ಶಿವಮೊಗ್ಗ | ಗಾಂಜಾ ವಿರುದ್ಧ ಝೀರೋ ಟಾಲರೆನ್ಸ್ : ಎಸ್ಪಿ ಮಿಥುನ್ ಕುಮಾರ್ ಹೇಳಿಕೆ

ಶಿವಮೊಗ್ಗ

ಶಿವಮೊಗ್ಗ, ಇಂದು ಡಿಎಆರ್ ನಲ್ಲಿ ಗಾಂಜಾ ಸಂಬಂಧ ಪಟ್ಟಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿಕೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ನಗರದಲ್ಲಿ ಗಾಂಜಾ ವಿರುದ್ಧ ಜೀರೋ ಟಾಲರೆನ್ಸ್ ಹೊಂದಿದ್ದೇವೆ. ಈ ವರ್ಷ ಗಾಂಜಾ ಪ್ರಕರಣ ಹೆಚ್ಚಾಗಿದೆ. 420 ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ. ಇಲಾಖೆಯಿಂದ ಪ್ರೋ ಆಕ್ಟವ್ ಆಗಿ ಗಾಂಜಾ ತಪಾಸಣೆ ನಡೆಸಲಾಗುತ್ತಿದೆ 4209 ಜನರನ್ನ ಗಾಂಜಾ ಪರೀಕ್ಷೆ ನಡೆಸಿದರೆ 420 ಗಾಂಜಾ ಸೇವನೆ ಪತ್ತೆಯಾಗಿದೆ ಎಂದರು.

ಏರಿಯಾ ಡಾಮಿನೇಷನ್ ಮಾಡಿದಾಗ ಜನರನ್ನ ಪಿಕ್ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ ಏರಿಯಾ ಡಾಮಿನೇಷನ್ ಮಾಡಲಾಗುತ್ತಿದೆ. 420 ಗಾಂಜಾ ಪ್ರಕರಣದಲ್ಲಿ ಅರ್ಧಕ್ಕೂ ಹೆಚ್ಚು ಶಿವಮೊಗ್ಗ ನಗರದಲ್ಲಿ 279 ಪ್ರಕರಣ ಪತ್ತೆಯಾಗಿದೆ.

ಗಾಂಜಾ ಪೆಡ್ಲರ್ ಗಳನ್ನ ಪತ್ತೆಹಚ್ಚಲು ಡ್ರೋಣ್ ಸಹ ಬಳಕೆ ಮಾಡಲಾಗುತ್ತಿದೆ. ಇಮೇಜ್ ಕ್ಯಾಪ್ಚರ್ ಮಾಡಲಾಗುತ್ತಿದೆ. ಎಲ್ಲಿಂದ ತರಲಾಗಿದೆ ಸಪ್ಲೇ ಮಾಡಲಾಗಿದೆ ಎಂಬುದನ್ನ ಪತ್ತೆ ಮಾಡಲಾಗುತ್ತಿದೆ ಎಂದರು.

ಗಾಂಜಾ ಜಾಗೃತಿ ಕಾರ್ಯಕ್ರಮಗಳನ್ನ ಮಾಡಲಾಗಿದೆ. 2025 ನ.30ರ ತನಕ 613 ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ದೂರು ಬರುವ ಕಡೆ ರ್ಯಂಡಮ್ ದಾಳಿ ನಡೆಸಲಾಗುತ್ತಿದೆ. 929 ಗಾಂಜಾ ದಾಳಿ ನಡೆದಿದೆ. ಸಾರ್ವಜನಿಕರು ಸಹ ಗಾಂಜಾ ಸೇವನೆ ಬಗ್ಗೆ ಮಾಹಿತಿ ನೀಡಿದರೆ ದೂರು ನೀಡಿದವರ ಹೆಸರನ್ನ ಗೌಪ್ಯವಾಗಿ ಇಡಲಾಗುವುದು. ಒಂದು ವೇಳೆ ಠಾಣೆಗೆ ಕೊಡಲು ಇಷ್ಟವಿಲ್ಲದಿದ್ದರೆ ನನಗೆ ನೇರವಾಗಿ ಮಾಹಿತಿ ನೀಡಿ ಎಂದು ತಿಳಿಸಿದರು.

35 ಪ್ರಕರಣವನ್ನ ಪೆಡ್ಲರ್ ವಿರುದ್ದ 80 ಕೇಸ್ ದಾಖಲಿಸಲಾಗಿದೆ. ಗಾಂಜಾ ಖರೀದಿಸುವ ಜಾಗಕ್ಕೂ ನಮ್ಮ ತಂಡವನ್ನ ಕಳುಹಿಸಲಾಗಿದೆ. ಸರ್ಕಾರ ಆಂಟಿ ಆರ್ಕಡ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇವರು ಪ್ರತಿತಿಂಗಳು ಎನ್ ಕಾಲ್ಡ್ ಮೀಟಿಂಗ್ ಸಹ ನಡೆಯುತ್ತಾರೆ. ಇವರು ಶಾಲೆಯಲ್ಲಿ ಕಾಲೇಜಲ್ಲಿ ವ್ಯಸನ ಹೆಚ್ಚಾಗುವ ಬಗ್ಗೆ ಮಾಹಿತಿ ನೀಡುತ್ತಾರೆ. ಇವರು ನೀಡಯವ ಸಲಹೆಗಳನ್ನ ಪೊಲೀಸ್ ಇಲಾಖೆ ಪಡೆಯಲಾಗುತ್ತಿದೆ. ನಂತರ ಅದನ್ನ ಕಾರ್ಯಗತ ಮಾಡುತ್ತದೆ ಎಂದರು.

ಸಮಿತ್ರ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಗಾಂಜಾ ವ್ಯಸನಿ ಆರೋಪಿಗೆ ಪೊಲೀಸ್ ಸಿಬ್ಬಂದಿ ಒಬ್ಬರನ್ನ ಅಟ್ಯಾಚ್ ಮಾಡಲಾಗುತ್ತದೆ. ಅವರ ಮೇಲೆ ನಿಗಾ ಇಡಲಾಗುತ್ತಿದೆ.

ಆರೋಪಿ ವ್ಯಸನ ಮುಕ್ತವಾಗುವವರೆಗೂ ಪೊಲೀಸ್ ಸಿಬ್ಬಂದಿ ಇರುತ್ತಾರೆ. 18 ರಿಂದ 20 ವಯಸ್ಸಿನವರು ಗಾಂಜಾ ಸೇವನೆಯಲ್ಲಿ ಹೆಚ್ಚಿದ್ದಾರೆ. ಕಾಲೇಜ್ ಡ್ರಾಪ್ಸ್ ಔಟ್ ಆದವರು ಹೆಚ್ಚಿದ್ದಾರೆ. ಗಾಂಜಾವನ್ನ ಸ್ಥಳೀಯವಾಗಿ ತರಲಾಗುತ್ತಿರುವುದು ಕಡಿಮೆ, ಆದರೆ ಹೊರ ರಾಜ್ಯ ಮತ್ತು ಜಿಲ್ಲೆಯಿಂದ ತರಲಾಗುತ್ತಿದೆ ಎಂದು ತಿಳಿಸಿದರು.

Author