ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಅಡಿಕೆ ತೋಟ ಸಂಪೂರ್ಣ ಸುಟ್ಟು ನಾಶವಾಗಿದೆ.ರಮೇಶ್ ಎಂಬುವವರ ಎರಡು ಎಕರೆ ಅಡಿಕೆ ತೋಟ, ಬುಧವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿಯ ಕೆನ್ನಾಲಿಗೆಗೆ . ಸುಟ್ಟು ಕರಕಲಾಗಿದೆ.
ಒಂದೂವರೆ ವರ್ಷದ ಅಡಿಕೆ ಸಸಿಗಳು ಭಸ್ಮವಾಗಿದ್ದು, ತೋಟದಲ್ಲಿ ಅಳವಡಿಸಿದ್ದ ಎಲ್‌ಎಲ್‌ಡಿಪಿ ಹಾಗೂ ಪಿವಿಸಿ ನೀರಿನಪೈಪ್‌ಗಳು, ಬೋರ್ ಪೈಪ್‌ಗಳು ಸುಟ್ಟು ಹೋಗಿವೆ. 1 2.5 ಲಕ್ಷ ನಷ್ಟವಾಗಿದೆ. ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯಅಧಿಕಾರಿ ಶಂಕರ್ ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅರುಣ್ ಗೌಡ ಕರಡಿಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.



