ಶಿವಮೊಗ್ಗ | ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಉತ್ಸವ

ಶಿವಮೊಗ್ಗ

ಶಿವಮೊಗ್ಗ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 19ರಿಂದ 28ರವರೆಗೆ ಶ್ರೀ ರಾಮನವಮಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.

ಪ್ರತಿದಿನ ಸಂಜೆ 6.30ಕ್ಕೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.

ಕಾರ್ಯಕ್ರಮಗಳ ವಿವರ:

ಮಾ.19 (ಗುರುವಾರ) – ಯುಗಾದಿ ಹಬ್ಬದ ಅಂಗವಾಗಿ ಪಂಚಾಂಗ ಶ್ರವಣ, ಮಹಾವಿಷ್ಣು ಅಲಂಕಾರ

ಮಾ.20 (ಶುಕ್ರವಾರ) – ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ವಿಶ್ವಾಮಿತ್ರ ಯಜ್ಞ ಸಂರಕ್ಷಣೆ ಅಲಂಕಾರ

ಮಾ.21 (ಶನಿವಾರ) – ಉಪನ್ಯಾಸ ಕಾರ್ಯಕ್ರಮ (ಸೀತಾ ಪರಿಹಾರ), ಅಹಲ್ಯಾ ಶಾಪ ವಿಮೋಚನೆ ಅಲಂಕಾರ

ಮಾ.22 (ಭಾನುವಾರ) – ಶಾಸ್ತ್ರೀಯ ಸಂಗೀತ, ಸೀತಾ ಕಲ್ಯಾಣ ಅಲಂಕಾರ

ಮಾ.23 (ಸೋಮವಾರ) – ಗಮಕ ವಾಚನ ಹಾಗೂ ಉಪನ್ಯಾಸ, ಗುಹಾ ಅತಿಥ್ಯ ಅಲಂಕಾರ

ಮಾ.24 (ಮಂಗಳವಾರ) – ಸಂಗೀತ ಕಾರ್ಯಕ್ರಮ, ಕಬಂಧ ವಧೆ ಅಲಂಕಾರ

ಮಾ.25 (ಬುಧವಾರ) – ನೃತ್ಯ/ಸಾಂಸ್ಕೃತಿಕ ಕಾರ್ಯಕ್ರಮ, ಶಬರಿ ಆತಿಥ್ಯ ಅಲಂಕಾರ

ಮಾ.26 (ಗುರುವಾರ) – ಶಾಸ್ತ್ರೀಯ ಸಂಗೀತ, ವಿಭೀಷಣ ಶರಣಾಗತಿ ಅಲಂಕಾರ

ಮಾ.27 (ಶುಕ್ರವಾರ) – ಬೆಳಗ್ಗೆ ಮೂಲ ರಾಮರಿಗೆ ಮಹಾಭಿಷೇಕ, ಸಂಜೆ 5ಕ್ಕೆ ಪಟ್ಟಾಭಿಷೇಕ, 7ಕ್ಕೆ ಉತ್ಸವ, ರಾವಣ ಸಂಹಾರ ಮತ್ತು ಪುಷ್ಪಕ ವಿಮಾನ ಅಲಂಕಾರ

ಮಾ.28 (ಶನಿವಾರ) – ಸಂಜೆ 7ಕ್ಕೆ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವಪ್ರತಿದಿನ ಸಂಜೆ 5ರಿಂದ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ವಸಂತ ಸೇವೆ (ಪಾನಕ, ಕೋಸಂಬರಿ) ವಿತರಣೆ ಇರುತ್ತದೆ.

Author