ಶಿವಮೊಗ್ಗ | ಹುಲಿಗಣತಿ ಕಾರ್ಯಾಚರಣೆಗಾಗಿ ಅಳವಡಿಸಲಾಗಿದ್ದ ಕ್ಯಾಮರಾ ಕಳ್ಳತನ

ಶಿವಮೊಗ್ಗ

ಶಿವಮೊಗ್ಗ, ಪುರದಾಳ್ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಹುಲಿಗಣತಿ ಕಾರ್ಯಾಚರಣೆಗಾಗಿ ಅಳವಡಿಸಲಾಗಿದ್ದ ಅತ್ಯಾಧುನಿಕ ಕಡಿಬ್ಯಾಕ್ ಕ್ಯಾಮರಾ ಕಳ್ಳತನವಾಗಿದೆ.

ಮಾರ್ಚ್ 25ರ ಸಂಜೆ ಗಸ್ತುವನಪಾಲಕರು ಪರಿಶೀಲಿಸಿದಾಗ ಕ್ಯಾಮರಾ ಸ್ಥಳದಲ್ಲಿತ್ತು. ಆದರೆ, ಮಾರ್ಚ್ 26ರ ಬೆಳಗ್ಗೆ ಅರಣ್ಯ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಕ್ಯಾಮರಾ ಇರಲಿಲ್ಲ.

ಅಂದಾಜು ₹25,000 ಮೌಲ್ಯದ ಕ್ಯಾಮರಾ ಕಳವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಸಂಬಂಧ ಶೆಟ್ಟಿಹಳ್ಳಿ ಉಪವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಂ.ಆರ್. ಈ ಕುರಿತು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author