ಶಿವಮೊಗ್ಗ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ ವತಿಯಿಂದ
2025-26ನೇ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲೆ ಮಹಿಳೆಯರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಮಾ. 15ರಂದು ಜಿಪಂ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿಇಒ ಎನ್. ಹೇಮಂತ್,
ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ಸ್ಪರ್್ಎ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳಾ ಸ್ಪರ್ಧಿಗಳು Nature (ಪ್ರಕೃತಿ) ಎಂಬ ವಿಷಯದ ಮೇಲೆ ಚಿತ್ರಕಲೆ ಚಿತ್ರೀಕರಿಸಬೇಕಾಗಿದೆ.
ಮಹಿಳೆಯರಲ್ಲಿ ಅಡಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರತೆಗೆದು ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಮಹಿಳಾ ದಿನದ ಮಹತ್ವವನ್ನು ಸಾರುವ ಜೊತೆಗೆ ಪರಿಸರ ಹಾಗೂ ಪ್ರಕೃತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದೂ ಈ ಕಾರ್ಯಕ್ರಮದ ಪುಮುಖ ಉದ್ದೇಶವಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಪ್ರವೇಶವಿದ್ದು, ಮುಂಚಿತವಾಗಿ ತಮ್ಮ ಹೆಸರನ್ನು Online ಮೂಲಕ (https://forms.gle/rgYDA7gTqo1KsUoJ8) ನೋಂದಾಯಿಸಿಕೊಳ್ಳಬೇಕು ಎಂದರು.
ಸ್ಪರ್ಧೆಯಲ್ಲಿ ಉತ್ತಮ ಪುದರ್ಶನ ನೀಡಿದವರಿಗೆ ಕೆಳಕಂಡಂತೆ ಬಹುಮಾನಗಳನ್ನು ನೀಡಲಾಗುತ್ತದೆ:.
ಪ್ರಥಮ ಬಹುಮಾನ : ರೂ. 8,000. ದ್ವಿತೀಯ ಬಹುಮಾನ : ರೂ. 6,000. ತೃತೀಯ ಬಹುಮಾನ : ರೂ. 4,000
ಎರಡು ಪಶಂಸಾ ಬಹುಮಾನಗಳು : ರೂ. 2,000ಗಳಿರುತ್ತವೆ ಎಂದರು.
ಭಾಗವಹಿಸುವ ಮಹಿಳೆಯರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.
ವಯೋಮಿತಿ ಇರುವುದಿಲ್ಲ. ಅಭ್ಯರ್ಥಿಗಳಿಗೆ 2 x 2.5 ಅಳತೆಯ ಕ್ಯಾನ್ಸಸ್ ಅನ್ನು ಜಿಲ್ಲಾ ಪಂಚಾಯತ್ ನೀಡಲಾಗುತ್ತದೆ.
ಚಿತ್ರಕಲೆಗೆ ಇತರೆ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳು ತರಬೇಕು ಎಂದರು.
ಹೆಚ್ಚಿನ ಮಾಹಿತಿಗೆ 7760932206 ಅಥವಾ 9483815226 ಇಲ್ಲಿಗೆ ಸಂಪರ್ಕಿಸಬಹುದೆಂದರು.



