ಶಿವಮೊಗ್ಗ | ಜೆಡಿಎಸ್ ಜಿಲ್ಲಾಧ್ಯಕ್ಷೆಯಾಗಿ ಗೀತಾ ಸತೀಶ್ 3 ನೇ ಬಾರಿಗೆ ನೇಮಕ

ಶಿವಮೊಗ್ಗ

ಶಿವಮೊಗ್ಗ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಗೀತಾ ಸತೀಶ್ ಅವರು ಸತತ ಮೂರನೇ ಬಾರಿ ನೇಮಕವಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರ ಸ್ವಾಮಿ ಅವರು ಗೀತಾ ಅವರಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ನೇಮಕಾತಿ ಪತ್ರ ನೀಡಿದರು.

ತಮ್ಮನ್ನು ಮೂರನೇ ಬಾರಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ ಪಕ್ಷದ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಶಾರದಾ ಪೂರ್ಯಾನಾಯ್ಕ್, ಶಾರದಾ ಅಪ್ಪಾಜಿ, ಕೆ.ಬಿ.ಪ್ರಸನ್ನಕುಮಾರ್, ಶ್ರೀಮತಿ ರಶ್ಮಿ, ಭೋಜೇಗೌಡ ಹಾಗೂ ಕೆ.ಎನ್. ರಾಮಕೃಷ್ಣ ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Author