ಇರಾನ್ ಮೇಲಿನ ದಾಳಿ ಖಂಡನೆ, ಖಮೇನಿ ಹತ್ಯೆ “ದೊಡ್ಡ ನಷ್ಟ” ಎಂದು ಧಾರ್ಮಿಕ ಗುರುಗಳ ಪ್ರತಿಕ್ರಿಯೆ ; ಶಿಯಾ ಮುಸ್ಲಿಮರ ಪ್ರತಿಭಟನೆ

ಶಿವಮೊಗ್ಗ

ಶಿಯಾ ಮುಸ್ಲಿಮರು ಶಿವಮೊಗ್ಗದ ಡಿಸಿ ಕಚೇರಿ ಮುಂದೆ ಅಮೆರಿಕಾ ಸಂಯುಕ್ತ ಸಂಸ್ಥಾನವು ಇರಾನ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಮುಸ್ಲಿಮರು ಉಪವಾಸದಲ್ಲಿರುವ ಸಮಯದಲ್ಲಿ ಇಂತಹ ದಾಳಿ ನಡೆದಿರುವುದು ಅಮೆರಿಕಾಗೆ ಶುಭಕರವಾಗುವುದಿಲ್ಲ ಎಂದು ಧಾರ್ಮಿಕ ಮುಖಂಡರು ವಾಗ್ದಾಳಿ ನಡೆಸಿದರು.

ಟ್ರಾಂಪ್ ನವರ “ನಾಗರಹಾವಿನ ತಲೆಯನ್ನು ಹೊಡೆದಿದ್ದೇವೆ” ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಧಾರ್ಮಿಕ ಗುರುಗಳು, ಭಾರತದಲ್ಲಿ ಮಹಾತ್ಮ ಗಾಂಧಿ ಅವರಿಗೆ ಇದ್ದ ಗೌರವದಂತೆಯೇ ಇರಾನ್‌ನಲ್ಲಿ ಖಮೇನಿ ಅವರಿಗೆ ಅಪಾರ ಗೌರವವಿತ್ತು ಎಂದು ಹೇಳಿದರು.

ಅವರು ಆದರ್ಶ ವ್ಯಕ್ತಿಯಾಗಿದ್ದು, ಅವರ ಹತ್ಯೆ ನಿಜವಾಗಿಯೂ ದೊಡ್ಡ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

Author