ಬಣ್ಣದ ಲೋಕದಲ್ಲಿ ಅರಳಲಿ ಬಾಲ್ಯ ; ಬ್ಲೂಮಿಂಗ್ ಕಿಡ್ಸ್ ಶಾಲೆ ವಿಶೇಷತೆ ಬಗ್ಗೆ ಪೋಷಕರಿಗೊಂದು ಕಂಪ್ಲೀಟ್ ಗೈಡ್

ವಿಶೇಷ ಲೇಖನ

ಮಕ್ಕಳ ಶೈಕ್ಷಣಿಕ ಜೀವನದ ಅಡಿಪಾಯವೇ ಈ ಪೂರ್ವ ಪ್ರಾಥಮಿಕ ಶಿಕ್ಷಣ (Pre-School). ಮಗು ಮನೆಯ ವಾತಾವರಣದಿಂದ ಹೊರಬಂದು ಸಮಾಜದೊಂದಿಗೆ ಬೆರೆಯಲು ಕಲಿಯುವ ಮೊದಲ ಹಂತವಿದು. ಹಾಗಾಗಿ, ಒಂದು ಪ್ರಿ-ಸ್ಕೂಲ್ ಅಥವಾ ಎಲ್.ಕೆ.ಜಿ, ಯು.ಕೆ.ಜಿ ಶಾಲೆ ಹೇಗಿರಬೇಕು ಎಂಬ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

“ಅಮ್ಮಾ ನಾನು ಶಾಲೆಗೆ ಹೋಗಿಬರುತ್ತೇನೆ!”

ಮಗುವಿನ ಬಾಯಲ್ಲಿ ಮೊದಲ ಬಾರಿ ಶಾಲೆ ಎಂಬ ಪದ ಬಿದ್ದಾಗ ಪ್ರತಿ ಪೋಷಕರ ಮನಸ್ಸಿನಲ್ಲಿ ಒಂದು ರೀತಿಯ ಭಾವನೆ ಮೂಡುತ್ತದೆ.ಪ್ರಿ-ನರ್ಸರಿ, LKG, UKG ಮಗುವಿನ ಜೀವನದ ಮೊದಲ ಔಪಚಾರಿಕ ಶಾಲಾ ಅನುಭವ.

ಮಕ್ಕಳಿಗೆ ಶಾಲೆ ಎಂದರೆ ಭಯವಾಗಬಾರದು, ಬದಲಾಗಿ ಅದು ಆಟದ ಮೈದಾನದಂತೆ ಆಪ್ತವೆನಿಸಬೇಕು. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಶಾಲೆಯು ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬೇಕು.ಸುರಕ್ಷಿತ ಮತ್ತು ಆಕರ್ಷಕ ಪರಿಸರ,ವರ್ಣರಂಜಿತ ಕೊಠಡಿಗಳು,ಸುರಕ್ಷತೆ,ಸ್ವಚ್ಛತೆ,ಆಟದ ಆಧಾರಿತ ಕಲಿಕೆ,ಪುಟ್ಟ ಮಕ್ಕಳಿಗೆ ಪುಸ್ತಕದ ಬದನೆಕಾಯಿಗಿಂತ ಪ್ರಾಯೋಗಿಕ ಕಲಿಕೆ ಮುಖ್ಯ,ದೈಹಿಕ ಚಟುವಟಿಕೆ, ಹಾಡು ಮತ್ತು ನೃತ್ಯ,ರೈಮ್ಸ್ (Rhymes) ಮೂಲಕ ಭಾಷಾ ಜ್ಞಾನ ಮತ್ತು ಅಭಿನಯ ಕಲಿಸುವುದು ಮಗುವಿನ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಪೋಷಕರು,ಪ್ರಸಕ್ತ ಸಾಲಿಗೆ ತಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಕುತೂಹಲದಲ್ಲಿದ್ದೀರ?

ಈ ಒಂದು ವಿಚಾರಕ್ಕೆ, ನಿಮ್ಮ ಗೊಂದಲಗಳಿಗೆ ನಾವು ಈ ಸುದ್ದಿ ಮುಖೇಣ ನಿಮಗೆ ಈ ಒಂದು ಶಾಲೆ ಬಗ್ಗೆ ತಿಳಿಸುತ್ತಿದ್ದೇವೆ. ಅದುವೇ ಶಿವಮೊಗ್ಗ ನಗರದಲ್ಲಿರುವ,

ಬ್ಲೂಮಿಂಗ್ ಕಿಡ್ಸ್ ಶಾಲೆ

ಹೌದು ಈ ಒಂದು ಶಾಲೆಯಲ್ಲಿ ಮಗುವಿಗೆ ಬೇಕಾಗಿರುವ ವ್ಯವಸ್ಥೆಗಳು ಇದೆ.

ಈ ಶಾಲೆಯಲ್ಲಿ ಶಿಕ್ಷಕರು ಪ್ರೀತಿ ಮತ್ತು ತಾಳ್ಮೆಯಿಂದ ತಾಯಿಯಂತೆ ಸಲಹುತ್ತಾರೆ ,ಈ ಹಂತದಲ್ಲಿ ಶಿಕ್ಷಕರು ಕೇವಲ ಬೋಧಕರಲ್ಲ, ಅವರು ಎರಡನೇ ತಾಯಿ/ತಂದೆಯಂತೆ ಇದ್ದಾರೆ . ಮಗು ಅತ್ತಾಗ ಸಮಾಧಾನಪಡಿಸುವ ಗುಣವಿರುವ ಶಿಕ್ಷಕರು ಈ ಶಾಲೆಯಲ್ಲಿ ಇದ್ದಾರೆ .

ಪೋಷಕರೊಂದಿಗೆ ಸಂವಹನ ಶಾಲೆಯಲ್ಲಿದೆ ,ಮಕ್ಕಳಿಗೆ ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಅಕ್ಷರ ಕಲಿಯುವುದಲ್ಲ; ಅದು ಹೊಸ ಜಗತ್ತನ್ನು ಅನ್ವೇಷಿಸುವ ತಾಣ ಈ ಒಂದು ವ್ಯವಸ್ಥೆ ಶಾಲೆಯಲ್ಲಿದೆ.

ಪುಟ್ಟ ಮಕ್ಕಳಿಗೆ ಪುಸ್ತಕ ಹಿಡಿದು ಓದುವುದಕ್ಕಿಂತ ಪ್ರಾಯೋಗಿಕ ಕಲಿಕೆ ಹೆಚ್ಚು ಪರಿಣಾಮಕಾರಿ ಇದನ್ನು ಬ್ಲೂಮಿಂಗ್ ಕಿಡ್ಸ್ ಶಾಲಾ ಆಡಳಿತ ಮಂಡಳಿ ಅಳವಡಿಸಿಕೊಂಡಿದ್ದಾರೆ.

ಸಣ್ಣ ವಿಡಿಯೋಗಳ ಮೂಲಕ ಪ್ರಕೃತಿಯನ್ನು ಪರಿಚಯಿಸುವುದನ್ನು ಈ ಶಾಲೆಯಲ್ಲಿ ಮಕ್ಕಳಿಗೆ ಸಿಗುತ್ತಿದೆ.

ಏಕೈಕ ಸಂತತಿಯ ಮಕ್ಕಳು ಹಂಚಿಕೊಳ್ಳಲು, ಸರದಿ ಕಾಯಲು, ಗೆಳೆಯರೊಂದಿಗೆ ಬೆರೆಯಲು ಕಲಿಯುವುದು ಇಲ್ಲೇ.·

ಗುಡ್ ಮಾರ್ನಿಂಗ್”, “ಪ್ಲೀಸ್”, “ಸಾರಿ”, “ಥ್ಯಾಂಕ್ಯೂ” ಕಲಿಸುವ ಮೂಲಕ ಶಿಷ್ಟಾಚಾರ ರೂಢಿಸುತ್ತಿದ್ದಾರೆ .·

ಸೋಲು-ಗೆಲುವು, ಭಾವನೆಗಳನ್ನು ವ್ಯಕ್ತಪಡಿಸುವುದನ್ನ ಮಕ್ಕಳಿಗೆ ಕಲಿಸಲಾಗುತ್ತಿದೆ.ಪೋಷಕರೊಂದಿಗೆ ಪಾಲುದಾರಿಕೆಯನ್ನು ಸಹ ಶಾಲೆ ನೀಡುತ್ತಿದೆ.

ಇತರೆ ಮಕ್ಕಳೊಂದಿಗೆ ಆಟಿಕೆಗಳನ್ನು ಹಂಚಿಕೊಳ್ಳುವುದು ಮತ್ತು ಗುಂಪಿನಲ್ಲಿ ಬೆರೆಯುವುದನ್ನು ಬ್ಲೂಮಿಂಗ್ ಕಿಡ್ಸ್ ಶಾಲೆ ಕಲಿಸುತ್ತಿದೆ.

ಮಕ್ಕಳು ಸ್ವತಃ ತಾವೇ ಬ್ಯಾಗ್ ಜೋಡಿಸುವುದು ಮತ್ತು ಶೌಚಾಲಯದ ಬಳಕೆಯ ಬಗ್ಗೆ ಅರಿವು ಮೂಡಿಸುತ್ತಿದೆ ಶಾಲೆ.ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಪ್ರೋತ್ಸಾಹಿಸುವುದನ್ನು ಶಾಲೆ ಕುತೂಹಲಕಾರಿಯಾಗಿ ಮಕ್ಕಳನ್ನ ತಯಾರು ಮಾಡುತ್ತಿದೆ.

ಶಾಲೆ ಎನ್ನುವುದು ಮಗುವಿಗೆ ಶಿಕ್ಷೆಯಾಗದೆ, ಒಂದು ಸಂಭ್ರಮವಾಗಬೇಕು. ಮಗು ಬೆಳಿಗ್ಗೆ ಎದ್ದ ತಕ್ಷಣ “ನಾನು ಶಾಲೆಗೆ ಹೋಗಬೇಕು” ಎಂದು ಖುಷಿಯಿಂದ ಸಿದ್ಧವಾದರೆ, ನೀವು ಆರಿಸಿದ ಶಾಲೆ ಅತ್ಯುತ್ತಮವಾಗಿದೆ ಎಂದರ್ಥ ಎಂಬುದನ್ನು ಪೋಷಕರು ಮನದಟ್ಟು ಮಾಡಿಕೊಳ್ಳಲು ಈ ನಗರದ ಬ್ಲೂಮಿಂಗ್ ಕಿಡ್ಸ್ ಶಾಲೆ ಒಂದು ಅತ್ಯುತ್ತಮ ಆಯ್ಕೆ ಆಗಿದೆ.

ಮಗುವಿನ ಮೆದುಳಿನ ಶೇ. 90ರಷ್ಟು ಬೆಳವಣಿಗೆಯಾಗುವುದು ಮೊದಲ ಐದು ವರ್ಷಗಳಲ್ಲಿ. ಈ ಅವಧಿಯಲ್ಲಿ ಮಗು ಪಡೆಯುವ ಶಿಕ್ಷಣವು ಅವರ ಭವಿಷ್ಯದ ವ್ಯಕ್ತಿತ್ವಕ್ಕೆ ಭದ್ರ ಬುನಾದಿ ಹಾಕುತ್ತದೆ.

ಹೀಗಾಗಿ, ಪ್ರಿ-ಸ್ಕೂಲ್ ಎನ್ನುವುದು ಕೇವಲ ಅಕ್ಷರ ಕಲಿಯುವ ಜಾಗವಲ್ಲ, ಅದು ಮಗುವಿನ ಸರ್ವತೋಮುಖ ಬೆಳವಣಿಗೆಯ ಕೇಂದ್ರವಾಗಬೇಕು.ಮಗು ತನ್ನ ಆಲೋಚನೆಗಳನ್ನು ಚಿತ್ರಗಳ ಮೂಲಕ ಅಥವಾ ಮಾತಿನ ಮೂಲಕ ವ್ಯಕ್ತಪಡಿಸಲು ಅವಕಾಶ ಈ ಶಾಲೆಯಲ್ಲಿದೆ.

“ಮಗುವಿನ ಮೇಲೆ ಅಂಕಗಳ ಅಥವಾ ಬರವಣಿಗೆಯ ಒತ್ತಡ ಹೇರಬೇಡಿ. ಎಲ್.ಕೆ.ಜಿ ಮತ್ತು ಯು.ಕೆ.ಜಿ ಹಂತದಲ್ಲಿ ಮಗು ಎಷ್ಟು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತದೆಯೋ, ಅಷ್ಟು ಚೆನ್ನಾಗಿ ಕಲಿಯುತ್ತಿದೆ ಎಂದರ್ಥ.

“”ಧನ್ಯವಾದಗಳು”, “ಕ್ಷಮಿಸಿ”, “ಬನ್ನಿ ಕುಳಿತುಕೊಳ್ಳಿ” ಎಂಬಂತಹ ಸೌಜನ್ಯದ ಮಾತುಗಳು ಸಂಸ್ಕೃತಿಯ ಮೊದಲ ಪಾಠ ಎಂಬುದನ್ನು ಈ ಶಾಲೆಯಲ್ಲಿ ಕಲಿಸಲಾಗುತ್ತಿದೆ.

ಭಾವನಾತ್ಮಕ ಸಂಬಂಧ,ಶಾಲೆಯಲ್ಲಿ ಯುಗಾದಿ, ದಸರಾ, ಸಂಕ್ರಾಂತಿ ಅಥವಾ ದೀಪಾವಳಿಯನ್ನು ಆಚರಿಸುವಾಗ ಕೇವಲ ಬಣ್ಣದ ಬಟ್ಟೆ ತೊಡುವುದಷ್ಟೇ ಅಲ್ಲ, ಆ ಹಬ್ಬದ ಹಿಂದಿನ ಸಣ್ಣ ಕಥೆ ಮತ್ತು ಉದ್ದೇಶವನ್ನು ಮಕ್ಕಳಿಗೆ ಸಂಸ್ಕೃತಿಯ ಅನಾವರಣ ಮಾಡಲಾಗುತ್ತಿದೆ.

ಭಗವದ್ಗೀತೆ, ಮಕ್ಕಳ ಸಂತೆ, ಮಕ್ಕಳ ಜಾತ್ರೆ ಅಂತಹ ವಿಶೇಷ ಕಾರ್ಯಕ್ರಮಗಳ ಮೂಲಕ ಶಾಲೆಯು ಮಕ್ಕಳಿಗೆ ಸಮಾಜದ ಸಂಸ್ಕೃತಿಯ ಜ್ಞಾನ ಪರಿಚಯಿಸುತ್ತಿದೆ. ಹಾಗೂ ಸಂಸ್ಕೃತಿ ಪರಂಪರೆ ಬಗ್ಗೆ ಮಕ್ಕಳಲ್ಲಿ ಜ್ಞಾನ ಮೂಡಿಸುತ್ತಿದ್ದಾರೆ.ಹಾಗೂ ರಾಷ್ಟ್ರೀಯ ಹಬ್ಬಗಳ ಕುರಿತು ದೇಶಭಕ್ತಿಯ ಬಗ್ಗೆ ಹೆಮ್ಮೆಯ ಜ್ಞಾನ ನೀಡುತ್ತಿದ್ದಾರೆ.

ಶಿಕ್ಷಕರು, ಪೋಷಕರು ಮತ್ತು ಅತಿಥಿಗಳಿಗೆ ನಮಸ್ಕರಿಸುವುದನ್ನು ಕಲಿಸುವುದು ನಮ್ಮ ಸಂಸ್ಕೃತಿಯ ಅಡಿಪಾಯವನ್ನು ಈ ಶಾಲೆಯಲ್ಲಿ ಮಕ್ಕಳಿಗೆ ಕಲಿಸಲಾಗುತ್ತಿದೆ.

ಹಿರಿಯರಿಗೆ ಅಥವಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ಸಣ್ಣ ಪುಟ್ಟ ಚಟುವಟಿಕೆಗಳ ಮೂಲಕ ಪ್ರೋತ್ಸಾಹ ನೀಡುವುದನ್ನ ಕಲಿಸುತ್ತಾರೆ.”ಅನ್ನದಾತ ಸುಖೀಭವ” ಎಂಬ ಮನೋಭಾವ ಬೆಳೆಸುತ್ತಿದ್ದಾರೆ. ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡಬಾರದು ಎಂಬ ತಿಳುವಳಿಕೆ ನೀಡುತ್ತಿದ್ದಾರೆ.

“ಇಂದಿನ ಮಕ್ಕಳು ನಾಳಿನ ಭಾರತದ ರಾಯಭಾರಿಗಳು. ಅವರಿಗೆ ನಾವು ನೀಡುವ ಅತ್ಯುತ್ತಮ ಆಸ್ತಿ ಎಂದರೆ ನಮ್ಮ ಸಂಸ್ಕೃತಿಯ ತಿಳುವಳಿಕೆ. ಆಧುನಿಕ ಶಿಕ್ಷಣದ ಜೊತೆಗೆ ಸಂಸ್ಕಾರದ ಶಿಕ್ಷಣ ನೀಡುವ ಶಾಲೆಗಳೇ ಇಂದಿನ ಅಗತ್ಯ.

“ಕೊನೆಯದಾಗಿ ಪೋಷಕರಿಗೆ ಗಮನಿಸಬೇಕಾದ ಅಂಶ: ಮಗುವು ಮನೆಯಲ್ಲಿ ನಿಮ್ಮನ್ನು ನೋಡಿ ಕಲಿಯುತ್ತದೆ. ನೀವು ಮನೆಯಲ್ಲಿ ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತೀರೋ, ಮಗು ಕೂಡ ಅದನ್ನೇ ಅನುಸರಿಸುತ್ತದೆ. ಹೀಗಾಗಿ, ಶಾಲೆಯ ಜೊತೆಗೆ ಮನೆಯ ಪರಿಸರವೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿರಲಿ.

ಎಲ್.ಕೆ.ಜಿ, ಯು.ಕೆ.ಜಿ ಮತ್ತು ಪ್ರಿ-ನರ್ಸರಿ ಶಾಲೆಗಳು ಮಕ್ಕಳನ್ನು ಒತ್ತಡರಹಿತ, ಪ್ರೀತಿಯ, ಸುರಕ್ಷಿತ ಮತ್ತು ಅನ್ವೇಷಣೆಯ ವಾತಾವರಣದಲ್ಲಿ ಇರಿಸಿದಾಗ ಅವು ನಿಜವಾಗಿಯೂ ಅನುಕೂಲಕರವಾಗುತ್ತವೆ. ಅಲ್ಲಿ ಮಗುವಿಗೆ ‘ಎ’ ಬರೆಯಲು ತಿಳಿದಿದೆಯೋ ಇಲ್ಲವೋ ಎಂಬುದಕ್ಕಿಂತ, ಅವನು/ಅವಳು ಪ್ರಶ್ನೆ ಕೇಳುತ್ತಿದ್ದಾನೆಯೇ, ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದಾನೆಯೇ, ಹೊಸದನ್ನು ಪ್ರಯತ್ನಿಸಲು ಹಿಂಜರಿಯುತ್ತಿದ್ದಾನೆಯೇ ಎಂಬುದು ಮುಖ್ಯ.

ನಿಜವಾದ ಪ್ರಿಸ್ಕೂಲ್ ಮಕ್ಕಳಿಗೆ ಶಾಲೆಯ ಬಾಗಿಲು ತೆರೆದಿಡುವುದಲ್ಲ, ಬದಲಿಗೆ ಕಲಿಕೆಯ ಮೇಲಿನ ಪ್ರೀತಿಯ ಬೀಜವನ್ನು ಬಿತ್ತುತ್ತದೆ.ಪೋಷಕರೇ, ನಿಮ್ಮ ಮಗುವಿನ ಶಾಲೆ ಆಯ್ಕೆ ಮಾಡುವಾಗ ಮೇಲಿನ ಅಂಶಗಳನ್ನು ಗಮನಿಸಿ. ಮಗು ನಗುತ್ತಾ ಶಾಲೆಗೆ ಹೋಗುತ್ತಿದ್ದರೆ, ಆ ಶಾಲೆ ಸೂತ್ರವನ್ನು ಕಂಡುಕೊಂಡಿದೆ ಎಂದರ್ಥ.

ನಿಮಗೆ ಇಷ್ಟೆಲ್ಲಾ ಸೌಲಭ್ಯ ಕಲ್ಪಿಸಿರುವ ಜೊತೆಗೆ ನಿಮ್ಮ ಮಗುವಿಗೆ ವಿದ್ಯೆ ಕಲಿಕೆಗೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗಿರುವ ಎಲ್ಲಾ ಅಂಶಗಳು ಈ ಶಾಲೆಯಲ್ಲಿದೆ.

ಶಿವಮೊಗ್ಗ ನಗರದ ಬ್ಲಮಿಂಗ್ ಕಿಡ್ಸ್ ಶಾಲೆ ಪೋಷಕರು ತಮ್ಮ ಮಗುವನ್ನು ಅತ್ಯುತ್ತಮ ಶಾಲೆ ಹುಡುಕಾಟದಲ್ಲಿ ಇದ್ದರೆ ಈ ಶಾಲೆ ಅತ್ಯುತ್ತಮ ಆಯ್ಕೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶಾಲಾ ಆಡಳಿತ ಮಂಡಳಿ ಸಂಪರ್ಕಿಸಿ : 7338623355 / 9880490656

email ID: blmgkdz@gmail.com

ವಿಳಾಸ : ಬ್ಲಮಿಂಗ್ ಕಿಡ್ಸ್ ಪ್ರಿ ಸ್ಕೂಲ್ ಮತ್ತು ಡೇಕೇರ್ ಸೆಂಟರ್. ಶ್ರೀಗಂಧ,ಉಷಾ ನರ್ಸಿಂಗ್ ಹೋಂ ಎದುರು, ರೋಟರಿ ಬ್ಲಡ್ ಬ್ಯಾಂಕ್ ಹತ್ತಿರ 100 ಫೀಟ್ ರಸ್ತೆ ವಿನಾಯಕ ನಗರ ಶಿವಮೊಗ್ಗ

Prekg -Lkg- Ukg -Daycare- From 1.6 years kids.

Daycare timings: 9:30-6:30.

ನಗರದಲ್ಲಿರುವ ಮತ್ತಷ್ಟು ಅತ್ಯುತ್ತಮ ಶಾಲೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ.

Author