ಶಿವಮೊಗ್ಗ ನಗರದ ಗೋಪಾಲ ಗೌಡ ಬಡಾವಣೆಯ ಆಲ್ಕೋಳ ರಸ್ತೆಯಿಂದ ಆನೆ ಸರ್ಕಲ್ ಗೆ ಸೇರಿದ100 ಅಡಿ ಆಗಲದ ರಸ್ತೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ತಂದೆ ಹಾಗೂ ಮಾಜಿ ಸಿಎಂ ಕರ್ನಾಟಕ ಕಂಡ ಜನಾನುರಾಗಿ ಸೋಲಿಲ್ಲದ ಸರದಾರ , ಆಶ್ರಯ ಅಕ್ಷಯ ವಿಶ್ವ ಆರಾಧನಾ ಹಲವು ಜನಪರ ಯೋಜನೆಗಳ ಮೂಲಕ ಇಂದಿಗೂ ಜನ ಮಾನಸದಲ್ಲಿ ಉಳಿದಿರುವ ಸಾರೆಕೊಪ್ಪ ಬಂಗಾರಪ್ಪ ನವರ ಹೆಸರನ್ನು ಅದ್ದೂರಿಯಾಗಿ ನಾಮಕರಣ ಮಾಡುವ ಮೂಲಕ ಚಾಲನೆಯೇನೊ ನೀಡಿದರು.
ನಂತರ ತಮ್ಮ ತಂದೆ ಅವರ ತಂದಂತ ಅನೇಕ ಬಡಪರ ಯೋಜನೆಗಳನ್ನ ಸ್ಮರಿಸುತ್ತ ಚಿರಕಾಲ ಯೋಜನೆಗಳು ಜನಮಾನಸದಲ್ಲಿ ಉಳಿಯಲಿದೆ ಎಂದೆಲ್ಲ ಸ್ಮರಿಸಿಕೊಂಡರು. ಆದರೆ…..??!!

ಕತ್ತಲಾಗುತ್ತಿದ್ದಂತೆ ಕುಡುಕರ ತಾಣವಾದ ಎಸ್ ಬಂಗಾರಪ್ಪ ರಸ್ತೆ..!!
ವಾಸ್ತವದಲ್ಲಿ ಮಾಜಿ ಸಿಎಂಎಸ್ ಬಂಗಾರಪ್ಪನವರ ಹೆಸರಿನ ರಸ್ತೆಯಲ್ಲಿ ಸಂಜೆ ಆಗುತ್ತಿದ್ದಂತೆ ಕುಡುಕರ ಅಡ್ಡೆಯಾಗುತ್ತಿದೆ, ಚೆನ್ನಾಂಬಿಕ ಮತ್ತು ರವಿ ವೈನ್ಸ್ ಹೆಸರಿನ ಎರಡು ವೈನ್ ಶಾಪ್ ಗಳು ಈ ರಸ್ತೆಯಲ್ಲಿದ್ದು ಕುಡುಕರು ರಸ್ತೆಯಲ್ಲಿ, ಫುಟ್ ಪಾತ್ ಎಲ್ಲೆಂದರಲ್ಲಿ ಕುಡಿಯುತ್ತ, ರಸ್ತೆಯಲ್ಲಿ ಓಡಾಡುವ ಸಜ್ಜನರಿಗೆ ಕಿರಿಕಿರಿ ಉಂಟುಗುವಂತೆ, ಯುವತಿಯರಿಗೆ ಮತ್ತು ಮಹಿಳೆಯರನ್ನ ಕೆಕ್ಕರಿಸಿ ನೋಡುತ್ತಾ, ಅಸಭ್ಯ ಸನ್ನೆ, ಡೈಲಾಗ್ ಮೊದಲಾದ ವರ್ತನೆಗಳ ಮೂಲಕ ಮಹಿಳೆಯರು ಮತ್ತು ಮಾನವಂತರು ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ.
ಬೆಳಗ್ಗೆ ಎಸ್ಪಿ ನಿಖಿಲ್ ರವರಿಗೆ ಮಾಹಿತಿ ನೀಡಿದ ಇ-ಕನ್ನಡ…!!
ಇದೆಲ್ಲ ಪರಿಸ್ಥಿತಿ ಬಗ್ಗೆ ನೆನ್ನೆ ದಿವಸ ಇ-ಕನ್ನಡ ಮಾಧ್ಯಮ ಮುಖೇಣ ಬೆಳಿಗ್ಗೆ ಬಂಗಾರಪ್ಪ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಅವರ ಗಮನಕ್ಕೆ ಈ ರಸ್ತೆಯಲ್ಲಿ ಈ ರೀತಿ ಅವ್ಯವಸ್ಥೆ ಪರಿಸ್ಥಿತಿ ಇದೆ ಎಂದು ತಿಳಿಸಿದ್ದು ಅದರಂತೆ ಎಸ್ಪಿ ನಿಖಿಲ್ ಅವರು ಸಹ ಸರಿ ಸಿಬ್ಬಂದಿಗಳನ್ನ ಕಳಿಸುತ್ತೇನೆ ಎಂದು ತಿಳಿಸಿದ್ದರು.

ರಾತ್ರಿಯಾಗುತ್ತಿದ್ದಂತೆ ಮತ್ತದೇ ಕುಡುಕರ ಅಡ್ಡೆಯಾದ ರಸ್ತೆ, ರಿಯಾಲಿಟಿ ಚೆಕ್ ನಲ್ಲಿ ಬಯಲು…!!
ಇನ್ನು ಕುಡುಕರ ರಸ್ತೆ ಮತ್ತದರ ಅವಾಂತರಗಳು ಮಹಿಳೆಯರಿಗೆ ಉಂಟಾಗುವ ಕಿರಿ ಕಿರಿಗಳು ಸಭ್ಯ ಸಮಾಜಕ್ಕೆ ಎಲ್ಲೇ ಮೀರಿದ ವರ್ತನೆಗಳು ಇವೆಲ್ಲದರ ಸಂಬಂಧ ನಮ್ಮ ಇ-ಕನ್ನಡ ಮಾಧ್ಯಮ ಸಂಜೆ ವೇಳೆಗೆ ರಿಯಾಲಿಟಿ ಚೆಕ್ ಗೆ ಇಳಿದಿತ್ತು.

ಈ ವೇಳೆಯಲ್ಲಿ ವೈನ್ ಶಾಪ್ ಗಳ ಎದುರಿನ ರಸ್ತೆ ರಸ್ತೆಯಲ್ಲಿ ಫುಟ್ ಪಾತ್ ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುತ್ತ, ಪಾನಮತ್ತರಾಗಿ ಹೆಣ್ಣುಮಕ್ಕಳನ್ನ ಅಸಭ್ಯವಾಗಿ ನೋಡುತ್ತಾ ವರ್ತಿಸುತ್ತ ಕುಳಿತಿದ್ದ ಕುಡುಕರ ಗುಂಪುಗಳು ಕಂಡು ಬಂತು. ಇನ್ನು ಕೆಲವರು ಆಟೋಗಳನ್ನ ನಿಲ್ಲಿಸಿಕೊಂಡು ಆಟೋದಲ್ಲಿ ಮದ್ಯಪಾನ ಮಾಡುತ್ತಿದ್ದರೆ ಬೈಕ್ಗಳಲ್ಲಿ ಬಂದವರು ರಾಜಕಾಲುವೆಯ ಪಕ್ಕ ಎಲ್ಲಿಂದರಲ್ಲಿ ಕುಳಿತು ಕುಡಿಯುತ್ತಾ ನಿಂತಿದ್ದರು.

ಇದೆಲ್ಲವೂ ಗೋಪಾಲಗೌಡ ಬಡಾವಣೆಯ 100 ಅಡಿ ಮಾಜಿ ಸಿಎಂ ಎಸ್ ಬಂಗಾರಪ್ಪ ಹೆಸರಿನ ರಸ್ತೆಯ ಚೆನ್ನಾಂಬಿಕ ವೈನ್ಸ್ ಹಾಗೂ ರವಿ ವೈನ್ಸ್ ಮುಂಭಾಗದಲ್ಲಿ ಕಂಡುಬಂದಿತ್ತು. ವೈನ್ ಶಾಪ್ ಗಳ ಅಕ್ಕ ಪಕ್ಕ ಜಾಗ, ರಾಜಕಾಲುವೆ, ರಸ್ತೆ ಎಲ್ಲೆಂದರಲ್ಲಿ ಕುಳಿತು ಪೊಲೀಸರ ಭಯವಿಲ್ಲದೆ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದೇವೆ ಎಂಬ ಜ್ಞಾನವಿಲ್ಲದೆ ಕುಡಿತದ ಮತ್ತಿನಲ್ಲಿ ಪರಿಜ್ಞಾನವಿಲ್ಲದಂತೆ ಎಗ್ಗಿಲ್ಲದೆ ರಾಜಾರೋಷವಾಗಿ ಮಧ್ಯಪಾನ ಸೇವನೆ ಮಾಡುತ್ತಿರುವುದು ಕಂಡು ಬಂದಿತು.
ERSS 112 ಎಂಬ ಅವ್ಯವಸ್ಥೆಯ ಪೊಲೀಸ್ ಸೇವೆ..!!
ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರು ಈ ಬಗ್ಗೆ ಗಮನಹರಿಸಬೇಕಾದ ವ್ಯವಸ್ಥೆ ಇದು. ರಾಜಾರೊಶವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕುಡಿತದ ಅಮಲು ಏರಿಸಿಕೊಂಡು ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ಅವರ ಬಗ್ಗೆ ERSS ಸಹಾಯವಾಣಿ 112 ಗೆ ಕರೆ ಮಾಡಿ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ ಹೆಣ್ಣುಮಕ್ಕಳು ಓಡಾಡಲು ಭಯದಿಂದಿರುವ ಪರಿಸ್ಥಿತಿಯಾಗಿದೆ ಎಂದು ತಿಳಿಸಿದರೆ ಅರ್ಧಗಂಟೆ ಕಾದರು ERSS ನಿಮ್ಮ ಮಿತ್ರ ಗಾಡಿ ಪತ್ತೇನೆ ಇಲ್ಲ.
ನಂತರ ಕರೆ ಬಂದಿತು ನಾವು ಶುಗರ್ ಫ್ಯಾಕ್ಟರಿ ಬಳಿ ಇದ್ದೇವೆ ಬರುತ್ತೇವೆ ಅಂತ ಅಲ್ಲಾ ಎಷ್ಟೋತ್ತಿಗೆ ಕರೆ ಮಾಡಿ ಸಮಸ್ಯೆ ಆಗುತ್ತಿದೆ ಅಂತ ತಿಳಿಸಿದರೆ 45 ನಿಮಿಷಕ್ಕೂ ಒಂದು ಗಂಟೆಯ ಎಷ್ಟೋತ್ತಿಗೊ ಗಾಡಿ ಬಂದರೆ ಅಲ್ಲಿವರೆಗೂ ಘಟನೆ ಮುಂದುವರೆಸುಕೊಂಡು ಹೋಗಲು ಅದೇನು ಸೀರಿಯಲ್ ಅಥವಾ ಸಿನಿಮಾ ನಾ?
ERSS ಸಿಬ್ಬಂದಿಯ ನೆರವಿನ ಹಸ್ತದ ಬಗ್ಗೆ ಪುಂಖಾನುಪುಂಖವಾಗಿ ಪೊಲೀಸ್ ಮತ್ತು ಪ್ರೆಸ್ ಗ್ರೂಪ್ನಲ್ಲಿ ಬರುತ್ತದೆ ಮಾಹಿತಿ..!!
ಶಿವಮೊಗ್ಗ ಪೊಲೀಸ್ ಇಲಾಖೆ ಮಾತ್ರ ERSS ಸಿಬ್ಬಂದಿಗಳು ಅಷ್ಟು ರಕ್ಷಣೆ ಮಾಡಿದರು ಇಷ್ಟು ರಕ್ಷಣೆ ಮಾಡಿದರು ಅಂತೆಲ್ಲ ಶಿವಮೊಗ್ಗ ಜಿಲ್ಲಾ ಎಸ್ ಪಿ ಕಚೇರಿಯ ಪೊಲೀಸ್ ಮತ್ತು ಫ್ರೆಶ್ ಗ್ರೂಪ್ ನಲ್ಲಿ ಸುದ್ದಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಆದರೆ ವಾಸ್ತವ ಪರಿಸ್ಥಿತಿ ಕಥೆಯೇ ಬೇರೆ ಆಗಿದೆ.

ಸಾರ್ವಜನಿಕ ರಸ್ತೆಯಲ್ಲಿ ಕುಡುಕರ ಹಾವಳಿ ಬಗ್ಗೆ ಬಂದ ದೂರಿನ ಪರಿಶೀಲನೆಗೆ ಬಂದಂತ ERSS ಗಾಡಿ ಯಾರ ಮೇಲು ಕೇಸ್ ದಾಖಲಿಸಲಿಲ್ಲ ಏನು ಮಾಡಲಿಲ್ಲ ಬದಲಿಯಾಗಿ ದೂರು ನೀಡಿದ ದೂರುದಾರರ ಮುಂದೆ ತಮ್ಮ ಅಸಹಾಯಕ ಪರಿಸ್ಥಿತಿ ಬಗ್ಗೆ ಗೊಳಾಡಲು ಪ್ರಾರಂಭ ಮಾಡಿದರು.
ಸರ್ ಇರುವುದು ಒಂದು ಗಾಡಿ ನಮ್ಮ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಂಬಳೆಬೈಲುಗು ನಾವೇ ತೆರಳುಬೇಕು, ಶುಗರ್ ಫ್ಯಾಕ್ಟರಿ ವರೆಗೂ ನಾವೇ ತೆರಳಬೇಕು ಇಲ್ಲಿಗೂ ನಾವೇ ಬರಬೇಕು ಎಂದರೆ ತಡವಾಗತ್ತೆ ಸಮಯಕ್ಕೆ ಸರಿಯಾಗಿ ಬರಲು ಕಷ್ಟವಾಗತ್ತೆ ಹಾಗೂ ಈ ಭಾಗಕ್ಕೆ ತುಂಗಾ ನಗರ ಠಾಣೆ ಯಿಂದ ಮತ್ತೊಬ್ಬ ಸಿಬ್ಬಂದಿಯಿದ್ದಾರೆ ಅವರ ಜವಾಬ್ದಾರಿ ಇದೆಲ್ಲ ಅಂತ ಹೇಳಿ ಅವರ ನಂಬರ್ ಕೊಟ್ಟು ಪ್ರಕರಣ ದಾಖಲಿಸಲು ಮತ್ತೊಂದು ಸಮಸ್ಯೆಯಿದ್ದಲ್ಲಿ ಇವರಿಗೆ ಕರೆ ಮಾಡಿ ತಿಳಿಸಿ ಎಂದು ನಾವು ಇನ್ನು ಸ್ವಲ್ಪ ಸಮಯ ಇಲ್ಲೇ ಬೀಟ್ಸ್ ಹಾಕುತ್ತೇವೆ ಅಂತ ತಿಳಿಸಿದವರೂ 60 ಸೆಕೆಂಡ್ ಕಾಲವು ಅಲ್ಲಿ ನಿಲ್ಲಲಿಲ್ಲ ಕ್ಷಣಮಾತ್ರದಲ್ಲೇ ಅಲ್ಲಿಂದ ತೆರಳಿದರು.
ಈ ರಸ್ತೆಯಲ್ಲಿ ವೈನ್ ಶಾಪ್ ಬೇಡ ಎಂದು ಪ್ರತಿಭಟನೆ ನಡೆಸಿದ್ದ ಸ್ಥಳೀಯರು…!!
ಇನ್ನು ಈ ರಸ್ತೆಯಲ್ಲಿ ವೈನ್ ಶಾಪ್ ಬೇಡ ಅಂತ ಸ್ಥಳೀಯರು ಹಲವಾರು ಬಾರಿ ಮನವಿ ಮಾಡಿದ್ದರು ಲೆಕ್ಕಿಸದೆ ಲಾಬಿ ಮತ್ತೊಂದರಿಂದ ಎರಡು ವೈನ್ ಶಾಪ್ ತೆರೆಯಲು ಅನುಮತಿ ನೀಡಿದ್ದೆನೋ ಆಗೋಗಿದೆ ಆದರೆ ಮುಖ್ಯ ಮತ್ತೊಂದು ವಿಷಯವೇನಂದರೆ ಇಲ್ಲಿ ಬಂಟರ ಭವನ, LIC ಕಚೇರಿ, ಟ್ಯಾಕ್ಸ್ ಓಫೀಸ್ ಹಾಗೂ ಓಫೀಷಿಯಲ್ ಏರಿಯಾ ಆಗಿದೆ. ಈ ಏರಿಯಾದಲ್ಲಿ ಸಂಜೆ ವೇಳೆಯಲ್ಲಿ ಮಹಿಳೆಯರು, ಸಾರ್ವಜನಿಕರು ಕೆಲಸ ಕಾರ್ಯ ಮುಗಿಸಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಹಾಗೂ ಚೌಲ್ಟ್ರಿ ಮದುವೆ ಮತ್ತೊಂದು ಕಾರ್ಯಕ್ರಮ ಸಮಾರಂಭಗಳಿಗೆ ಬಂದರೆ ಮುಗಿತು ಅವರಿಗೆ ಯಾಕಾದರೂ ಬಂದೇವೋ ಅನಿಸಬೇಕು ಅಂತ ಪರಿಸ್ಥಿತಿ ರಸ್ತೆ ರಸ್ತೆಯಲ್ಲೇ ಇದೆ ಕುಡುಕರ ಹಾವಳಿ.

ಸಚಿವ ಮಧು ಬಂಗಾರಪ್ಪನವರೆ, ಎಸ್ಪಿ ನಿಖಿಲ್ ರವರೆ ದಿವಂಗತ ಮಾಜಿ ಸಿಎಂ ಎಸ್ ಬಂಗಾರಪ್ಪನವರ ಹೆಸರಿನ ಘನತೆ ಉಳಿಸಿ..!!
ಇಂತಹ ಒಂದು ಕೆಟ್ಟ ಪರಿಸ್ಥಿತಿ ಸರಿಮಾಡಬೇಕಾದ ಕೆಲಸ ಪೊಲೀಸ್ ಇಲಾಖೆ ಮೇಲಿದೆ ಹಾಗೂ ಮಾನ್ಯ ಸಚಿವರಾದ ಮಧು ಬಂಗಾರಪ್ಪನವರೇ ನೀವು ನಿಮ್ಮ ತಂದೆಯ ಹೆಸರು ಇಟ್ಟಿದ್ದು ಸಾರ್ಥಕವಾಗುವುದು ಇಂದು ನೀವು ಭಾಷಣದಲ್ಲಿ ಒಂದು ಮಾತು ಸ್ಮರಿಸಿದ್ದೀರಿ ಬಂಗಾರಪ್ಪ ಅವರು ವಾರಕ್ಕೊಮ್ಮೆ ಮಹಿಳೆಯರಿಗೆ ಹಣ ನೀಡುತ್ತಿದ್ದರು ಯಾಕಂದ್ರೆ ಗಂಡಸಿರಿಗೆ ಹಣ ನೀಡಿದರೆ ಎಲ್ಲಾದರೂ ಅಂಗಡಿ ಕಾಣಿಸಿದರೆ ಪ್ಯಾಕೆಟ್ ಗೆ ಖರ್ಚು ಮಾಡುತ್ತಾರೆ ಅಂತ ಇಷ್ಟೆಲ್ಲಾ ಸ್ಮರಿಸುವ ನೀವುಗಳು ನಿಮ್ಮ ತಂದೆಯವರ ಹೆಸರು ದುರ್ಬಳಕೆ ಆಗದಂತೆ ಈ ಕೂಡಲೇ ತಾವುಗಳು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಈ ರಸ್ತೆಯಲ್ಲಿ ಮಾನವಂತರು ಮಹಿಳೆಯರು ನೆಮ್ಮದಿಯಾಗಿ ಓಡಾಡುವಂತೆ ಮಾಡಬೇಕಿದೆ.
ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಅಷ್ಟೇ ಅಲ್ಲ ವೀಕ್ ಎಂಡ್ ಗಳಲ್ಲಿ ಶನಿವಾರ ಮತ್ತು ಭಾನುವಾರ ಮಟ ಮಟ ಮದ್ಯಾಹ್ನವೇ ಬಿಂದಾಸ್ ಮಜಾ ಮಾಡುವ ಕುಡುಕರ ಹಾವಳಿ ರಾಜಾರೋಷವಾಗಿ ನಡೆಯುತ್ತಿದೆ.
ಹಾಂಕಾಂಗ್ ಥೈಲ್ಯಾಂಡ್ ಬ್ಯಾಂಕಾಕ್ ಗಳ ಮೊದಲಾದ ದೇಶಗಳಲ್ಲಿ ರಸ್ತೆ ರಸ್ತೆಯಲ್ಲಿ ಹೀಗೆಲ್ಲ ಅಂತೆ ಅಂತ ಕೇಳುತ್ತಿದ್ದೆವು ಆದರೆ ಶಿವಮೊಗ್ಗದ ಬಂಗಾರಪ್ಪ ರಸ್ತೆಯೇ ಈಗ ಕಣ್ಣು ಮುಂದಿದೆ.
ಸುದ್ದಿ ಸಂಬಂಧವಾದರೂ ಸಚಿವರು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಅವ್ಯವಸ್ಥೆಯನ್ನು ವ್ಯವಸ್ಥೆಯಾಗಿ ಮಾಡುವ ಮೂಲಕ ನೆಮ್ಮದಿಯ ಬಂಗಾರಪ್ಪ ರಸ್ತೆ ಎನ್ನುವಂತೆ ಮಾಡಬೇಕಾಗಿದೆ.
ಜಿ ಡಿ ಮಂಜುನಾಥ್ ರವರೆ ಈ ರಸ್ತೆಯ ಜವಾಬ್ದಾರಿ ನಿಮ್ಮದೇ ಅಲ್ಲವೇ..!??
ಸಚಿವ ಮಧು ಬಂಗಾರಪ್ಪನವರ ಆಪ್ತ ಸಹಾಯಕರಾಗಿರುವ ಜಿ. ಡಿ.ಮಂಜುನಾಥ್ ರವರು ಇದೇ ಬಡಾವಣೆಯವರು ಮುಂದೊಂದು ದಿನ ಈ ಭಾಗದ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಬೇಕೆಂಬ ಕನಸು ಹೊತ್ತವರು. ಅವರ ಕಣ್ಣ ಮುಂದೆಯೇ ಬಂಗಾರಪ್ಪ ರಸ್ತೆಯಲ್ಲಿ ಅನಾಚಾರ ನಡೆಯುತ್ತಿದ್ದರೆ ಸುಮ್ಮನಾಗಿದ್ದು ಯಾಕೆ ಎಂಬುವುದೇ ಯಕ್ಷಪ್ರಶ್ನೆ.

ಚೆನ್ನಾಂಬಿಕ ವೈನ್ಸ್ ಮತ್ತು ರವಿ ವೈನ್ಸ್ ಬಗ್ಗೆ ಇರುವ ನಿಮ್ಮ ನಡವಳಿಕೆಯನ್ನು ಈ ಭಾಗದ ಪ್ರಜ್ಞಾವಂತ ಮತದಾರರು ಗಮನಿಸುತ್ತಿದ್ದಾರೆ. ಕಾರ್ಪೊರೇಟರ್ ಆಗಬೇಕೆಂಬ ಗುರಿ ಹೊಂದಿದ್ದೆ ಹೌದಾದರೆ ಮೊದಲು ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪನವರ ರಸ್ತೆಯನ್ನು ಕುಡುಕರ ಮುಕ್ತ ರಸ್ತೆಯನ್ನಾಗಿ ಮಾಡಿ ಜೊತೆಗೆ ಬೇಕಾಬಿಟ್ಟಿ ರಸ್ತೆ ಬೀದಿಬದಿಯ ವ್ಯಾಪಾರವನ್ನು ನಿಲ್ಲಿಸಿ ನಂತರ ಮತದಾರರ ಬಳಿ ಮತ ಕೇಳಿ ಆಗ ನಿಮ್ಮ ಪ್ರಜ್ಞಾವಂತಿಕೆ ಎಲ್ಲವನ್ನು ಸಾರ್ವಜನಿಕರು ಗಮನಿಸುತ್ತಾರೆ.
ಇಲ್ಲವೇ ವೈನ್ ಶಾಪ್ ಮಾಲೀಕರ ಜೊತೆ ತಮ್ಮ ಸಂಬಂಧದ ಬಗ್ಗೆ ಇರುವ ಮಾಹಿತಿಯನ್ನಾದರೂ ಸಾರ್ವಜನಿಕರಿಗೆ ತಿಳಿಸಿ.
ಅಯಕಟ್ಟಿನ ಜಾಗದಲ್ಲಿ ತಮಗೆ ಬೇಕಾದ ಪೊಲೀಸ್ ಅಧಿಕಾರಿಗಳನ್ನು ಹಾಕಿಸಿಕೊಳ್ಳುವ ನೀವುಗಳು ಸಾರ್ವಜನಿಕರಿಗೆ ಮಾಡಿದ ಉಪಕಾರವನ್ನಾದರೂ ಬಹಿರಂಗವಾಗಿ ತಿಳಿಸಿ ದಯಮಾಡಿ ತಪ್ಪು ತಿಳಿಯಬೇಡಿ ನಿಮ್ಮ ಬಗ್ಗೆ ಅಪಾರ ಗೌರವವಿದೆ ಆದರೆ ನಿಮ್ಮ ಜವಾಬ್ದಾರಿ ಇದೆಯೋ ಇಲ್ಲವೋ ಎಂಬುದು ಬಹಿರಂಗಗೊಳ್ಳಬೇಕಾಗಿದೆ.
ಈ ಹಿನ್ನಲೆ ಕಟು ಮಾತುಗಳಿಂದ ಪ್ರಸ್ತಾಪಿಸಲಾಗಿದೆ. ರಾಜಕಾರಣದ ಸೂಕ್ಷ್ಮಗಳನ್ನು ಅರಿತವರೇ ಆಗಿದ್ದರೆ ನಿಮಗೆ ಸಿಕ್ಕ ಸದಾ ಅವಕಾಶದಲ್ಲಿ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಿ ಇಲ್ಲವೇ ಎಲ್ಲರಂತೆ ನೀವು ಒಬ್ಬರು ಎಂಬ ಸಂದೇಶ ಹೊರಹೊಮ್ಮಲಿದೆ.



