ಶಿವಮೊಗ್ಗ | ಧಿಡೀರನೆ ಹೊತ್ತು ಉರಿದ ಲಾರಿ ; ತಪ್ಪಿದ ಭಾರಿ ಅನಾಹುತ

ಶಿವಮೊಗ್ಗ

ಶಿವಮೊಗ್ಗದ ರೈಲ್ವೆಸ್ಟೇಷನ್ ಬಳಿ ನಿಂತ್ತಿದ್ದ ಗೂಡ್ಸ್ ಲಾರಿ ಬೆಂಕಿ ಆಕಸ್ಮಿಕದಿಂದ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಭಾರಿ ಅನಾಹುತ ತಪ್ಪಿದೆ.

ಇಂದು ಮುಂಜಾನೆ 5 ಗಂಟೆ ಆಸುಪಾಸಿನಲ್ಲಿ ಈ ಘಟನೆ ಸಂಭವಿಸಿದ್ದು, ಅಗ್ನಿಶಾಮಕದಳ ಕೂಡಲೇ ಸ್ಪಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಪಕ್ಕದಲ್ಲೇ ರಸ್ತೆಯುದ್ದಕ್ಕೂ ಹಲವಾರು ಲಾರಿಗಳು ನಿಂತ್ತಿದ್ದವು.

ಪ್ರತಿನಿತ್ಯ ಗೂಡ್ಸ್ ರೈಲಿನಿಂದ ಸಾಮಾಗ್ರಿಗಳನ್ನು ಇಳಿಸಲು ಮತ್ತು ಇಲ್ಲಿಂದ ಕಳುಹಿಸಲು ನೂರಾರು ಲಾರಿಗಳು ರೈಲ್ವೇ ನಿಲ್ದಾಣದ ಅಕ್ಕ-ಪಕ್ಕ ನಿಂತಿರುತ್ತವೆ.

ಶೇಷಾದ್ರಿಪುರಂ ರೈಲ್ವೆ ಮೇಲ್ ಸೇತುವೆಯ ಕೆಳಭಾಗದಲ್ಲಿ ನಿಂತ್ತಿದ್ದ ಈ ಲಾರಿ ಸಾಮಗ್ರಿಗಳನ್ನು ತುಂಬಲು ಬಂದಾಗ ಖಾಲಿ ಲಾರಿಯಾಗಿತ್ತು.

ಕೆ.ಎ.-೨೫ಬಿ-೦೮೫೫ ಎಸ್‌ಕೆಪಿ ರೋಡ್ ಲೈನ್ಸ್‌ನ ಮಹಮ್ಮದ್ ಆಬಿದ್ ಅವರಿಗೆ ಸೇರಿದ ಲಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಾರಿಯ ಮುಂಭಾಗ ಮತ್ತು ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ .

Author