ದಾವಣಗೆರೆ ದಕ್ಷಿಣ ಉಪಚುನಾವಣೆ ; ಕುಬೇರ ವರ್ಸಸ್ ಸಾಮಾನ್ಯ ವ್ಯಕ್ತಿಯ ಮಧ್ಯೆ ಚುನಾವಣೆ : ಸಂಸದ ಬಿ. ವೈ. ರಾಘವೇಂದ್ರ

ಶಿವಮೊಗ್ಗ

ಶಿವಮೊಗ್ಗ,ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ನಿನ್ನೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. ಕುಬೇರ ವರ್ಸಸ್ ಸಾಮಾನ್ಯ ವ್ಯಕ್ತಿಯ ಮಧ್ಯೆ ಚುನಾವಣೆ ನಡೆಯುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವರ ಇಲ್ಲಿ ಮಾತನಾಡಿದ ಅವರು, ಬಿಜೆಪಿ ಉಮೇದುವರ ಗೆಲ್ಲಲಿದ್ದಾರೆಂಬ ವಿಶ್ವಾಸ ವ್ಯಕ್ತಪ್ತಡಿಸಿದರು.

ಇಂಡಿಗೋ ಕಂಪನಿ ತನ್ನ ವಿಮಾನ ಯಾನವನ್ನು ಶಿವಮೊಗ್ಗದಲ್ಲಿ ಮೇ 1ರಿಂದ ನಿಲ್ಲಿಸುವುದಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು , ಈ ಸಂಬಂಧ ಈಗಾಗಲೇ ಕಂಪನಿಯ ಪ್ರಮುಖರೊಂದಿಗೆ ಮಾತುಕತೆ ನಡೆದಿದೆ.

ಸಕಾರಾತ್ಮಕವಾಗಿ ಅವರು ಸ್ಪಂದಿಸಿದ್ದು ಮೇ ತಿಂಗಳಿಂದ ಇಂಡಿಗೋ ಯಾನ ನಿಲ್ಲಿಸದಂತೆ ನಾನು ಕೂಡ ಹಲವು ಬಾರಿ ಮನವಿ ಮಾಡಿದ್ದೇನೆ. ಶಿವಮೊಗ್ಗ-ಬೆಂಗಳೂರು ವಿಮಾನ ಮಾರ್ಗ ಉಡಾನ್ ಯೋಜನೆಯಡಿ ಬರುವುದಿಲ್ಲ ಎಂದರು.

ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಬಗ್ಗೆ ಮಾvನಾಡಿದ ಸಂಸದರು, ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಮತ್ತು ರಾಜ್ಯ ೬೦-೪೦ರ ಅನುಪಾತದಲ್ಲಿ ಈ ಯೋಜನೆಗೆ ಚಿಂತಿಸಿತ್ತು, ಆದರೆ ಕೇಂದ್ರ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ.

ಸದ್ಯಕ್ಕೆ ಪರಿಸರದ ದೃಷ್ಟಿಯಿಂದ ಯೋಜನೆ ಯನ್ನು ತಡೆಹಿಡಿಯುವ ಕೆಲಸ ಆಗಿದೆ. ಯಾವುದೇ ಒತ್ತಡವನ್ನು ಹೇರಿಲ್ಲ ಎ೦ದು ಸ೦ಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

Author