ಶಿವಮೊಗ್ಗ KSRTC ಆಡಳಿತ ವ್ಯವಸ್ಥೆಯ, ಅವ್ಯವಸ್ಥೆಯ ಬಗ್ಗೆ ಹಲವಾರು ಬಾರಿ ನಾವು ಸುದ್ದಿ ಮಾಡಿದ್ದೇವೆ, ಪರಿಹಾರ ಅಂತೂ ಸಿಕ್ಕಿಲ್ಲ.
ದಿನ ನಿತ್ಯ ಶಿವಮೊಗ್ಗ ನಗರದಲ್ಲಿ ಸಂಚಾರ ಮಾಡುವಾಗ ಹಲವಾರು ಬಾರಿ KSRTC ಬಸ್ ಹಾಗೂ ಇಲಾಖೆಯ ಅಧಿಕಾರಿಗಳ ದುರವರ್ತನೆ ನೋಡುತ್ತಾನೆ ಇರುತ್ತೇವೆ.
ಇದರ ಸಂಬಂಧ ಹಲವಾರು ಬಾರಿ ಶಿವಮೊಗ್ಗದ KSRTC ಅಧಿಕಾರಿಗಳಿಗೆ ಮನವಿ ಮಾಡಿ ತಿಳಿಸಿದ್ದು ಆಗಿದೆ. ನಾವು ಮತ್ತೇನು ಹೊಸ ವಿಚಾರ ಬರೆಯುತ್ತಿಲ್ಲ.
KSRTC ಬಸ್ ಗಳು ಎಂದಿನಂತೆ ಪ್ರಯಾಣಿಕರು ಶಿವಮೊಗ್ಗ-ಭದ್ರಾವತಿ ದಿನ ನಿತ್ಯ ಸಂಚಾರ ಮಾಡುವ ನಗರ ಸಾರಿಗೆ KSRTC ಬಸ್ ಸ್ಟಾಪ್ ಗಳಲ್ಲಿ ಕಾಯುತ್ತಿದ್ದಾಗ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ.
ಬಂದಂತ ಬಸ್ ಗಳು ಒಮ್ಮೆಲೇ ಎರಡು ಮೂರು ಒಟ್ಟಿಗೆ ಬಂದರೆ, ಗಂಟೆಗಟ್ಟಲೆ ಬಸ್ ಬಸ್ ಬರುವುದಿಲ್ಲ ಹಾಗೂ ಎಷ್ಟೋ ಹೊತ್ತು ಕಾಯುತ್ತ ನಿಂತಿದ್ದಾಗ ಬರುವಂತ ಬಸ್ ಗಳು ನಿಲ್ಲಿಸುವುದೇ ಇಲ್ಲ.
ಈ ಬಿರು ಬೇಸಿಗೆಯಲ್ಲಿ ಮಹಿಳೆಯರು ಮಕ್ಕಳು ವಯೋ ವೃದ್ಧರು ಬಡ ಕೂಲಿ ಕಾರ್ಮಿಕರು ಬಾಣಂತಿಯರು, ಪುಟ್ಟ ಮಕ್ಕಳನ್ನ ಬಿಸಿಲಿನಿಂದ ಸೀರೆಯ ಸೆರೆಗಿನಲ್ಲಿ ಪುಟ್ಟ ಮಕ್ಕಳು ತಲೆಗೆ ಬಿಸಿಲು ತಾಗದಂತೆ ಸೆರಿಗಿನಲ್ಲಿ ಮಗುವಿನ ತಲೆ ಮುಚ್ಚಿ ಬಸ್ ನಿಲ್ದಾಣದಲ್ಲಿ ಕಾಯುತ್ತ ಇನ್ನೇನು KSRTC ಬಸ್ ಬಂತಪ್ಪ ಸರ್ಕಾರದ ಶಕ್ತಿ ಯೋಜನೆಯಿಂದ ನಮಗೊಂದು ನಾಲ್ಕು ಕಾಸು ಉಳಿಯಲಿದೆ ಎಂಬ ಯೋಚನೆಯಿಂದ , ಉಚಿತ ಪ್ರಯಾಣದಿಂದ ಅಂತ ಬಸ್ ಗೆ ಕೈ ಮಾಡಿದಲ್ಲಿ ಅದು ಕೂಡ ಬಸ್ ಸ್ಟಾಪ್ ತನಕ ಬಂದು ನಿಂತು ಕೈ ಮಾಡಿದರೆ ಅತ್ತ ನಿರ್ವಾಹಕ ಆಗಲಿ ಅಥವಾ ಚಾಲಕ ಆಗಲಿ ಬಸ್ ನಿಲ್ಲಿಸದೆ ಮಾನವೀಯತೆ ತೋರದೆ ಬಸ್ ನಿಲ್ಲಿಸದೆ ಹೋಗುತ್ತಿದ್ದಾರೆ ಎಂಬುದು ಪ್ರಯಾಣಿಕರ ಆರೋಪವಾಗಿದೆ .
ಬಸ್ ಹಿಂಭಾಗದಲ್ಲಿ ಮಾತ್ರ ಪ್ರಾಣಿಗಳ ಮೇಲೆ ದಯೆ ಇರಲಿ ಎಂಬ ಸ್ಟಿಕರ್, ಜನರಿಗೆ ಅನಿಸುವ ಪ್ರಕಾರ ಬಿಸಿಲಲ್ಲಿ ಬಸ್ ಸ್ಟಾಪ್ ನಲ್ಲಿ ಕಾಯುವ ಮಹಿಳೆಯರು, ವಯೋ ವೃದ್ಧರು, ಕೂಲಿ ಕಾರ್ಮಿಕರು ಇದೆ ರೀತಿ ನಮ್ಮ ಕುಟುಂಬ ಆಗಿದ್ದರೆ ನಾವು ಹೀಗೆ ಅಮಾನವೀಯವಾಗಿ ಬಸ್ ನಿಲ್ಲಿಸದೆ ಹೋಗುತ್ತಿದ್ದೇವೆ? ನಾವು ಸಹ ಪ್ರಾಣಿಗಳಾಗಿ ಇದ್ದಿದ್ದರೆ ದಯೆ ತೋರಿಸುತ್ತಿದ್ದಾರ? ಎಂಬ ಪ್ರಶ್ನೆಯ ನಿರೀಕ್ಷೆಯಲ್ಲಿ ಶಿವಮೊಗ್ಗದ ಜನತೆ..!
ಹಾಗೂ ಸಮಯಕ್ಕೆ ಸರಿಯಾಗಿ ಬಸ್ ಗಳು ಬಾರದೆ, ಬಂದಂತ ಯಾವದೋ ಬಸ್ನ ಮಗೇನು ಆಗಬೇಕು ಎಂಬಂತೆ ವರ್ತಿಸುತ್ತಿದ್ದೇವ ಎಂಬ ಮಾನವೀಯತೆಯನ್ನ ಸಹ ಮರೆತು ಬಸ್ ನಿಲ್ಲಿಸದೆ ಹೋಗುತ್ತಾರೆ ಚಾಲಕರು ಮತ್ತು ನಿರ್ವಾಹಕರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರದ ನಿರೀಕ್ಷೆಯಲ್ಲಿ ಶಿವಮೊಗ್ಗದ ನಾಗರಿಕರರು?
ಹಾಗೂ ಬಸ್ ನಿಲ್ಲಿಸದೆ ಹೋದಾಗ ಅಸಹಾಯಕ ಪರಿಸ್ಥಿತಿಯಲ್ಲಿ ಅದೇ ಬಿಸಿಲಲ್ಲಿ ಯಾವದಾದ್ರು ಆಟೋ ಬಂದಾಗ 150₹ ಅಥವಾ 200₹ ವೆಚ್ಚ ಮಾಡಿ ಬಸ್ ನಲ್ಲಿ ಉಚಿತ ಪ್ರಯಾಣ ಮಹಿಳೆಯರಿಗೆ ಹಾಗೂ ಏನೋ ಒಂದು 10₹ 15₹ ಕೊಟ್ಟು ವಯಸ್ಸಾದವರು, ಕೂಲಿ ಕಾರ್ಮಿಕರು, ಬಡ ಜನತೆ ನಗರಕ್ಕೆ ಆಸ್ಪತ್ರೆ ಮತ್ತೊಂದು ತಮ್ಮದೇನೋ ಕೆಲಸಕ್ಕೆ ಬರುವವರು ತಮ್ಮಲ್ಲಿ ಹಿಡಿಶಾಪ ಹಾಕಿಕೊಂಡು ನಮ್ಮ ಕರ್ಮ ಅಂದುಕೊಂಡು ನಗರಕ್ಕೆ ಪ್ರತಿನಿತ್ಯ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಇದು ಪ್ರತಿನಿತ್ಯ ಶಿವಮೊಗ್ಗದಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರವೇ ಸರಿ. ಹಾಗೂ ಯಾವದೋ ಕೆಲವೊಂದು ಬಸ್ ಬರುತ್ತವೆ ನಿಲ್ಲಿಸುತ್ತವೆ ಆ KSRTC ಬಸ್ ಗಳೊ ರಶ್ ನೇತಾಡಿಕೊಂಡು ಬರಬೇಕಾದ ಪರಿಸ್ಥಿತಿ.
ತೀರ ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಸಹ KSRTC ಬಸ್ ಸರಿಯಾಗಿ ನಿಲ್ಲಿಸುತ್ತಿಲ್ಲ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ ಅಂತ ಕಾಂಗ್ರೆಸ್ ಮುಖಂಡರೊಬ್ಬರೂ KSRTC ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮಾಹಿತಿ ತಿಳಿಸುವ ಕುರಿತು ಫೇಸ್ಬುಕ್ ನಲ್ಲಿ ವಿಡಿಯೋ ಹರಿಬಿಟ್ಟಿದ್ದರು.
ಹಾಗೂ ಹಲವಾರು ಬಾರಿ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು KSRTC ಅಧಿಕಾರಿಗಳ ಗಮನಕ್ಕೆ ಎಷ್ಟೋ ಬಾರಿ ಮಾಹಿತಿ ಸಹ ನೀಡಲಾಗಿದೆ.
ಆದರೆ KSRTC ಅಧಿಕಾರಿಗಳು ಮಾತ್ರ ಮನುಷ್ಯತ್ವ ಇಲ್ಲದಂತೆ, ಯಾರೇ ಎಷ್ಟಾದರೂ ದೂರು ನೀಡಿದರು ಅದನ್ನು ಕಂಪ್ಲೇಂಟ್ ರೆಜಿಸ್ಟರ್ ಗೆ ಹಾಕುತ್ತೇವೆ ಅನ್ನುವುದು ಶಿವಮೊಗ್ಗ KSRTC ಅಧಿಕಾರಿಗಳ ಉವಾಚವಾಗಿದೆ .
ಜನಸಾಮಾನ್ಯರ ದಿನ ನಿತ್ಯದ ನೋವು ಸಂಕಟ KSRTC ಅಧಿಕಾರಿಗಳಿಗೆ ಅರ್ಥ ಆಗುವುದಿಲ್ಲ ಬಿಡಿ ಯಾಕಂದ್ರೆ ಅವರೆಲ್ಲ ಸರ್ಕಾರದಿಂದ ನೇಮಕವಾಗಿರುವ ಅಧಿಕಾರಿಗಳು, AC ಚೇಂಬರ್ ಹಾಗೂ ಕಾರ್ ಗಳಲ್ಲಿ ಓಡಾಟ ಮಾಡುವವರಿಗೆ ಸರ್ಕಾರದ ಶಕ್ತಿ ಯೋಜನೆಯ ಬಡಪಾಯಿಗಳ ಕಷ್ಟ ಏನಂತ ಅರ್ಥ ಆಗಲಿದೆ? ಎಂಬುದು ಪ್ರಯಾಣಿಕರ ಆಕ್ರೋಶವಾಗಿದೆ.
ಒಂದೊಂದು ರೂಪಾಯಿಗು ಕಷ್ಟಪಡುವ ನಮ್ಮ ಬಡ ತಾಯಂದಿರ, ಹೆಣ್ಣುಮಕ್ಕಳ ಕಷ್ಟವಾದರೂ ಹೇಗೆ ಮಾನವೀಯತೆಯೇ ಇಲ್ಲದ KSRTC ಅಧಿಕಾರಿಗಳಿಗೆ ಅರ್ಥ ಆಗತ್ತೆ ಬಿಡಿ…!
ಇನ್ನು ಮುಂದುವರೆದು ಶಿವಮೊಗ್ಗ ನಗರದ KSRTC ಬಸ್ ನಿಲ್ದಾಣದಲ್ಲಿ ಶೌಚಾಲಯಗಳಲ್ಲಿ ಮಹಿಳೆಯರಿಂದ ಶೌಚಾಲಯಕ್ಕೆ 10₹ ಪಡೆಯುತ್ತಾರೆ ಹಾಗೂ ಸ್ನಾನಕ್ಕೆ 50₹ ತೆಗೆದುಕೊಳ್ಳುತ್ತಾರೆ.
ಇನ್ನು ಈ ಸಂಬಂಧ ಹಲವು ಸುದ್ದಿಗಳು ಬಂದಿದೆ.ಇದು ಮುಂದುವರೆದಿದೆ. ತೀರ ಶೌಚಾಲಯದಲ್ಲಿ ಸಹ ಹಣ ದಾಹಕ್ಕೆ ಇಳಿದಿರುವುದು ಅಸಹ್ಯ ಸಂಗತಿಯಾಗಿದೆ.
ಅದು ಯಾರು ಟೆಂಡರ್ ತೆಗೆದುಕೊಂಡು ಈ ರೀತಿ ಶೌಚಾಲಯದ ಹಣವನ್ನು ತಿಂತಿದ್ದಾರೆ ಅಂತವರ ಮೇಲೆ ಕ್ರಮವಿಲ್ಲದಾಗಿದೆ. ಪ್ರಯಾಣಿಕರು ಕರ್ಮ ಅದು, ಅದುಕ್ಕೆ ಏನು ಮಾಡಲು ಸಾಧ್ಯ ಮೂತ್ರ ವಿಸರ್ಜನೆ ಹಾಗೂ ಮಲ ವಿಸರ್ಜನೆ ಮನುಷ್ಯನಿಗೆ ಅನಿವಾರ್ಯ ಹಾಗಾಗಿ ಯಾರು ಬಂದು ಕಂಪ್ಲೇಂಟ್ ಕೊಡುತ್ತಾರೆ ಬೇರೆ ಬೇರೆ ಊರಿಗೆ ತೆರಳುತ್ತಾರೆ ಹಾಗಾಗಿ 10₹ ಅಥವಾ 50₹ ಕೊಟ್ಟು ಅವರ ಕರ್ಮ ಅನುಭವಿಸಿಕೊಳ್ಳಲಿ ಎಂಬುದು ಅಧಿಕಾರಿಗಳ ಧೋರಣೆಯಾಗಿದೆ ಎಂಬುದು ಮುಖ್ಯ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮಾತು.
ಇನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮೂಲಕ ನಗರದಿಂದ ದಾವಣಗೆರೆ, ಚಿತ್ರದುರ್ಗ ಬಸ್ ಗಳು ದಿನ ನಿತ್ಯ ಸಂಚಾರ ಮಾಡುತ್ತಿದ್ದಾರೆ ಹಾಗೂ ಎಂ. ಆರ್. ಎಸ್ ಸಹ್ಯಾದ್ರಿ ಕಾಲೇಜು ಬಳಿ ಜಿಲ್ಲಾಧಿಕಾರಿ ಆದೇಶ ಸಂಬಂಧ ಬೇರೆ ಜಿಲ್ಲೆಗೆ ತೆರಳುವ ಬಸ್ ಗಳು ತರೀಕೆರೆ ಮಾರ್ಗವಾಗಿ ಸಂಚಾರ ಮಾಡಬೇಕು ಎಂಬ ಕಣ್ಣಿಗೆ ಕಾಣಲಿ ಅಂತ ತುಂಬಾ ದೊಡ್ಡದಾಗಿ ಫ್ಲೆಕ್ಸ್ ಅಳವಡಿಸಿದ್ದಾರೆ.
ಆದರೂ ಸಹ KSRTC ಬೇರೆ ಜಿಲ್ಲೆಗೆ ತೆರಳುವ ಬಸ್ ಗಳು ಮಾಚೇನಹಳ್ಳಿ ಮಾರ್ಗವಾಗಿ ತೆರಳುತ್ತಿವೆ ಹಾಗೂ ಮಾಚೇನಹಳ್ಳಿ ಡೈರಿ ಬಳಿ ಭೂ ಕುಸಿತ ಆಗಿರುವ ಕಾರಣ ಸುರಕ್ಷಿತ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ಪ್ರಯಾಣಿಕರ ಜೀವದ ಬೆಲೆಗಿಂತ ಅಲ್ಲಿಂದಾನೆ ಸಂಚಾರ ಮಾಡುವುದು KSRTC ಬಸ್ ಗಳಿಗೆ ತುಂಬಾ ಅನಿವಾರ್ಯವಾಗಿದೆ.
ಹಾಗೂ ನಗರದಲ್ಲಿ ಯಾವತ್ತೋ ಒಂದಿನ ವಿಪರೀತ ಟ್ರಾಫಿಕ್ ಇರುವ ಕಾರಣ ದೊಡ್ಡ KSRTC ಬಸ್ ಗಳಿಂದ ಅಪಘಾತವಾಗಿ ಸಾವು ನೋವು ಸಂಭವಿಸುವ ತನಕ ಶಿವಮೊಗ್ಗ ಜಿಲ್ಲಾಧಿಕಾರಿಗಳು ಸಹ ತೀವ್ರ ಸ್ವರೂಪವಾಗಿ KSRTC ಮೇಲೆ ಕಾನೂನು ಕ್ರಮ ಜರುಗಿಸುವುದಿಲ್ಲವೇನೋ ಎಂಬದು ಇಂದಿಗೂ ನಿಘುಡವಾಗಿ ಪ್ರಶ್ನೆ ಉಳಿದಿದೆ .
ಸಿಗ್ನಲ್ ಗಳಲ್ಲಿ ಎರಡು KSRTC ಬಸ್ ನಿಂತರೆ ಹಿಂಬದಿ ದ್ವಿಚಕ್ರ ವಾಹನ ಸವಾರರಿಗೆ ಸಿಗ್ನಲ್ ಕಾಣಿಸುವುದೇ ಇಲ್ಲದಾಗಿದೆ.
ಇನ್ನು ಟ್ರಾಫಿಕ್ ಪೊಲೀಸ್ ಇಲಾಖೆಯು ಸಹ ನಗರದೊಳಗೆ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆ ವರೆಗೂ ಸಂಚಾರ ಮಾಡಬೇಡಿ ನಗರದೊಳಗೆ ವಾಹನ ಸವಾರರಿಗೆ ತೊಂದರೆ ಉಂಟಾಗಿಲಿದೆ ಎಂದು ಎಚ್ಚರಿಸಿದ್ದು ಆಗಿದೆ.
ಮುಂದುವರಿದು ಬೇರೆ ಜಿಲ್ಲೆಗೆ ತೆರಳುವ KSRTC ಬಸ್ ಗಳ ಸಂಬಂಧ ಟ್ರಾಫಿಕ್ ಪೊಲೀಸ್ ಅಥವಾ KSRTC ಅವರು ಅಶೋಕ ವೃತ್ತದಲ್ಲಿ ಬೇರೆ ಜಿಲ್ಲೆಗೆ ತೆರಳುವ ಬಸ್ ಗಳು ನಗರದೊಳಗೆ ಹೋಗದಂತೆ ತಡೆಯಬಹುದಾಗಿದೆ. ಅದನ್ನು ಸಹ ಮಾಡುತ್ತಿಲ್ಲ.
ಇನ್ನು KSRTC ಡಿಸಿ ಅವರಿಗೆ ಮೇಲ್ಕಂಡ ಎಲ್ಲವು ತಿಳಿದಿರುವ ವಿಚಾರವೇ ಆಗಿದೆ. ಇಷ್ಟೆಲ್ಲಾ ಸಮಸ್ಯೆ ಇಟ್ಟುಕೊಂಡಿದ್ದರು ಸಹ, KSRTC ಅಧಿಕಾರಿಗಳ ಮೇಲೆ ಕ್ರಮ ಜರುಗಿಸದೆ ಇರುವುದು ಹಲವು ಅನುಮಾನಕ್ಕೆ ಈಡು ಮಾಡುತ್ತಿದೆ.
ಹಾಗೂ ಅದು ಯಾವ ಪ್ರಭಾವಿಗಳ ಶಕ್ತಿ KSRTC ಅಧಿಕಾರಿಗಳನ್ನು ಕಾಪಾಡುತ್ತಿದ್ದೇಯೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ?
ಇನ್ನು ಈ ಎಲ್ಲಾ ಘಟನೆ ಸಂಬಂಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ರಾಜ್ಯ ಸರ್ಕಾರದಿಂದ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ್ರು ಬಳಿ ನಗರದಲ್ಲಿ KSRTC ಅಧಿಕಾರಿಗಳ ದುರ್ವರ್ತನೆ ಸಹ ಸಭೆಯಲ್ಲಿ ತಿಳಿಸಿದ್ದಾರೆ ಎಂಬುದು ಸಹ ಮಾಹಿತಿಯಾಗಿದೆ.
ಸರ್ಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆ ಅನ್ನುವುದು ಶಿವಮೊಗ್ಗದ ಪ್ರಯಾಣಿಕರಿಗೆ ಮಾತ್ರ ಕನಸಾಗಿದೆ.
ಒಟ್ಟಾರೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಶಿವಮೊಗ್ಗದತ್ತ ದೃಷ್ಟಿ ಹಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಶಿವಮೊಗ್ಗ KSRTC ಆಡಳಿತಕ್ಕೆ ಪ್ರಾಮಾಣಿಕ ಅಧಿಕಾರಿಗಳ ನಿಯೋಜನೆ ಮಾಡುವ ಮೂಲಕ ಸರ್ಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆ ಸಮರ್ಪಕವಾಗಿ ಪ್ರಯಾಣಿಕರಿಗೆ ದೊರಕುವುಂತೆ ಮಾಡುವುದು ಶಿವಮೊಗ್ಗ ಜಿಲ್ಲೆಯಲ್ಲಿ ಅವಶ್ಯಕತೆ ಹೆಚ್ಚಾಗಿದೆ ಎಂಬುದು ಶಿವಮೊಗ್ಗದ ಪ್ರಯಾಣಿಕರ ಒಕ್ಕರಲ ಒತ್ತಾಯವಾಗಿದೆ.
ಕೊನೆಯದಾಗಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಮುಖಂಡರುಗಳೇ ಶಿವಮೊಗ್ಗದ KSRTC ಅಧಿಕಾರಿಗಳ ದುರ್ವರ್ತನೆ ಕುರಿತು ತಮ್ಮದೇ ಸರ್ಕಾರಕ್ಕೆ ಮಾಹಿತಿ ಮನವಿ ತಿಳಿಸಿ, ತಿಳಿಸಿ ಸುಸ್ತಾಗಿ ಬಸವಳಿದಿದ್ದಾರೆ.
KSRTC ಅಧಿಕಾರಿಗಳ ದರ್ಪ ಎಲ್ಲಿಗೆ ಹೋಗಿರಬಹುದು ಎಂಬುದರ ಬಗ್ಗೆ ಕಾಂಗ್ರೆಸ್ ನಾಯಕರುಗಳೆ ಎಳೆ ಎಳೆಯಾಗಿ ಸಭೆಗಳಲ್ಲಿ ಮಾಹಿತಿ ನೀಡಿದರು ಸಹ ಕ್ರಮ ಜರುಗಿಸಲು, ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜನೆ ಮಾಡಲು ರಾಜ್ಯ ಸರ್ಕಾರಕ್ಕೆ ಈ ಪರಿ ಸಮಸ್ಯೆ ಉಂಟಾಗಿದ್ದಿಯಾ ಎಂಬುದು ಪ್ರಶ್ನೆಯಾಗಿ ಉಳಿದಿದೆ..!



