ಶಿವಮೊಗ್ಗ | ಶಂಕಿತ ಮಂಗನ ಕಾಯಿಲೆ ಪತ್ತೆ

ಶಿವಮೊಗ್ಗ

ಶಿವಮೊಗ್ಗ ಮಲೆನಾಡಿನಲ್ಲಿ ಮಂಗನ ಕಾಯಿಲೆ (ಕ್ಯಾಸನೂರುಫಾರೆಸ್ಟ್ ಡಿಸೀಸ್- ಕೆಎಫ್‌ಡಿ) ಮತ್ತೆ ಪತ್ತೆ ಆಗಿದೆ.

ಹೊಸನಗರ ತಾಲೂಕು ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಕ್ಕೋಡಿ ಗ್ರಾಮದ ಮಹಿಳೆಯಲ್ಲಿ ಕೆಎಫ್‌ಡಿ ಲಕ್ಷಣ ಕಂಡು ಬಂದಿದ್ದು, ದೃಢಪಟ್ಟಿದೆ. ತಲೆ ನೋವು, ಜ್ವರ ಕಾಣಿಸಿಕೊಂಡ ಬಳಿಕ ಸೊನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ!! ಸುರೇಶ್ ರಿಂದ ಮಾಹಿತಿಯಾಗಿದೆ.

ಜಿಲ್ಲೆಯಲ್ಲಿ ಈ ವರ್ಷ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ಮಹಿಳೆಯು ಕಾಡಿನಲ್ಲಿ ಒಣ ಎಲೆ ತರಲು ಹೋದಾಗ ಉಣ್ಣೆಯಿಂದ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.

Author