ಶಿವಮೊಗ್ಗ ನಗರದ ವಿದ್ಯಾನಗರ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿರುವ ಸಹ್ಯಾದ್ರಿ ವಿದ್ಯಾರ್ಥಿಗಳ ಹಾಸ್ಟೆಲ್ ಹಾಗೂ ಸಹ್ಯಾದ್ರಿ ಮಹಿಳಾ ವಿದ್ಯಾರ್ಥಿನಿಯರ ಹಾಸ್ಟೆಲ್ ಹಾಗೂ ರಾಗಿಗುಡ್ಡ ಕುವೆಂಪು ನಗರದ ವಿದ್ಯಾರ್ಥಿಗಳ ಸ್ಪೋರ್ಟ್ಸ್ ಹಾಸ್ಟೆಲ್ಗೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್. ಸಿ ಯೋಗೇಶ್.
ನಂತರ ಮಾತನಾಡಿ ನೆರೆ ದೇಶಗಳ ಯುದ್ಧದಿಂದ ದೇಶಾದ್ಯಂತ ಅಡುಗೆ ಅನಿಲದ ಕೊರತೆಯಿದ್ದು ಸಿಲಿಂಡರ್ ಪೂರೈಕೆ ಬಗ್ಗೆ ವಾರ್ಡನ್ ಹಾಗೂ ಸಂಬಂಧಪಟ್ಟ ಸಿಬ್ಬಂದಿ ಅಧಿಕಾರಿಗಳಿಂದ ಮಾಹಿತಿ ಪಡೆದು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕಳಿಸಿದ್ದೇವೆ.
ಸುಮಾರು 150ರಿಂದ 250 ವಿದ್ಯಾರ್ಥಿಗಳ ಸಂಖ್ಯೆ ಎಲ್ಲಾ ಹಾಸ್ಟೆಲಿನಲ್ಲಿ ಇದ್ದು ಪ್ರತಿನಿತ್ಯ ಗ್ಯಾಸ್ ಅಗತ್ಯತೆ ಇದ್ದು ಹಾಗೂ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿ ನೊಂದಿಗೂ ಕರೆ ಮಾಡಿ ಮಾತಾಡಿ ಮುಂದೆ ಕೊರತೆ ನೀಗಿಸಲು ಈ ಕೂಡಲೇ ಎಚ್ಚರಿಕೆಯ ಕ್ರಮವಹಿಸಿ ಮುಂದಿನ ಅಡುಗೆ ಸಿಲಿಂಡರ್ ಅಗತ್ಯತೆಗೆ ಒತ್ತು ನೀಡಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಮೂರು ಹೊತ್ತು ತಿಂಡಿ ಊಟಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಿ ಮತ್ತು ಮುಂದಾಲೋಚನೆಯಿಂದ ಜವಾಬ್ದಾರಿಯುತವಾಗಿ ಅಗತ್ಯ ಕ್ರಮವಹಿಸಬೇಕಾಗಿ ಆಗ್ರಹಿಸಿ ಭೇಟಿ ನೀಡಿ ವಿಚಾರಿಸಿದ್ದಾರೆ .
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್. ಸಿ. ಯೋಗೇಶ್ ಹಾಗೂ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಶಿವಕುಮಾರ್ ರವರು ಹಾಗೂ ವಿದ್ಯಾನಗರ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು ಹಾಗೂ ಮುಖಂಡರಾದ ರಂಗೇಗೌಡ ರವರು ಹಾಗೂ ಚಂದ್ರಶೇಖರ್ ರವರು ಹಾಗೂ ಇತರರು ಹಾಜರಿದ್ದರು



