಂತರ ಹಾಳದ ಬೆಳೆ ಪರಿಶಿಲನೆ ಮಾಡಿ ಅದನ್ನು ಖಾಲಿ ಬೀಳು ಜಾಮೀನು ಎಂದು ಪರಿಗಣಿಸಿದ್ದು, ರೈತರಿಗೆ ಬೆಳೆ ವಿಮೆ ನೀಡಲು ತಾರತಮ್ಯವಾಗಿರುತ್ತದೆ ಎಂದು ಆರೋಪಿಸಿದ್ದಾರೆ.

ಸ್ಯಾಟಲೈಟ್ ಸರ್ವೆಯನ್ನು ಬೆಳೆ ಬೆಳೆದಿರುವ ಮೊದಲೇ ಅವರೇ ಮುಂಚಿತವಾಗಿ ನಿಗಧಿ ಪಡಿಸಿದ ಜಾಗದಲ್ಲಿ ಸರ್ವೇ ಮಾಡಲಾಗುತ್ತಿದ್ದು ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಒಟ್ಟು ರೈತರು 15192ಜಮಾ ಆಗಿರುವ ಮೊತ್ತ 2234.38 ಲಕ್ಷ,ಸತತ ಮೇ ತಿಂಗಳಿನಿಂದ ಅತಿ ಹೆಚ್ಚು ಮಳೆಗೆ ಹಾನಿಯಾಗಿ ತೊಂದರೆ ಅನುಭವಿಸಿದ್ದು, ಕಲ್ಮನೆ ಪಂಚಾಯ್ತಿಯಲ್ಲಿ ಈ ವರ್ಷ ಅತೀ ಹೆಚ್ಚಿನ ಮಳೆಯಾಗಿದ್ದು ಗುಂಟೆ 31 ರೂ ಬೆಳೆ ವಿಮೆ ಪರಿಹಾರ ನೀಡಿರುತ್ತೀರಿ.

ತೊಗರ್ಸಿ ಮತ್ತು ಹರಿಗಿ ಪಂಚಾಯ್ತಿಯ ವ್ಯಾಪ್ತಿಯಲ್ಲಯೂ ಕೂಡ ಕಲ್ಮನೆ ವ್ಯಾಪ್ತಿಯಷ್ಟೆ ಮಳೆಯಾಗಿದ್ದು ಇಲ್ಲಿ ಗುಂಟೆಗೆ 435 ರೂಪಾಯಿಗಳನ್ನು ನೀಡಿರುತ್ತೀರಿ. ಇದನ್ನು ಅವೈಜ್ಞಾನಿಕವಾಗಿ ಪರಿಗಣಿಸಲಾಗುತ್ತದೆ.

ಶಿಕಾರಿಪುರ ಮತ್ತು ಸೊರಬ ಭಾಗದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದು, ಅತಿ ಹೆಚ್ಚಾದ ಮಳೆಯಿಂದ ಸೈನಿಕ ಹುಳು ಭಾದೆ ಮತ್ತು ಬಿಳಿ ತಿಗಣೆ ರೋಗ ಜಾಸ್ತಿಯಾಗಿರುತ್ತದೆ. ಇದರಿಂದ ರೈತರು ಬಹಳ ನಷ್ಟವನ್ನು ಅನುಭವಿಸಿದ್ದು, ಇದಕ್ಕೆ ಯಾವುದೇ ರೀತಿಯ ಬೆಳೆವಿಮೆ ಕ್ಲಾಯಮ್ ಆಗುತ್ತಿಲ್ಲ.

ಭದ್ರಾವತಿ ತಾಲ್ಲೂಕಿನ ಒಟ್ಟು ರೈತರು 3317 ಜಮಾ ಆಗಿರುವ ಮೊತ್ತ 421.02ಶಿವಮೊಗ್ಗ ತಾಲ್ಲೂಕಿನ ಒಟ್ಟು ರೈತರು 7877 ಜಮಾ ಆಗಿರುವ ಮೊತ್ತ 1070.19 ಲಕ್ಷ,

ಶಿವಮೊಗ್ಗ, ಭದ್ರಾವತಿ ಮತ್ತು ಹೊಳೆಹೊನ್ನೂರು ತಾಲ್ಲೂಕುಗಳಲ್ಲಿ ಬ್ಯಾಂಕ್ ಹೊರತು ಪಡಿಸಿ ಕೋಆಪರೇಟಿವ್ ಸೋಸೈಟಯ, ಕರ್ನಾಟಕ ಒನ್, ಸಿ.ಎಸ್.ಸಿ. ಸೆಂಟರ್‌ಗಳಲ್ಲಿ ಬೆಳೆ ವಿಮೆ ಮೊತ್ತವನ್ನು ಪಾವತಿಸಲು ಹೋದಾಗ ಸರ್ವರ್ ಸಮಸ್ಯೆಗಗಳು ಎದ್ದು ಕಾಣಿಸುತ್ತದೆ ಮತ್ತು ಸಾಲ ಇದ್ದ ರೈತರಿಗೆ ಮಾತ್ರ ವಿಮೆ ಮೊತ್ತವನ್ನು ಜಮೆ ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.

ಶಿವಮೊಗ್ಗ, ಭದ್ರಾವತಿ ಮತ್ತು ಹೊಳಡಹೊನ್ನೂರು ಭಾಗದಲ್ಲಿ ಅತಿ ಹೆಚ್ಚು ಶುಂಠಿ ಬೆಳೆಗಾರರಿದ್ದು, ಮಳೆಯಿಂದಾಗಿ ಶುಂಠಿ ಕೊಳೆ ರೋಗ ಬಂದು ನಾಶವಾಗಿರುತ್ತದೆ. ಬೆಳೆ ವಿಮೆ ಅಸರ್ಮಪಕವಾಗಿ ಪರಿಗಣಿಸಿರುತ್ತಾರೆ.

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅತಿವೃಷ್ಠಿಯಿಂದ ಕೊಳೆ ರೋಗ ಎದ್ದು ಕಾಣುತ್ತಿದ್ದು, ಬೆಳೆಯು ಕುಂಠಿತಗೊಂಡಿರುತ್ತದೆ. ಇನ್ಸೂರೆನ್ಸ್ ಕಂಪನಿಯವರು ಅಧಿಕಾರಿಗಳೊಂದಿಗೆ ಶಾಮಿಲಾಗಿರುವ ಬಗ್ಗೆ ದೊಡ್ಡಮಟ್ಟದಲ್ಲಿ ಶಂಕೆ ಇದೆ ಎಂದು ಆರೋಪಿಸಿದ್ದಾರೆ.

ಬೆಳೆ ವಿಮೆ ದೋರಣೆಯ ಬಗ್ಗೆ ತಾಲ್ಲೂಕು ವಾರು ಸಮಸ್ಯೆಗಳ ಮಾಹಿತಿ..ಪ್ರತಿ ವರ್ಷ ಮೇ ತಿಂಗಳ ಅಂತ್ಯದೊಳಗೆ ಜಿಲ್ಲೆಯಲ್ಲಿಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿರುವ ಮಳೆ ಮಾಪನಗಳ ದುರಸ್ತಿಯನ್ನು ಕಡ್ಡಾಯವಾಗಿ ಮಾಡಬೇಕು ಮತ್ತು ಖಾತರಿಗೊಳಿಸಬೇಕು.

ಪ್ರತಿಯೊಬ್ಬ ವಿಮೆ ರೈತರಿಗೂ ಹವಮಾನ ಇಲಾಖೆಯಿಂದ ಬರುವ ಹವಮಾನದ ವ್ಯತ್ಯಸಗಳ ಬಗ್ಗೆ ಕಾಲಕಾಲಕ್ಕೆ ವ್ಯಾಟ್ಸಪ್ ಸಂದೇಶಗಳನ್ನು ಒದಗಿಸಬೇಕು.2 ಕೀಮೀ ವ್ಯಾಪ್ತಿಯಲ್ಲಿರುವ ಪಂಚಾಯ್ತಿಯ (Ariel view) ಪರಿಗಣಿಸದೆ 70 ಕೀಮೀ ಸುತ್ತಳತೆಯ ಮಳೆಯ ನಿಖರತೆಯನ್ನು ನಿಗಧಿ ಪಡಿಸಿರುವುದು ಅವೈಜ್ಞಾನಿಕವಾಗಿ ಕಂಡು ಬಂದಿರುತ್ತದೆ.ಮಲೆನಾಡು ಪ್ರದೇಶದ ತಾಲ್ಲೂಕುಗಳಲ್ಲಿ ಎಲ್ಲಾ ಪಂಚಾಯ್ತಿಗಳಲ್ಲಿ ಪತ್ರಿ ಗುಂಟೆಗೆ ನಿಗಧಿಪಡಿಸಿರುವ ಬೆಳೆ ವಿಮೆ ತಾರತಮ್ಯದಿಂದ ಕೂಡಿರುತ್ತದೆ ಹಾಗೂ ಶೂನ್ಯ ಪ್ರಮಾಣದ ಪರಿಹಾರವನ್ನು ನೀಡಿರುತ್ತೀರಿ.

ಹಾನಿಗೊಳಗಾದ ಮೆಕ್ಕೆ ಜೋಳ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಿಂದ ಬೆಳೆ ಪೂರ ಹಾಳಾಗಿದ್ದು, 2 ತಿಂಗಳ ನಂತರ ಹಾಳದ ಬೆಳೆ ಪರಿಶಿಲನೆ ಮಾಡಿ ಅದನ್ನು ಖಾಲಿ ಬೀಳು ಜಾಮೀನು ಎಂದು ಪರಿಗಣಿಸಿದ್ದು, ರೈತರಿಗೆ ಬೆಳೆ ವಿಮೆ ನೀಡಲು ವಿಮಾ ಕಂಪನಿಗಳು ತಾರತಮ್ಯ ಮಾಡಿರುತ್ತಾರೆ.

ಸ್ಯಾಟಲೈಟ್ ಸರ್ವೆಯನ್ನು ಬೆಳೆ ಬೆಳೆದಿರುವ ಮೊದಲೇ ಅವರೇ ಮುಂಚಿತವಾಗಿ ನಿಗಧಿ ಪಡಿಸಿದ ಜಾಗದಲ್ಲಿ ಸರ್ವೆ ಮಾಡಲಾಗುತ್ತಿದ್ದು ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.

ಶಿಕಾರಿಪುರ ಮತ್ತು ಸೊರಬ ಭಾಗದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದು, ಅತಿ ಹೆಚ್ಚಾದ ಮಳೆಯಿಂದ ಸೈನಿಕ ಹುಳು ಭಾದೆ ಮತ್ತು ಬಿಳಿ ತಿಗಣೆ ರೋಗ ಜಾಸ್ತಿಯಾಗಿರುತ್ತದೆ. ಇದರಿಂದ ರೈತರು ಬಹಳ ನಷ್ಟವನ್ನು ಅನುಭವಿಸಿದ್ದು, ಇದಕ್ಕೆ ಯಾವುದೇ ರೀತಿಯ ಬೆಳೆವಿಮೆ ಕೈಂ ಆಗುತ್ತಿಲ್ಲ.ಶಿವಮೊಗ್ಗ, ಭದ್ರಾವತಿ ಮತ್ತು ಹೊಳೆಹೊನ್ನೂರು ಭಾಗದಲ್ಲಿ ಅತಿ ಹೆಚ್ಚು ಶುಂಠಿ ಬೆಳೆಗಾರರಿದ್ದು, ಮಳೆಯಿಂದಾಗಿ ಶುಂಠಿ ಕೊಳೆ ರೋಗ ಬಂದು ನಾಶವಾಗಿರುತ್ತದೆ. ಬೆಳೆ ವಿಮೆ ಅಸರ್ಮಪಕವಾಗಿ ನೀಡಿರುತ್ತಾರೆ ಹಾಗೂ ಪರಿಗಣಿಸಿರುವುದಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿದ್ದು, ಕೊಳೆ ರೋಗ, ಬೇರು ಹುಳ ರೋಗ, ಎಲೆಚುಕ್ಕಿ ರೋಗಳಿಂದ ಅತಿ ಹೆಚ್ಚು ಆರ್ಥೀಕ ನಷ್ಟವಾಗಿರುತ್ತದೆ. ಇದನ್ನು ಬೆಳೆ ವಿಮೆ ನೀಡುವಲ್ಲಿ ಸರ್ಮಪಕವಾಗಿ ಪರಿಗಣಿಸಿರುವುದಿಲ್ಲ.

ಕಾರವಾರ ಜಿಲ್ಲೆ 06 ಹಂತಗಳಲ್ಲಿ ಬೆಳೆ ವಿಮೆಯನ್ನು ಪರಿಗಣಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ 04 ಹಂತಗಳಲ್ಲಿ ಬೆಳೆ ವಿಮೆಯನ್ನು ಪರಿಗಣಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ 06 ಹಂತಗಳಲ್ಲಿ ಬೆಳೆ ವಿಮೆಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕೋರಿಕೆ ಮಾಡಿದೆ.

Author