ಶಿವಮೊಗ್ಗ, ಜಿಪಂನಲ್ಲಿ ಮಹಿಳಾ ದಿನದ ನಿಮಿತ್ತ ಭಾನುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಚಿತ್ರಕಲಾ ಸ್ಪರ್ಧೆ ವಿಜೇತರು : ಮೊದಲ ಬಹುಮಾನ (ರೂ.8,000/-)ವನ್ನು ತೀರ್ಥಹಳ್ಳಿಯ ಪ್ರಕೃತಿ ಶೆಣೈ ಪಡೆದುಕೊಂಡರು.
ದ್ವಿತೀಯ ಬಹುಮಾನ (ರೂ.6,000/-) ನ್ನು ತೀರ್ಥಹಳ್ಳಿಯ ಭಾವನಾ ಹೊಳ್ಳ ಪಡೆದುಕೊಂಡಿದ್ದು, ತೃತೀಯ ಬಹುಮಾನ (ರೂ.4,000/- )ವನ್ನು ತೀರ್ಥಹಳ್ಳಿಯ ಆಶಾ ಉಮೇಶ್ ಹಾಗೂ ಎರಡು ಸಮಾಧಾನಕರ ಬಹುಮಾನ(ತಲಾ ರೂ.2,000/-) ವನ್ನು ಶಿಕಾರಿಪುರದ ಹೇಮಲತಮ್ಮ, ಶಿವಮೊಗ್ಗದ ಮನ್ವಿತಾ ಆರ್, ಆನವಟ್ಟಿಯ ಶಾಲಿನಿ ನಾಯಕ್ ಮತ್ತು ವಿಶೇಷ ಬಹುಮಾನವನ್ನು ಶಿವಮೊಗ್ಗದ ಸೌಜನ್ಯ ಆರ್ ಕೆ ಪಡೆದರು.
ವಿಜೇತರಿಗೆ ಮಾ.26 ರಂದು ನಡೆಯುವ ಕಾರ್ಯಕ್ರಮದಲ್ಲಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.



