ಶಿವಮೊಗ್ಗ ಮೂಲದ ಉದ್ಯಮಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣು

ನವ ದೆಹಲಿ

ಶಿವಮೊಗ್ಗ, ಮೂಲತಃ ಶಿವಮೊಗ್ಗದವರಾದ ಜಾಹೀರಾತು ಉದ್ಯಮಿ 54 ವರ್ಷದ ಆನಂದ್ ಸುಬ್ಬರಾವ್ ದೆಹಲಿಯ ಗುರುಗ್ರಾಮದ ಹೋಟೆಲ್ ಒಂದರ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಬುಧವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಟೈಮ್ಸ್ ಆಫ್​ ಇಂಡಿಯಾ ರಿಪೋರ್ಟ್​ ಮಾಡಿದೆ. ರಾಷ್ಟ್ರೀಯ ಮಾದ್ಯಮದ ವರದಿಯ ಪ್ರಕಾರ, ಗುರುಗ್ರಾಮದ ಸೆಕ್ಟರ್ 49ರ ಸೊಹ್ನಾ ರಸ್ತೆಯಲ್ಲಿ ವಾಸವಿದ್ದರು. ಒಬ್ಬಂಟಿಯಾಗಿದ್ದ ಆನಂದ್ ಸುಬ್ಬರಾವ್ And And Brand Partners ಎಂಬ ಖಾಸಗಿ ಜಾಹೀರಾತು ಮತ್ತು ಬ್ರಾಂಡ್ ಕಂಪನಿಯಲ್ಲಿ ಪಾಲುದಾರರಾಗಿದ್ದರು.

ಮಂಗಳವಾರ ಗುರುಗ್ರಾಮದ ಸೆಕ್ಟರ್ 63ರಲ್ಲಿರುವ ಹೋಟೆಲ್‌ಗೆ ಆಗಮಿಸಿ ಕೊಠಡಿ ಪಡೆದುಕೊಂಡಿದ್ದ ಆನಂದ್ ಸುಬ್ಬರಾವ್ ಬುಧವಾರ ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಅವರು ಹೋಟೆಲ್ ಮಹಡಿಯಿಂದ ಜಿಗಿದಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಗೆ ಪರಿಶೀಲನೆ ವೇಳೆ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಆನಂದ್ ಸುಬ್ಬರಾವ್​ ತಮ್ಮ ಸಾವಿಗೆ ಮಾನಸಿಕ ಖಿನ್ನತೆ ಮತ್ತು ವೈಯಕ್ತಿಕ ಕಾರಣಗಳೇ ಹೊರತು ಬೇರಾರೂ ಕಾರಣರಲ್ಲ ಎಂದು ಉಲ್ಲೇಖಿಸಿದ್ದಾರೆ.

ಹೋಟೆಲ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದ್ದು, ಘಟನೆಯಲ್ಲಿ ಯಾವುದೇ ಅನುಮಾನಾಸ್ಪದ ಸನ್ನಿವೇಶಗಳು ಕಂಡುಬಂದಿಲ್ಲ. ಆನಂದ್ ಸುಬ್ಬರಾವ್​ರನ್ನ ಯಾರೂ ತಳ್ಳಿಲ್ಲ ಮತ್ತು ಅವರು ತಾವಾಗಿಯೇ ಜಿಗಿದಿರುವುದು ದೃಢಪಟ್ಟಿದೆ.

ಗುರುವಾರ ಮಧ್ಯಾಹ್ನ ಗುರುಗ್ರಾಮದಲ್ಲಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಆನಂದ್ ಸುಬ್ಬರಾವ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಶಿವಮೊಗ್ಗ ರೈಲ್ವೆ ಕಾಲೋನಿಯಲ್ಲಿ ವಾಸವಿದ್ದ ಆನಂದ್ ಸುಬ್ಬರಾವ್ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರ ಮಗನಾಗಿದ್ದ ಆನಂದ್ ಸುಬ್ಬರಾವ್ ರೈಲ್ವೆ ಕಾಲೋನಿಯಲ್ಲೇ ಬೆಳೆದಿದ್ದರು.

ಶಿವಮೊಗ್ಗದಲ್ಲಿ ಪಿಯು ಶಿಕ್ಷಣ ಪೂರೈಸಿದ ಅವರು, ನಂತರ ಮೈಸೂರಿನಲ್ಲಿ ಬಿಬಿಎಂ ಹಾಗೂ ಮಣಿಪಾಲದಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡಿದ್ದರು. ಇಂಗ್ಲಿಷ್ ಭಾಷೆಯ ಮೇಲೆ ಅತ್ಯುತ್ತಮ ಹಿಡಿತ ಹೊಂದಿದ್ದ ಇವರು, ಬೆಂಗಳೂರು ಮತ್ತು ದೆಹಲಿಯ ಪ್ರಮುಖ ಜಾಹೀರಾತು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

ತದನಂತರ And And ಸಂಸ್ಥೆಯ ಪಾಲುದಾರರಾಗಿ ಗುರುಗ್ರಾಮದಲ್ಲಿ ವಾಸವಿದ್ದರು.Half Pants Full Pants ಪುಸ್ತಕ ಬರೆದಿದ್ದ ಆನಂದ್ ಸುಬ್ಬರಾವ್ಆನಂದ್ ಸುಬ್ಬರಾವ್ ಅವರು 2017ರಲ್ಲಿ ರೈಲ್ವೆ ಕಾಲೋನಿಯ ತಮ್ಮ ಬಾಲ್ಯದ ದಿನಗಳನ್ನೇ ಆಧಾರವಾಗಿಟ್ಟುಕೊಂಡು Half Pants Full Pants – ಎಂಬ ಪುಸ್ತಕ ಪ್ರಕಟಿಸಿದ್ದರು.

ಈ ಪುಸ್ತಕದಲ್ಲಿ ಆನಂದ್ ಶಿವಮೊಗ್ಗ ಹಾಗೂ ಶಿವಮೊಗ್ಗದಲ್ಲಿನ ತಮ್ಮ ಗೆಳಯರ ಸಾಹಸದ ಕಥೆಗಳನ್ನು ಉಲ್ಲೇಖಿಸಿದ್ದಾರೆ. 2022ರಲ್ಲಿ ಇದೇ ಹೆಸರಿನ ವೆಬ್ ಸೀರೀಸ್ ಆಗಿ ಪ್ರಸಾರಗೊಂಡಿತ್ತು.

Author