ತೀರ್ಥಹಳ್ಳಿ | ಮಹಿಳಾ ಕಾಂಗ್ರೆಸ್ ನಿಂದ ಮಾ. 20ರಂದು ಪ್ರತಿಭಟನೆ : ಕಿಮ್ಮನೆ ರತ್ನಾಕರ್ ಹೇಳಿಕೆ

ಶಿವಮೊಗ್ಗ

ತೀರ್ಥಹಳ್ಳಿ, ಕೇಂದ್ರದ ಬಿಜೆಪಿ ಹಾಗೂ ತೀರ್ಥಹಳ್ಳಿ ಬಿಜೆಪಿಯ ಕೆಲವು ಸಮಸ್ಯೆಗಳ ವಿರುದ್ಧವಾಗಿ ಮಾ. 2೦ ಕ್ಕೆ ತೀರ್ಥಹಳ್ಳಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ಸಮಸ್ಯೆ ಏನಾಗ್ತಿದೆ ಇದೆ ರೀತಿ ಕಾಂಗ್ರೆಸ್ ಆಡಳಿತದಲ್ಲಿ ಆಗಿದ್ದರೆ ಬಿಜೆಪಿ ಭಾರತ್ ಬಂದ್ ಕರೆಯುತ್ತಿದ್ದರು.

ಭಾರತವನ್ನು ಭಾರತಾಂಬೆ ಅಂತ ಕರೆಯುತ್ತೇವೆ. ಇಸ್ರೇಲ್ ನ ತಂದೆ ಎಂದು ಕರೆಯೋಕೆ ಆಗುತ್ತಾ? ಇಸ್ರೇಲ್ ದೇಶವನ್ನು ಫಾದರ್ ಆಫ್ ಲ್ಯಾಂಡ್ ಎಂದು ನಮ್ಮ ಪ್ರಧಾನಿ ಹೇಳುತ್ತಾರೆ, ಇವರಿಗೆ ಏನು ಹೇಳಬೇಕು ಗೊತ್ತಿಲ್ಲ ನಮ್ಮ ದೇಶವನ್ನು ಆಡಳಿತ ಮಾಡುತ್ತಿರುವುದು ಮೋದಿಯೋ? ಅಥವಾ ಟ್ರಂಪ್? ಗೊತ್ತಾಗುತ್ತಿಲ್ಲ..

ಮೂರು ತಿಂಗಳಿಗೆ ಆಗುವಷ್ಟು ಸ್ಟಾಕ್ ನಮ್ಮ ಬಳಿ ಆಯಿಲ್ ಇದೆ ಎಂದು ಹೇಳಿದ್ದರು. ಈಗ ಅದಕ್ಕೆ ಹಣವನ್ನು ಜಾಸ್ತಿ ಮಾಡಿದ್ದಾರೆ. ಇವರು ಬಿಸಿನೆಸ್ ಮಾಡ್ತಾ ಇದ್ದಾರಾ? ಇರುವ ಸ್ಟಾಕ್ ಗೆ ಜನರ ಮೇಲೆ ಹೊರೆ ಹಾಕುತ್ತಿರುವುದು ಸರಿಯೇ? ಇನ್ನು ಎಂಟು ದಿನ ಯುದ್ಧ ನಡೆದರೆ ಹಲವರು ಮನೆ ಸೇರಬೇಕಾಗುತ್ತದೆ ಎಂದರು.

ಜ್ಞಾನೇಂದ್ರ ಅಸೆಂಬ್ಲಿಯಲ್ಲಿ ಹೀರೊ, ಇಲ್ಲಿ ಮರಳು ಹೊಡೆಯುತ್ತಿದ್ದರೂ ಕೇಳುವುದಿಲ್ಲ ಆದರೆ ಅಲ್ಲಿ ಜ್ಞಾನೇಂದ್ರ ಮಾತನಾಡುವುದು ನೋಡಿದರೆ ಇವರಷ್ಟು ಪ್ರಾಮಾಣಿಕರು ಯಾರೂ ಇಲ್ಲ ಎಂದು ತಿಳಿಯಬೇಕು. ಜ್ಞಾನೇಂದ್ರ ಅವರು ಒಳ್ಳೆಯ ವ್ಯಾಪಾರಸ್ಥ, ಅಡಿಕೆ ವ್ಯಾಪಾರ, ಸೇರಿ ಹಲವು ವ್ಯಾಪಾರ ಮಾಡಿದ್ದಾರೆ..

ನಾನು ಅಸೆಂಬ್ಲಿಯಲ್ಲಿ ಮೊದಲ ಬಾರಿ ಹೋದಾಗ ಇವರ ಕಾರು ನೋಡಿ ಒಳ್ಳೆ ಸಂಬಳ ಎಂದುಕೊಂಡಿದ್ದೆ ಆದರೆ ಅಲ್ಲಿ ಸಿಕ್ಕಿದ್ದು 21 ಸಾವಿರ.. ಇವರಿಗೆ ಅಷ್ಟೊಂದು ದುಡ್ಡು ಹೇಗೆ ಬಂತು ಅದನ್ನು ಹೇಳಬೇಕು ಎಂದರು..

ಈಗಾಗಲೇ ಮಾರಿಕಾಂಬಾ ದೇವಸ್ಥಾನ ಬಿಜೆಪಿ ಕಚೇರಿ ಆಗಿದೆ, ಮ್ಯಾಮೋಸ್ ಬಿಜೆಪಿ ಕಚೇರಿ ಆಗಿದೆ. ಇದಕ್ಕೆಲ್ಲಾ ಜ್ಞಾನೇಂದ್ರ ಅಧ್ಯಕ್ಷ.. ಈಗ ರಾಮೇಶ್ವರ ದೇವಸ್ಥಾನ ಕೂಡ ಬಿಜೆಪಿ ಕಚೇರಿ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾರೆ.

ದೇಶಕ್ಕೆ ಮೋದಿ ಹೇಗೆ ಅಪಶಕುನನೋ ಹಾಗೆ ತೀರ್ಥಹಳ್ಳಿಗೆ ಜ್ಞಾನೇಂದ್ರ ಅಪಶಕುನ ಎಂದು ವಾಗ್ದಾಳಿ ನಡೆಸಿದರು..

ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ರಾಘವೇಂದ್ರ ಶೆಟ್ಟಿ, ಆದರ್ಶ ಹುಂಚದಕಟ್ಟೆ, ಅಮರನಾಥ್ ಶೆಟ್ಟಿ, ಪೂರ್ಣೇಶ್ ಕೆಳಕೆರೆ, ಅಶ್ವಲ್ ಗೌಡ, ಶ್ರೇಯಸ್, ಮೈತ್ರಿ, ಗೀತಾ ರಮೇಶ್, ಶಬನಮ್, ಸುಶೀಲ ಶೆಟ್ಟಿ, ಗೀತಾ ರಾಘವೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.

Author