ಶಿರಸಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಕಳೆದ ಸೆಪ್ಟೆಂಬರ್‌ನಲ್ಲಿ ನಡೆಸಿದ ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (MIMS) ವಿದ್ಯಾರ್ಥಿನಿ ಡಾ!!. ವಿಶಾಖಾ ಹೆಗಡೆ ಅವರು ವಿಶ್ವವಿದ್ಯಾಲಯಕ್ಕೆ 6ನೇ ರ‌್ಯಾಂಕ್ ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.
ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಎಲ್ಲಾ ಸ್ನಾತಕೋತ್ತರ ವಿಭಾಗಗಳಿಗೆ ಅಗ್ರಸ್ಥಾನ ಪಡೆದಿರುವ ಡಾ. ವಿಶಾಖ, ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ಇವರು ಬೆಳಗಾವಿಯ ಬೆಳಗಾಂವ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (BIMS) ಎಂಬಿಬಿಎಸ್ (MBBS) ಪದವಿಯನ್ನು ಯಶಸ್ವಿಯಾಗಿ ಪೂರೈಸಿದ್ದರು.ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೇ, ಕಲಾ ಕ್ಷೇತ್ರದಲ್ಲೂ ಡಾ. ವಿಶಾಖ ಅಪಾರ ಸಾಧನೆ ಮಾಡಿದ್ದಾರೆ.
ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆಯಾಗಿರುವ ಇವರು, ‘ವಿದ್ವತ್’ ಪದವಿ ಹಾಗೂ ‘ರಂಗಪ್ರವೇಶ’ವನ್ನೂ ಪೂರೈಸಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಅತ್ಯುನ್ನತ ಬಾಲಶ್ರೀ ಪ್ರಶಸ್ತಿ, ರಾಜ್ಯ ಮಟ್ಟದ ಕಲಾಶ್ರೀ ಮತ್ತು ಕಲಾಪ್ರತಿಭೋತ್ಸವ ಪುರಸ್ಕಾರಗಳು ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಒಲಿದು ಬಂದಿವೆ. ಕೇಂದ್ರ ಸರ್ಕಾರದಿಂದ ಭರತನಾಟ್ಯ ಉನ್ನತ ತರಬೇತಿಗಾಗಿ ‘ಸಿಸಿಆರ್ ಟಿ’ (CCRT) ಸ್ಕಾಲರ್ ಶಿಪ್ ಹಾಗೂ ‘ಯಂಗ್ ಆರ್ಟಿಸ್ಟ್ ಫೆಲೋಶಿಪ್’ ಪಡೆದಿರುವ ಇವರು, ಬೆಂಗಳೂರು ದೂರದರ್ಶನ ಕೇಂದ್ರದ ಶ್ರೇಣಿಯುಕ್ತ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.
ಸದ್ಯ ಡಾ. ವಿಶಾಖ ಅವರು ಬೆಳಗಾವಿಯ ಜವಾಹರ್‌ಲಾಲ್ ನೆಹರು ವೈದ್ಯಕೀಯ ಕಾಲೇಜು ಹಾಗೂ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೀನಿಯರ್ ರೆಸಿಡೆಂಟ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ನೆಲೆಸಿರುವ ಶಿರಸಿಯ ಗಾಳಿಮನೆ ಗ್ರಾಮದ ಡಾ. ಜಿ.ಎಸ್. ಮಂಜುನಾಥ್ ಹೆಗಡೆ ಹಾಗೂ ನಿರುಪಮ ಮಂಜುನಾಥ್ ದಂಪತಿಯ ಪುತ್ರಿ .



