ಶಿವಮೊಗ್ಗ | ಅಕ್ರಮ Domestic ಸಿಲಿಂಡರ್ ಜಾಲ ಪತ್ತೆ ; ಪಡಿತರ ಮತ್ತು ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಶಿವಮೊಗ್ಗ

ಶಿವಮೊಗ್ಗ ನಗರದ ಸವಳಂಗ ರಸ್ತೆಯ ನೆಹರು ಮೈದಾನ ಪಕ್ಕದ ರಸ್ತೆಯಲ್ಲಿರುವ ವಿಧಾತ್ರಿ ಕೆಫೆ ಮೇಲೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ 3 ಗೃಹ ಉಪಯೋಗಿ ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಘಟನೆ ಸಂಬಂಧ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಇ-ಕನ್ನಡ ಮಾಧ್ಯಮ ಪ್ರತಿನಿಧಿಯ ಮೇಲೆ ಹೋಟೆಲ್ ಮಾಲೀಕ ಅವಿನಾಶ್ ಏಕಾಏಕಿ ಧಮ್ಕಿ ಹಾಕಿದ್ದು, ಸುದ್ದಿ ಮಾಡಿ ಅದೇನು ಕಿತ್ತು ಕೊಳ್ಳುತ್ತಿಯೋ ಕಿತ್ತಿಕೋ ಎಂದು ಅವಾಜ್ ಹಾಕಿದ್ದು.

oplus_0

ಮಾಡುತ್ತಿರುವುದೇ ಕಾನೂನು ಬಾಹಿರ ಕೆಲಸ ಅದಲ್ಲದೆ ಮಾಧ್ಯಮದವರ ಮೇಲೆ ದರ್ಪ ತೋರಿಸುತ್ತಿರುವುದು ಖಂಡನೀಯವಾಗಿದೆ.

ಕಾಳ ಸಂತೆಯಲ್ಲಿ ಈ ರೀತಿಯ ಸಿಲಿಂಡರ್ ಇಟ್ಟುಕೊಂಡಿರುವ ಬಗ್ಗೆ ಅಧಿಕಾರಿಗಳು ಮತ್ತಷ್ಟು ದಾಳಿ ಮುಂದುವರೆಸಿದ್ದಾರೆ. ಆಹಾರ ಇಲಾಖೆಯ ಉಪನಿರ್ದೇಶಕೆ ಲಕ್ಷ್ಮಿ, ಆಹಾರ ನಿರೀಕ್ಷಕ ರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ

Author