ಶಿವಮೊಗ್ಗ | ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಪ್ರಾರ್ಥನೆ ವೇಳೆ ಜೇನ್ನೊಣಗಳ ದಾಳಿ

ಶಿವಮೊಗ್ಗ

ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ನೂರಾರು ಭಕ್ತರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.ಇಂದು ಗುಡ್​ ಪ್ರೈಡೇ ಹಬ್ಬದ ಪರಿಣಾಮ ಶಿವಮೊಗ್ಗ ಸಕ್ರೇಡ್​ ಹಾರ್ಟ್​ ಚರ್ಚ್​ನಲ್ಲಿ ಶಿಲುಬೆ ಹಾದಿ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಸಾವಿರಾರು ಜನ ಭಕ್ತರು ಚರ್ಚನ ಆವರಣದಲ್ಲಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ದಾಳಿ ನಡೆದಿದೆ.

ನೂರಾರು ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದರಿಂದ ಜನರು ಭಯಭೀತರಾದರು.ಹೆಜ್ಜೇನು ದಾಳಿಯಿಂದ ಪಾರಾಗಲು ಚರ್ಚ್​ನ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಅಷ್ಟರಲ್ಲಾಗಲೇ ನೂರಾರು ಜನರಿಗೆ ಹೆಜ್ಜೇನು ದಾಳಿ ಮಾಡಿತ್ತು.

ಹೆಜ್ಜೇನು ದಾಳಿಗೆ ಒಳಗಾದವರನ್ನು ಆ್ಯಂಬುಲೆನ್ಸ್​ ಮೂಲಕ ಚರ್ಚ್​​​ನ ಸಮೀಪವಿರುವ ಅಶೋಕ ಸಂಜೀವಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಹೊಗೆ ಹಾಕುವ ಮೂಲಕ ಹೆಜ್ಜೇನು ಓಡಿಸುವ ಪ್ರಯತ್ನ ಮಾಡಲಾಯಿತು. ಚರ್ಚ್​​ನ ಫಾದರ್​​​ಗೂ ಹೆಜ್ಜೇನು ದಾಳಿ ಮಾಡಿವೆ.ಕಳೆದ ಕೆಲ ದಿನಗಳ ಹಿಂದೆ ಚರ್ಚ್​​​ನ ಆವರಣದಲ್ಲಿರುವ ಮರಗಳಲ್ಲಿ ಹೆಜ್ಜೇನು ಗೂಡು ಕಟ್ಟಿದ್ದವು.

ಆದರೆ ಹಬ್ಬದ ಹಿನ್ನಲೆಯಲ್ಲಿ ಗೂಡುಗಳನ್ನು ತೆರವು ಮಾಡಲಾಗಿತ್ತು ಎನ್ನಲಾಗಿದೆ, ಹೆಜ್ಜೆನು ದಾಳಿಯ ಹಿನ್ನೆಲೆಯಲ್ಲಿ ಶಿಲುಬೆ ಹಾದಿ ಅರ್ಧಕ್ಕೆ ನಿಂತಿತು. ಹೆಜ್ಜೇನು ದಾಳಿಗೆ ಒಳಗಾದರೂ ಸಹ ಭಕ್ತರು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು.

Author