ಭದ್ರಾವತಿ, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್.ಕೆ.ಜಂಕ್ಷನ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯಿಬ್ಬರು ಜೋಳ ತುಂಬಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ತರೀಕೆರೆ ತಾಲ್ಲೂಕಿನ ಬರಗೇನಹಳ್ಳಿ ಗೌಳಿಕ್ಯಾಂಪ್ ನಿವಾಸಿ 30 ವರ್ಷದ ಬಾಬು ಹಾಗೂ ಅವರ ಪತ್ನಿ ಮೃತರು. ಹೋಟೆಲ್ ಒಂದರಲ್ಲಿ ದೈನಂದಿನ ಕೆಲಸವನ್ನು ಮುಗಿಸಿಕೊಂಡು ಪತಿ ಹಾಗೂ ಪತ್ನಿ ಇಬ್ಬರೂ ಬೈಕ್ ನಲ್ಲಿ ಊರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಶಿವಮೊಗ್ಗದಿಂದ ತರೀಕೆರೆ ಮಾರ್ಗವಾಗಿ ತೆರಳುತ್ತಿದ್ದ ಜೋಳ ತುಂಬಿದ್ದ ಲಾರಿಯು ಬೈಕ್ಗೆ ಡಿಕ್ಕಿಯಾಗಿದೆ.
ಪರಿಣಾಮ ಕೆಳಕ್ಕೆ ಇಬ್ಬರ ಮೇಲೂ ಲಾರಿಯ ಹಿಂದಿನ ಚಕ್ರ ಹರಿದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಸಹ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.



