ಶಿವಮೊಗ್ಗ | ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ನಾಗಯಕ್ಷಿ ದೇವರ ವಾರ್ಷಿಕೋತ್ಸವ

ಶಿವಮೊಗ್ಗ

ಶಿವಮೊಗ್ಗ, ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ನಾಗಯಕ್ಷಿ ದೇವಸ್ಥಾನದ 12ನೇ ವಾರ್ಷಿಕ ಪೂಜಾ ಕಾರ್ಯಕ್ರಮವನ್ನು ಮಾರ್ಚ್ ತಿಂಗಳ 5, 6, 7 ಮತ್ತು 8 ನೇ ತಾರೀಖಿನಂದು ವಿವಿದ ಧಾರ್ಮಿಕ ಕಾರ್ಯಗಳು ನೆರವೇರಲಿದೆ., ದಿನಾಂಕ 5 ರಂದು ಶ್ರೀ ದುರ್ಗಾ ದೀಪ ನಮನ್ತಾರ, 6 ರಂದು ಶ್ರೀ ಚಂಡಿಕಾ ಹವನ ಮತ್ತು ಅಶ್ಲೇಷ ಬಲಿ ಕಾರ್ಯಗಳು ನಡೆಯಲಿವೆ.

ವಿಶೇಷವಾಗಿ ದಿನಾಂಕ 7 ರಂದು ‘ನವ ಪಲ್ಲಕ್ಕಿ ದೇವರ ಭಂಡಾರ ಉತ್ಸವ ಮೆರವಣಿಗೆ” ಕಾರ್ಯಕ್ರಮವಿದ್ದು ಇದರಲ್ಲಿ ಕ್ಷೇತ್ರದ ಸುತ್ತಮುತ್ತಲಿನ ಹಲವು ದೇವಾನುದೇವತೆಗಳ ಪಲ್ಲಕ್ಕಿಗಳು ಪಾಲ್ಗೊಳ್ಳಲಿವೆ.

ಯಕ್ಷಗಾನ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಾ ಜರುಗಲಿದ್ದು ಭಕ್ತರಿಗೆ ಪ್ರಸಾದ ವಿತರಣೆ ಇರುತ್ತದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬಂಗಾರಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿಯವರ ಮತ್ತು ಮೂಲ ಪಾತ್ರಿ ಶಾರದಮ್ಮನವರ ಪೂರ್ಣಾನುಗ್ರಹ ಆಶೀರ್ವಾದದೊಂದಿಗೆ ಹಾಗೂ ಪಾತ್ರಿ ಕಲ್ಪನಮ್ಮನವರ ಉಪಸ್ಥಿತಿಯಲ್ಲಿ ನೆರವೇರಲಿವೆ. .

Author