ಶಿವಮೊಗ್ಗ ನಗರದ ಹಲವು ವಾರ್ಡ್ ಗಳಲ್ಲಿ ರಾಜಕಾಲುವೆ ಜನಜಂಗುಳಿ ಪ್ರದೇಶಗಳಲ್ಲಿ ಜನರು ವಾಸಿಸುವ ಪ್ರದೇಶದಲ್ಲಿ ಹಾದು ಹೋಗಿದ್ದು, ವಾರ್ಷಾನುಗಟ್ಟಲೆ ಈ ರಾಜಕಾಲೆಗಳ ಹೂಳು ತೆಗೆಯುವ ಕಾರ್ಯ ಮಾಡದೆ ನಿರ್ಲಕ್ಷ್ಯ ವಹಿಸಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳು.
ಇದರಿಂದ ಎರಡು ದಿನಗಳ ಹಿಂದೆ ರಾತ್ರಿ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳಿಗೆ ಕೊಳಚೆ ಚಿರಂಡಿ ನೀರು ನುಗ್ಗಿದೆ. ಇದರಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ.
ಇಷ್ಟಾದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ. ಇವರ ನಿರ್ಲಕ್ಷ್ಯದಿಂದ ಜನರು ಪರದಾಡುತ್ತಿದ್ದಾರೆ.
ಆದಷ್ಟು ಬೇಗ ವಾರ್ಡ್ ನಂ. 32 ಟಿಪ್ಪು ನಗರ, ವಾರ್ಡ್ ನಂ.28 ಆರ್.ಎಮ್.ಎಲ್ ನಗರ ಸೇರಿದಂತೆ ಹಲವು ವಾರ್ಡ್ ಗಳಲ್ಲಿ ರಾಜಕಾಲುವೆ ಮತ್ತು ಚಿರಂಡಿಗಳ ಹೂಳು ತೆಗೆದು ಸ್ವಚ್ಛತೆ ಕಾರ್ಯ ನಡೆಸಬೇಕು.
ಇಲ್ಲದಿದ್ದರೆ ಮಹಾನಗರ ಪಾಲಿಕೆಯ ಆವರಣದಲ್ಲಿ ಅಧಿಕಾರಿಗಳು ವಿರುದ್ಧ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಈ ಮೂಲಕ ತಮಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು SDPI ತಿಳಿಸಿದ್ದಾರೆ.
ಜನರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ವಿಶೇಷವಾಗಿ ಟಿಪ್ಪು ನಗರದ ಕೆರೆ ಅಂಗಳದಲ್ಲಿ ರಾಜಕಾಲುವೆ ಹರಿದು ತಿಂಡಿಗಳು ಮೂಲಕ ಬಡ ಮನೆಗಳಿಗೆ ಗುಡಿಸಿಲುಗಳಿಗೆ ಚರಂಡಿ ನೀರು ನುಗಿ, ಅವಾಂತರವಾಗಿದ್ದು, ಈ ಕುಟುಂಬಗಳಿಗೆ ಸರ್ವೇ ನಡೆಸಿ ಸೂಕ್ತ ಪರಿಹಾರ ಮಹಾನಗರ ಪಾಲಿಕೆಯಿಂದ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದೆ.



