ಶಿವಮೊಗ್ಗ,ದಿನಾಂಕ : 31-03-2026 ರ ಮಂಗಳವಾರ ನಗರದ ವಾರ್ಡ್ ನಂ.7 ರ ಆದರ್ಶ ಕಾಲೋನಿಯಲ್ಲಿ ಮಧ್ಯರಾತ್ರಿ ಸುರಿದ ಭಾರಿ ಮಳೆಯಲ್ಲಿ ರಾಜ ಕಾಲುವೆ ಹಾಗೂ ಚರಂಡಿಯಲ್ಲಿ ಭಾರಿ ನೀರಿನಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ರಾಷ್ಟ್ರಭಕ್ತರ ಬಳಗದ ಮುಖಂಡರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ. ಎಸ್ ಈಶ್ವರಪ್ಪನವರ ಪುತ್ರರಾದಂತಹ ಕೆ. ಈ.ಕಾಂತೇಶ್ ರವರು ಇಂದು ದಿನಾಂಕ: 03-04-2026 ಶುಕ್ರವಾರ ಬೆಳಿಗ್ಗೆ 9.30ಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ದಿನಾಂಕ: 31-03-2026 ರ ಮಂಗಳವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಆದರ್ಶಕಾಲೋನಿಯ ಸುಮಾರು 25-30 ಮನೆಗಳಿಗೆ ಪ್ರತಿ ಮನೆಯಲ್ಲಿಯೂ 5-6 ಅಡಿ ನೀರು ಸಂಗ್ರಹವಾಗಿತ್ತು ಈ 5-6 ಅಡಿ ಸಂಗ್ರಹವಾದ ಮಳೆ ನೀರನ್ನ ರಾತ್ರಿಯಿಡಿ ಗಂಡಸರು, ಹೆಂಗಸರು ಮತ್ತು ಮಕ್ಕಳು ಹೊರಗೆ ಚೆಲ್ಲುವುದೆ ಕೆಲಸವಾಗಿತ್ತು ಎಂದು ಸ್ಥಳ ಪರಿಶೀಲನಾ ಸಮಯದಲ್ಲಿ ನೆರೆದಿದ್ದ ಆದರ್ಶ ಕಾಲೋನಿಯ ನಿವಾಸಿಗಳು ಕಾಂತೇಶ್ ಈಶ್ವರಪ್ಪನವರಿಗೆ ವಿವರಿಸಿದರು.
ಕೂಡಲೆ ದೂರವಾಣಿಯ ಮೂಲಕ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರವಾಣಿ ಕರೆಮಾಡಿದ ಕಾಂತೇಶ್ ರವರು ಸಧ್ಯಕ್ಕೆ ಆದರ್ಶ ಕಾಲೋನಿಗೆ ಹೊಂದಿಕೊಂಡ ರಾಜ ಕಾಲುವೆಗೆ ಅತೀ ಕೆಳಗಿರುವ 2 ಡೆತ್ ಫ್ಲ್ಯಾಬ್‌ಗಳನ್ನ 5-6 ಲಕ್ಷ ರೂಗಳ ವೆಚ್ಚದಲ್ಲಿ ಎತ್ತರಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆದರ್ಶ ಕಾಲೋನಿಯ ನಿವಾಸಿಗಳಾದಂತಹ ಶ್ರೀಮತಿ ಲತಾ, ಶ್ರೀಮತಿ ಮಂಜುಳ, ಶ್ರೀಮತಿ ರಶ್ಮಿ, ಶ್ರೀಮತಿ ಜಯ, ಕಲ್ಲೂರು ಮೇಘರಾಜ, ಕೆ. ನಾಗರಾಜ, ಅಶೋಕ ರಾಷ್ಟ್ರಭಕ್ತ ಬಳಗದ ಮುಖಂಡರಾದ ಬಿ. ಟಿ. ರಾಜು ಮುಂತಾದವರು ಉಪಸ್ಥಿತರಿದ್ದರು.


