ಶಿವಮೊಗ್ಗ | ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆ ವಿರುದ್ಧ ಎ. 16ರಂದು ಸೈಕಲ್, ವಾಹನಗಳ ಜಾಥಾ‌

ರಾಜಕೀಯ

ಶಿವಮೊಗ್ಗ, ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವುಸಂಘಟನೆಗಳಿಂದ ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆ ವಿರುದ್ಧ ಎ. 16ರಂದು ಸೈಕಲ್ ಹಾಗು ವಾಹನಗಳ ಜಾಥಾ‌ ಏರ್ಪಡಿಸಲಾಗಿದೆ. ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಬಳಗದ ಸ್ಥಾಪಕ ಕೆ ಎಸ್ ಈಶ್ವರಪ್ಪ, ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆ ವಿರುದ್ಧ ಈಗಾಗಲೇ ಹಲವು ಹೋರಾಟಗಳನ್ನು ನಡೆಸಿದ್ದು, ಇದರ ಮುಂದುವರೆದ ಭಾಗವಾಗಿ 16 ರಂದು ಶಿವಮೊಗ್ಗ ನಗರದಲ್ಲಿ ಹಲವಾರು ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ಸಾರ್ವಜನಿಕರಿಗೆ ಈ ಯೋಜನೆಯ ಬಗ್ಗೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೃಹತ್ ವಾಹನ ಜಾಥಾವನ್ನು ಏರ್ಪಡಿಸಲಾಗಿದೆ ಎಂದರು.

ರಾಷ್ಟ್ರಭಕ್ತ ಬಳಗ ಶಿವಮೊಗ್ಗ, ಪರಿಸರಕ್ಕಾಗಿ ನಾವು ರಾಜ್ಯ ಸಂಘಟನೆ, ಅಣ್ಣಾ ಹಜಾರೆ ಹೋರಾಟ ಸಮಿತಿ ಶಿವಮೊಗ್ಗ, ಶಿವಮೊಗ್ಗ ಸೈಕಲ್ ಕ್ಲಬ್, ಸಾಹಸ ಮತ್ತು ಸಾಂಸ್ಕೃತಿಕ ಅಕಾಡೆಮಿ ಶಿವಮೊಗ್ಗ, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ ಶಿವಮೊಗ್ಗ ಮತ್ತು YHAI ತರುಣೋದಯ ಘಟಕ ಶಿವಮೊಗ್ಗ, ಕರ್ನಾಟಕ ರಕ್ಷಣಾ ವೇದಿಕ ಸಿಂಹ ಸೇನೆ ಶಿವಮೊಗ್ಗ,ಸಂಘಟನೆಗಳು ಈ ” ಸೈಕಲ್ ಹಾಗು ವಾಹನಗಳ ಜಾಥಾ”ದಲ್ಲಿ ಪಾಲ್ಗೊಳ್ಳಲಿವೆ.

ಈ ಜಾಥಾದ ಉದ್ಘಾಟನೆಯನ್ನು ನರರೋಗ ವೈದ್ಯ ಶಿವರಾಮ ಕೃಷ್ಣ ಮತ್ತು ಡಾ|| ನಾರಾಯಣ್‌, ಶರಾವತಿ ನರ್ಸಿಂಗ್‌ ಹೋಂ, ಇವರು ನಡೆಸಿಕೊಡಲಿದ್ದಾರೆ ಮತ್ತು ಮುಖ್ಯ ಬಾಷಣವನ್ನು ಮಾಡಲಿದ್ದಾರೆ ಎಂದು ವಿವರಿಸಿದರು.ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಕೆಪಿಸಿಲ್ ಗೆ ಈ ಯೋಜನೆಗೆ ಸಂಬಂಧಿಸಿದಂತೆ 32 ಪ್ರಶ್ನೆಗಳನ್ನು ಕೇಳಲಾಗಿತ್ತು, ದಿನಾಂಕ 09/04/2026 ರಂದು ಕೆ ಪಿ ಸಿ ಎಲ್ ನವರು ನಮ್ಮ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ್ದಾರೆ.

ಕೆ ಪಿ ಸಿ ಎಲ್ ನವರ ಲಿಖಿತ ಉತ್ತರದಲ್ಲಿ, ನಾವು ಕೇಳಿದ , ಈ ಯೋಜನೆಯಲ್ಲಿರುವ ತಾಂತ್ರಿಕ, ಕಾನೂನಾತ್ಮಕ ಲೋಪದೋಷಗಳ ಬಗ್ಗೆ ಚಕಾರವೆತ್ತಡೇ , ಹಾರಿಕೆಯ ಉತ್ತರ ನೀಡಿರುತ್ತಾರೆ ಎಂದರು.

ರಾಷ್ಟ್ರೀಯ ಭದ್ರತೆಯ ಪೊಳ್ಳು ನೆಪವೊಡ್ಡಿ ಯೋಜನೆಯ ಡಿ.ಪಿ.ಆರ್ ನೀಡಲು ನಿರಾಕರಿಸಿದ್ದಾರೆ.. ಕೆ ಪಿ ಸಿ ಎಲ್ ನವರೇ ಒಪ್ಪಿಕೊಂಡಿರುವಂತೆ ಯೋಜನೆಯ ವಿರುದ್ಧ ಹೈ ಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಕಲಾಗಿದ್ದು, ಈ ಯೋಜನೆಯ ವಿರುದ್ಧ ಮಧ್ಯಂತರ ತಡೆಯಾಜ್ಞೆ ಜಾರಿಯಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಹೈ ಕೋರ್ಟ್‌ ಆದೇಶವಾಗಿದೆ ಎಂದರು.

ಕೆ ಪಿ ಸಿ ಎಲ್ ನವರು ತಮ್ಮ ಹಳೇ ಚಾಳಿಯನ್ನೇ ಮುಂದುವರೆಸಿದ್ದು, ಈ ಯೋಜನೆಯ ವಿರುದ್ಧ ಸಾಕಷ್ಟು ವಿರೋಧ ಮತ್ತು ಪ್ರತಿಭಟನೆಗಳು ನಡೆದಿದ್ದು, ಹಲವಾರು ಸಂಘ ಸಂಸ್ಥೆಗಳು, ಮಠಾಧೀಶರು, ಪರಿಸರ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು, ವಿಷಯ ತಜ್ಞರು ಈ ಯೋಜನೆಯಲ್ಲಿನ ಲೋಪದೋಷಗಳನ್ನು ಕೆ ಪಿ ಸಿ ಎಲ್ ಗೆ ಮನವರಿಕೆ ಮಾಡಿಕೊಟ್ಟರೂ ಸಹ, ಕೆ ಪಿ ಸಿ ಎಲ್ ನವರು, ಪರಿಸರಕ್ಕೆ ಮತ್ತು ಪಶ್ಚಿಮ ಘಟ್ಟಗಳಿಗೆ ಮಾರಕವಾಗಿರುವ, ಯಾವುದೇ ಆರ್ಥಿಕ ಲಾಭವನ್ನು ತರದ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ಪ್ರಶ್ನಾರ್ಥಕವಾಗಿದೆ ಎಂದರು.

ಪತ್ರಿಕಾಗೋಷ್ಠೊಯಲ್ಲಿ ಪರಿಸರ ಹೋರಾಟಗಾರರಾದ ಶೇಖರ್ ಗೌಳೇರ್, ಜನಾರ್ದನ ಪೈ, ಪರಿಸರ ರಮೇಶ್, ಬ಼ಳಗದ ಶ್ರೀಕಾಂತ್ ಮೊದಲಾದವರಿದ್ದರು.

Author