ಶಿವಮೊಗ್ಗ | ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಅಂಜಲಿಗೆ ಶುಭ ಹಾರೈಕೆ

ಶಿವಮೊಗ್ಗ

ಶಿವಮೊಗ್ಗ ವಿಕಾಸ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಂಜಲಿ ಅವರು ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ PCMB ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆದಿರುತ್ತಾರೆ.

ಇವರ ತಂದೆ ಚಿದಂಬರ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ ಹಾಗೂ ತಾಯಿ ವಂದನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದಾರೆ.

ಅಂಜಲಿ ಅವರು ಇ-ಕನ್ನಡ ಸುದ್ದಿ ಮಾಧ್ಯಮ ಸಂಪಾದಕರಾದ ರಾಘವೇಂದ್ರ ಅವರ ಸಹೋದರರ ಮಗಳು ಕೂಡ ಹೌದು.

ನಮ್ಮೊಂದಿಗೆ ಮಾತನಾಡಿದ ಅಂಜಲಿ “ನಾನು ದಿನನಿತ್ಯದ ಪಾಠಗಳನ್ನು ಅದೇ ದಿನ ಓದಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದೆ. ಶ್ರದ್ಧೆಯಿಂದ ಓದಿದ್ದೇನೆ ಹಾಗಾಗಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದು ಅಂಜಲಿ ಹೇಳಿದ್ದಾರೆ.

ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಚಿದಂಬರ ಹಾಗೂ ತಾಯಿ ವಂದನಾ ಅವರು , “ತುಂಬಾ ಸಂತೋಷವಾಗಿದೆ. ಅವಳು ಬಹಳ ಶ್ರಮ ಪಟ್ಟಿದ್ದಾಳೆ. ಅವಳ ಮುಂದಿನ ಶೈಕ್ಷಣಿಕ ಜೀವನಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ.ಎಂದಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಅಂಜಲಿಗೆ ಕುಟುಂಬಸ್ಥರು, ಬಂಧುಬಳಗ, ಆತ್ಮೀಯರು, ಪ್ರೀತಿ ಪಾತ್ರರು ಶುಭ ಹಾರೈಸಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ಉತ್ತಮ ಸಾಧನೆ ಮಾಡಿ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮ ವತಿಯಿಂದ ಸಹ ಅಂಜಲಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ.

Author