ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿ ಹಾದು ಹೋಗಿರುವ ರಾಜಕಾಲುವೆಯನ್ನ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿ ಒತ್ತುವರಿ ಮಾಡಿರುವುದು ಇದೀಗ ಜಗಜ್ಜಾಹಿರು.
ಈ ಕುರಿತಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸದೇ ಕ್ರಮ ಜರುಗಿಸದೆ ಇರುವ ಸಂಬಂಧ ಲೋಕಾಯುಕ್ತದಲ್ಲಿ ಪಾಲಿಕೆಯ ಇಬ್ಬರು ಅಧಿಕಾರಿಗಳ ಮೇಲೆ ಸುಮಟೊ ಪ್ರಕರಣ ದಾಖಲಾಗಿರುವುದು ಶಿವಮೊಗ್ಗದ ನಾಗರಿಕರಿಗೆ ತಿಳಿದಿರುವ ವಿಚಾರವೆ.

ಇಷ್ಟೆಲ್ಲ ಆದ ಬಳಿಕ ರಾಜ ಕಾಲುವೆ ಎಂಬ ಬೃಹನ್ ನಾಟಕದ ಮಾಯಾಂಗನೆಯ ಒತ್ತುವರಿ ತೆರವು ಯಾವ ಹಂತದಲ್ಲಿದೆ ಏನೆಲ್ಲಾ ಬೆಳವಣಿಗೆಗಳು ನಡೆದಿದೆ ಎಂಬುದರ ಕುರಿತು ನಾವೀಗ ವಿವರವಾಗಿ ಹೇಳುತ್ತೇವೆ.
ಆದರೆ ಈ ಸಂಬಂಧ ಇಲ್ಲಿವರೆಗೂ ಮಹಾನಗರ ಪಾಲಿಕೆ ಒತ್ತುವರಿ ಆಗಿರುವ ರಾಜಕಾಲುವೆ ತೆರವುಗೊಳಿಸದೇ ವಿಳಂಬ ಪ್ರಕ್ರಿಯೆ ನೆಹರು ರಸ್ತೆಯ ವರ್ತಕರಲ್ಲಿ ಆಕ್ರೋಶ ಹೆಚ್ಚಾಗಿದೆ .
ರಾಜಕಾಲುವೆಯ ಒತ್ತುವರಿ ತೆರವಾದರೆ ಕನ್ಸರ್ವನ್ಸಿ ಪಾರ್ಕಿಂಗ್ ವ್ಯವಸ್ಥೆಗೆ ಚಾಲನೆ ಸಿಗಲಿದೆ. ಕನ್ಸರ್ವೆನ್ಸಿ ಪಾರ್ಕಿಂಗ್ ಆರಂಭವಾದರೆ ರಸ್ತೆಯ ಮೇಲೆ ವಾಹನಗಳ ಪಾರ್ಕಿಂಗ್ಗೆ ಇರುವ ಒತ್ತಡ ಕಡಿಮೆಯಾಗಲಿದೆ.
ನೀರು ರಸ್ತೆಯ ವರ್ತಕರ ವಾಹನಗಳು ಮತ್ತು ಕೆಲಸಗಾರರ ವಾಹನಗಳು ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಿಲ್ಲಿಸಿದರೆ ಅಂಗಡಿಗಳಿಗೆ ಬರುವ ಗ್ರಾಹಕರು ವಾಹನಗಳನ್ನು ನಿಲ್ಲಿಸಿ ಸುಗಮವಾಗಿ ವ್ಯಾಪಾರ ವಹಿವಾಟು ನಡೆಸುವ ನಿರೀಕ್ಷೆ ಹೆಚ್ಚಿದೆ.
ಮಹಾನಗರ ಪಾಲಿಕೆ ಕೇವಲ ತೆರೆಗೆ ಸುಲಿಯಲ್ಲಿ ಮುಂದಾಗಿರುತ್ತದೆ ಹೊರತು ವರ್ತಕರಿಗೆ ನಿರೀಕ್ಷಿತ ವ್ಯವಸ್ಥೆ ಮಾಡಿಕೊಡುವಲ್ಲಿ ಸದಾ ವಿಳಂಬ ನೀತಿಯನ್ನು ಅನುಸರಿಸುತ್ತದೆ.
ಉಗರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಮಹಾನಗರ ಪಾಲಿಕೆಗೆ ರಾಜ ಕಾಲವೇ ಒತ್ತುವರಿ ತೆರವು ಪ್ರಕರಣ ಬಂದಾಗಲೇ ಅಧಿಕಾರಿಗಳು ತೆರವುಗೊಳಿಸಿದ್ದರೆ ಈ ಪ್ರಕರಣ ಲೋಕಾಯುಕ್ತ ಮೆಟ್ಟಿಲೇರುತ್ತಿರಲಿಲ್ಲ.
ಇದೀಗ ಪ್ರಕರಣ ಲೋಕಾಯುಕ್ತದಲ್ಲಿ ಇರುವುದನ್ನೇ ನೆಪ ಮಾಡಿಕೊಂಡು ಮತ್ತಷ್ಟು ಕಾರ್ಯಾಚರಣೆ ವಿಳಂಬ ಮಾಡುವ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳ ನಿರ್ಧಾರಗಳು ನೆಹರು ರಸ್ತೆಯ ವರ್ತಕರ ಪಾಲಿಕೆ ಮಾರಕವಾಗಿಯೇ ಪರಿಣಮಿಸಿದೆ.

ಈ ಸಂಬಂಧ ನಮ್ಮ ಇ-ಕನ್ನಡ ಮಾಧ್ಯಮಕ್ಕೆ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ಮಾಹಿತಿ ನೀಡಿದ್ದೇನೆಂದರೆ ಮಹಾನಗರ ಪಾಲಿಕೆಯಿಂದ ರಾಜಕಾಲುವೆ ಒತ್ತುವರಿ ತೆರವು ಕುರಿತು Proceeding ಹಂತದಲ್ಲಿದೆ ಆದರೆ ಇಷ್ಟೇ ದಿನದಲ್ಲಿ ಆಗತ್ತೆ ಎಂಬ ವಿಚಾರ ತಿಳಿಸಲು ಆಗುವುದಿಲ್ಲ, ಹಾಗೂ ಸದರಿ ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿಗಳಿಗೆ ನೀಡಲಾಗಿದೆ ಹಾಗಾಗಿ ಈ ಸಂಬಂಧ ಕ್ರಮ ಜರುಗಿಸಲಾಗುವುದು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ತಿಳಿಸಿದ್ದಾರೆ.
ಪಾಲಿಕೆಯ ಈ ರೀತಿಯ ನಿರ್ಧಾರಗಳು ಒತ್ತುವರಿ ಮಾಡಿಕೊಂಡಿರುವ ಪಾಲಿಗೆ ವರವಾಗಿಯೇ ಪರಿಣಮಿಸುತ್ತಿವೆ. ಇನ್ನು ನೆಹರು ರಸ್ತೆಯ ವರ್ತಕರು ಮಹಾನಗರ ಪಾಲಿಕೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಈಗ ಆಗುತ್ತೆ , ಆಗ ಆಗುತ್ತೆ ಎಂದು ಕಾದು ಕುಳಿತಿದ್ದಾರೆ.
ಮಹಾನಗರ ಪಾಲಿಕೆಯವರು ಲೋಕಾಯುಕ್ತದಲ್ಲಿದೆ ಎಲ್ಲಾ ನಿಯಮದ ಪ್ರಕಾರ ಮಾಡುತ್ತೇವೆ ಎಂದು ಹೇಳುತ್ತಾ ಒಟ್ಟಾರೆ ರಾಜಕಾಲುವೆ ತೆರವುಗೊಳಿಸಲು ಮೀನಾ ಮೇಷ ಎಣಿಸುತ್ತಿರುವ ಮತ್ತೊಂದು ಕಥೆಯ ಮುಂದುವರಿದ ಭಾಗವಾಗಿದೆ.

ಕಟ್ಟೆಯೊಡೆದ ನೆಹರು ರಸ್ತೆ ವರ್ತಕರ ಆಕ್ರೋಶ..!!
ನೆಹರು ರಸ್ತೆಯ ವರ್ತಕರು ರಾಜ ಕಾಲುವೆ ಒತ್ತುವರಿ ತಿರುಗು ಕಾರ್ಯಾಚರಣೆ ದಿನೇ ದಿನೇ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ, ನೆಹರು ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮಹಾನಗರ ಪಾಲಿಕೆಯ ವಿರುದ್ಧ ಪ್ರತಿಭಟನೆ ನಡೆಸುವ ಆಲೋಚನೆಯಲ್ಲಿದ್ದಾರೆ..!
ಜೊತೆಗೆ ಶಿವಮೊಗ್ಗ ನಗರದಲ್ಲಿನ ವರ್ತಕರು ತೆರಿಗೆ ನಿರಾಕರಣೆ ಪ್ರತಿಭಟನೆ ಮತ್ತೊಂದು ಭಾಗವಾಗಿ ಬಳಸುವ ಚಿಂತನೆಯಲ್ಲೂ ಇದ್ದಾರೆ.

ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ಒಂದೇ…!?
ಕಾನೂನು ಬಾಹಿರ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಶಿವಮೊಗ್ಗ ನಗರವನ್ನು ಪ್ರತಿಭಟನಾರ್ಥವಾಗಿ ಬಂದ್ ಮಾಡುವ ಹಂತಕ್ಕೆ ಹೋಗಿಯೇ ನ್ಯಾಯ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದ್ದೇಯಾ? ಎಂಬ ಪ್ರಶ್ನೆ ಸದ್ಯ ನೆಹರು ರಸ್ತೆಯಲ್ಲಿರುವ ವರ್ತಕರಲ್ಲಿ ಕಾಡುತ್ತಿದೆ…!



