ಶಿವಮೊಗ್ಗ | ಸರ್ಕಾರಿ ಶಾಲೆಗಳನ್ನು ಮುಚ್ಚುವುದಾದರೆ ಶಿಕ್ಷಕರ ನೇಮಕಾತಿ ಏಕೆ? : ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಪ್ರಶ್ನೆ?

ಶಿವಮೊಗ್ಗ

ಶಿವಮೊಗ್ಗ,ರಾಜ್ಯದ ಕಾಂಗ್ರೆಸ್ ಸರ್ಕಾರ ಮೂರು ಬಜೆಟ್ ಮಂಡಿಸಿದರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ಯಾವ ಅನುದಾನವೂ ಬಂದಿಲ್ಲ. ಒಂದೆಡೆ ಬಜೆಟ್‌ನಲ್ಲಿ 15 ಸಾವಿರ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎನ್ನುತ್ತಾ, ಇನ್ನೊಂದೆಡೆ ಸರಕಾರಿ ಶಾಲೆಗನ್ನು ಮುಚ್ಚಲಾಗುತ್ತಿದೆ.

ಶಿಕ್ಷಣ ಸಚಿವರೂ ಆಗಿರುವ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಇಲಾಖೆ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.ತೀವ್ರ ವಾಗ್ದಾಳಿ ನಡೆಸಿದರು.ಪ್ರೆಸ್ ಟ್ರಸ್ಟಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, , ಉಸ್ತುವಾರಿ ಸಚಿವರು ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಕ್ರಮ ಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದಾಗಿ ಹೇಳಿರುವುದು ಪ್ರಕಟವಾಗಿದೆ.

ಆದರೆ ಅವರು ಜಿಲ್ಲೆಯ ಅಭಿವೃದ್ಧಿಗೆ ಅನುದಾನ ತರುವಲ್ಲಿ ಸ೦ಪೂರ್ಣ ವಿಫಲರಾಗಿದ್ದಾರೆ ಎಂದರು.. ಜಿಲ್ಲೆಯಲ್ಲಿ ೧೯ ಸರ್ಕಾರಿ ಶಾಲೆ ಮುಚ್ಚಲ್ಪಟ್ಟಿದೆ ಎಂಬ ಮಾಹಿತಿ ಇದೆ. ಅದರಲ್ಲಿಯೂ ೧೯೬೪ರಲ್ಲಿ ಆರಂಭವಾದ ನಗರದ ಕಾಮಾಕ್ಷಿ ಬೀದಿಯಲ್ಲಿರುವ ಸರ್ಕಾರಿ ಶಾಲೆ ಯಾರಿಗೂ ಗೊತ್ತಾಗದ ಹಾಗೆ ಮುಚ್ಚಲ್ಪಟ್ಟು ಅಲ್ಲಿದ್ದ ವಿದ್ಯಾರ್ಥಿಗಳನ್ನು ಹೊಸಮನೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.

ಬಡವರ ಮಕ್ಕಳು ವಿದ್ಯೆ ಕಲಿಯಬಾರದು ಎನ್ನುವ ತೀರ್ಮಾನವನ್ನು ಸಚಿವರು ಮಾಡಿದ್ದಾರಾ ಎಂದು ಪ್ರಶ್ನಿಸಿದರು.ಒಂದು ಕಡೆ ಶಿಕ್ಷಕರ ನೇಮಕಾತಿ, ಇನ್ನೊಂದೆಡೆ ಶಾಲೆ ಮುಚ್ಚುವ ಕೆಲಸ ನಡೆಯುತ್ತಿದೆ. ಸಚಿವರ ಈ ನಡೆ ಖಂಡನೀಯ.

ಅವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದ ಅವರು, ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ತಡೆಗೆ ಪ್ರತ್ಯೇಕ ಪೊಲೀಸ್ ಪಡೆ ರಚಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರಿಗೆ ಸಲಹೆ ನೀಡಿದರು.

ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, ಪಕ್ಷದ ಜಿಲ್ಲಾ ಘಟಕವನ್ನು ಪುನರಚಿಸಲಾಗಿದೆ. ಸೋಮವಾರದಿಂದ ಜಿಲ್ಲಾ ಪ್ರವಾಸ ಕೈಗೊಂಡು, ತಾಲೂಕುವಾರು ಪದಾಧಿಕಾರಿಗಳು, ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಸಂಘಟಿಸುವ ಕಾರ್ಯ ನಡೆಯಲಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ನೂತನ ಕಾರ್ಯಾಧ್ಯಕ್ಷರಾಗಿ ದಾದಾಪೀರ್, ಜಿಲ್ಲಾ ಮಹಾ ಕಾರ್ಯದರ್ಶಿಯಾಗಿ ಹೆಚ್.ಆರ್. ತ್ಯಾಗರಾಜ್, ಜಿಲ್ಲಾ ಖಜಾಂಚಿಯಾಗಿ ರಮೇಶ್ ಬಿ. ನಾಯಕ್ ಅವರನ್ನು ನೇಮಿಸಲಾಗಿದೆ.

ವಿಧಾನಸಭಾ ಕ್ಷೇತ್ರದ ಶಿವಮೊಗ್ಗ ನಗರಾಧ್ಯಕ್ಷರಾಗಿ ದೀಪಕ್‌ಸಿಂಗ್ ಅವರನ್ನು ಪುನ : ನೇಮಕ ಮಾಡಲಾಗಿದೆ ಎಂದರು.

ಜಿಲ್ಲಾ ಮಹಿಳಾ ಜೆಡಿಎಸ್ ಘಟಕದ ಅಧ್ಯಕ್ಷೆ ಗೀತಾ ಸತೀಶ್ ಮಾತನಾಡಿ, ಮಾ.೧೪ರಂದು ಬೆಳಿಗ್ಗೆ ೧೧ಗಂಟೆಗೆ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಮಹಿಳಾ ದಿ ನಾ ಚ’ ರಣೆ ಹಮ್ಮಿಕೊಳ್ಳಲಾಗಿದೆ. ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಉದ್ಘಾಟಿಸುವರು ಎಂದರು.

ಪಕ್ಷದ ಮುಖಂಡರಾದ ಹೆಚ್.ಎಂ. ಸಂಗಯ್ಯ, ನರಸಿಂಹ ಗಂಧದಮನೆ, ತ್ಯಾಗರಾಜ್, ಪುಷ್ಪಾ, ಉಷಾ ನಾಯ್ಕ್, ಭವಾನಿ ನರಸಿಂಹ ಇನ್ನಿತರರು ಉಪಸ್ಥಿತರಿದ್ದರು.

Author