ಶಿವಮೊಗ್ಗ | ಆರು ಕಾಲುಗಳ ಆಕಳ ಕರು ಜನನ

ಶಿವಮೊಗ್ಗ

ಶಿವಮೊಗ್ಗ, ತಾಲೂಕಿನ ಸೂಗೂರು ಗ್ರಾಮದಲ್ಲಿ ಹಸುವೊಂದು ಆರು ಕಾಲುಗಳಿರುವ ಕರುವಿಗೆ ಜನ್ಮ ನೀಡಿದೆ. ಗ್ರಾಮದ ರೈತ ಹನುಮಂತಪ್ಪ ಎಂಬುವವರಿಗೆ ಸೇರಿದ ಹಸು ಈ ವಿಚಿತ್ರ ಕರುವನ್ನು ಹಾಕಿದ್ದು, ಈ ಅಪರೂಪದ ಕರುವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಹನುಮಂತಪ್ಪ ಅವರ ಮನೆಯತ್ತ ದೌಡಾಯಿಸುತ್ತಿದ್ದಾರೆ.

ಈ ಕರುವು ತನ್ನ ಹಿಂಬದಿಯಲ್ಲಿ ಸಾಮಾನ್ಯ ಎರಡು ಕಾಲುಗಳ ಬದಲಾಗಿ ಹೆಚ್ಚುವರಿ ಎರಡು ಕಾಲುಗಳನ್ನು ಹೊಂದಿದೆ. ಈ ಹೆಚ್ಚುವರಿ ಕಾಲುಗಳ ಕಾರಣದಿಂದ ಕರುವು ನಿಲ್ಲಲು ಹರಸಾಹಸ ಪಡುತ್ತಿದೆ.

ಕರು ಹಾಕುವ ಸಮಯದಲ್ಲಿ ಹಸು ತೀವ್ರವಾಗಿ ಒದ್ದಾಡುತ್ತಿದ್ದುದನ್ನು ಗಮನಿಸಿದ ರೈತರು ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿದ್ದರು.

ಪಶುವೈದ್ಯರು ಕರುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಸದ್ಯ ಆರು ಕಾಲುಗಳ ಈ ಕರು ಮತ್ತು ತಾಯಿ ಹಸು ಎರಡೂ ಆರೋಗ್ಯವಾಗಿವೆ.

Author