ಶಿವಮೊಗ್ಗ ನಗರದ APMC ಯಲ್ಲಿರುವ ಮೆ।। ಎಫ್.ಪಿ. ಟ್ರೇಡರ್ಸ್., ಎಫ್-4, ತರಕಾರಿ ಮಾರುಕಟ್ಟೆ ಪ್ರಾಂಗಣ, ಫಜಿಲತ್ ಪಾಷಾ ಅವರು ತಮ್ಮ ತರಕಾರಿ ಮಳಿಗೆಗೆ ಗ್ರಿಲ್ ಗಳಿಗೆ ಪ್ಲೈ ವುಡ್ ಶೀಟ್ಗಳನ್ನು ಅಳವಡಿಸಿದ್ದಾರೆ. ಇದರಿಂದ ತರಕಾರಿಗಳಿಗೆ ಗಾಳಿಯೇ ಇಲ್ಲದಾಗಿದ್ದು ಇದರಿಂದ ತರಕಾರಿ ದುರ್ವಾಸನೆ ಬರುತ್ತಿದೆ ಹಾಗೂ ತರಕಾರಿ ಹಾಳಾಗುತ್ತಿದೆ.ಹಾಗೂ ಅಕ್ಕಪಕ್ಕ ಮಳಿಗೆಗಳಿಗೂ ತೊಂದರೆ ಉಂಟಾಗಿರುತ್ತೆ.
ಇನ್ನು ಈ ಸಂಬಂಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಅಧಿಕಾರಿಗಳು ಪರಿಶೀಲನೆ ನಡೆಸಿ ಪಾಷಾ ಅವರು ನಮಗೆ ಮಾಹಿತಿ ನೀಡಿದ್ದು ಧೂಳು ಜಾಸ್ತಿ ಬರತ್ತೆ ಹಾಗಾಗಿ ಗ್ರಿಲ್ ಗೆ ಶೀಟ್ ಅಳವಡಿಸಿರುತ್ತೇವೆ ಎಂದು ತಿಳಿಸಿದ್ದು ಆದರೆ ವಾಸ್ತವದ ಪರಿಸ್ಥಿತಿಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿನ ಗೋದಾಮು/ಮಳಿಗೆಗಳನ್ನು ತರಕಾರಿಗಳನ್ನು ಶೇಖರಿಸಲು ಮತ್ತು ವ್ಯವಹರಿಸಲು ಅನುಕೂಲಕ್ಕೆ ತಕ್ಕಂತೆ ಗೋದಾಮಿನ ಮುಂಭಾಗದಲ್ಲಿ ಗಾಳಿಯಾಡಲು ಅನುಕೂಲವಾಗುವಂತೆ ಗ್ರಿಲ್ ಗಳನ್ನು ಅಳವಡಿಸಿ, ನಿರ್ಮಿಸಲಾಗಿರುತ್ತದೆ.

ಹಾಗೂ ಅದನ್ನು ಶೀಟ್ ನಿಂದ ಮುಚ್ಚಿದಲ್ಲಿ ತರಕಾರಿ ಗಾಳಿಯಾಡದೇ ದುರ್ವಾಸನೆ ಬರುವದರೊಟ್ಟಿಗೆ ಅಕ್ಕಪಕ್ಕದ ಮಳಿಗೆಗಳಿಗೆ ಗಾಳಿಯಾಡಲು ಅನಾನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹಿಂಬರಹ ನೀಡಿದ್ದಾರೆ .
ಆದ್ದರಿಂದ, ತಮ್ಮ ಮಳಿಗೆಯ ಅಕ್ಕಪಕ್ಕದ ಗ್ರಿಲ್ ಗಳಿಗೆ ಪ್ರೈ ವುಡ್ ಶೀಟ್ ಗಳನ್ನು ಅಳವಡಿಸಬಾರದಾಗಿ APMC ಮಾರುಕಟ್ಟೆ ಸಮಿತಿ ಅಧಿಕಾರಿಯವರು ತಿಳಿಸಲಾಗಿದ್ದರೂ, ಸಹ ಗ್ರಿಲ್ ಗಳಿಗೆ ಶೀಟ್ ಗಳನ್ನು ಅಳವಡಿಸಿರುತ್ತೀರಿ. ಆದ್ದರಿಂದ, ಈ ಕೂಡಲೇ ಸದರಿ ಶೀಟ್ ಗಳನ್ನು ತೆರವುಗೊಳಿಸಿ ಎಂದು ತಿಳಿಸಿದ್ದಾರೆ.

ಮತ್ತು 03 ದಿನದೊಳಗಾಗಿ ಕಛೇರಿಗೆ ವರದಿ ಮಾಡಲು ಈ ಮೂಲಕ ತಿಳಿಯಪಡಿಸಿದೆ. ತಪ್ಪಿದಲ್ಲಿ ಆಸ್ತಿ ಹಂಚಿಕೆ ನಿಯಮ-2004 ರನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ತಿಳಿಯಿರಿ ಎಂದು ಎಚ್ಚರಿಕೆ ನೀಡಿದ್ದಾರೆ .
ಹಾಗೂ ಈ ಪಾಷಾ ಇಲ್ಲಿಯವರೆಗೆ 3 ನೋಟೀಸ್ ನೀಡಿದರು ಯಾರೇ ಅಧಿಕಾರಿಗಳು ಕ್ಯಾರೇ ಅಂದಿಲ್ಲ ಎಂಬ ಮಾಹಿತಿಯಾಗಿದೆ.ತಾನು ನಡೆದಿದ್ದೆ ಸರಿ ಎಂಬ ಮನೋಭಾವನೆ ಇಟ್ಟುಕೊಂಡು ಅಕ್ಕಪಕ್ಕ ಮಳಿಗೆಯವರಿಗೆ ಕೂಡ ಇವರಿಂದ ತೊಂದರೆ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ.



