ಹೊಸನಗರ | ಗುಂಡಿ ತೆಗೆಯುವಾಗ ಬಿದ್ದ ಬಂಡೆ ; ಯುವಕ ಸಾವು

ಶಿವಮೊಗ್ಗ

ಹೊಸನಗರ ತಾಲ್ಲೂಕಿನ ಬ್ರಹ್ಮೇಶ್ವರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರೊಬ್ಬರ ಮೇಲೆ ಕಲ್ಲು ಬಂಡೆ ಉರುಳಿಬಿದ್ದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ.

ಕಳೆದ ಬುಧವಾರ ಈ ಘಟನೆ ನಡೆದಿದೆ. ಮೃತ ಕೃಷಿಕನನ್ನು ಬ್ರಹ್ಮೇಶ್ವರ ನಿವಾಸಿ ಸತೀಶ್ (35) ಎಂದು ಗುರುತಿಸಲಾಗಿದೆ.

ಸತೀಶ್ ಮಸಗಲಿ ಗ್ರಾಮದಲ್ಲಿರುವ ತಮ್ಮ ಜಮೀನಿನ ಪಕ್ಕದಲ್ಲಿ ತೋಟಕ್ಕೆ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಗುಂಡಿ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದರು.

ಈ ಸಮಯದಲ್ಲಿ ಮೇಲ್ಭಾಗದಲ್ಲಿದ್ದ ದೊಡ್ಡ ಕಲ್ಲು ಬಂಡೆಯೊಂದು ಏಕಾಏಕಿ ಜಾರಿ ಅವರ ಮೇಲೆ ಬಿದ್ದಿದೆ. ಬಾರೀ ಗಾತ್ರದ ಬಂಡೆಯ ಅಡಿಗೆ ಸಿಲುಕಿದ ಸತೀಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Author