ಶಿವಮೊಗ್ಗ ನಗರದ ಕಾಂಗ್ರೆಸ್ ಮಹಿಳಾ ಮುಖಂಡೆಯಿಂದ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಮೇಲೆ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಶ್ರೀಮತಿ ಅಸ್ಮಾ ಬಾನು ಎಂಬುವವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ನ್ಯಾಯ ಕೋರಿ ಮೊರೆ ಹೋಗಿದ್ದಾರೆ.
ಆರೋಪಿತೆ ನಾಜಿಮ ಅವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಎಂ ಎಲ್ ಸಿ ಬಲ್ಕಿಸ್ ಬಾನು ಇನ್ನಿತರೆ ಶಾಸಕರು ಹಾಗೂ ಸಚಿವರ ಹೆಸರಲ್ಲಿ ವಂಚನೆ ಎಸಗಿದ್ದಾರೆ ಎಂಬ ಆರೋಪವಾಗಿದೆ.
ಘಟನೆ ವಿವರ :
ಸಂತ್ರಸ್ತೆಯ ಆರೋಪ ಈ ಕೆಳಗನಂತಿದೆ,
ನಾನು ಬಿ.ಎ. ಪದವಿ ವ್ಯಾಸಂಗ ಮಾಡುತ್ತಿದ್ದು, ನನ್ನ ಗಂಡ ಕೂಲಿಕೆಲಸ ಮಾಡಿಕೊಂಡಿದ್ದಾರೆ,ಕಷ್ಟದ ಜೀವನ ನಡೆಸುತ್ತಿದ್ದೇವೆ. ನಮಗೆ 3 ಜನ ಹೆಣ್ಣುಮಕ್ಕಳಿರುತ್ತಾರೆ. ಮನೆಯ ಆರ್ಥಿಕ ಪರಿಸ್ಥಿತಿಯು ಸರಿಯಿಲ್ಲದ ಕಾರಣ ವಯಸ್ಸಾದ ಅತ್ತೆ ಮಾವಂದಿರು ಇರುತ್ತಾರೆ. ಇವರ ಯೋಗಕ್ಷೇಮಕ್ಕಾಗಿ ನನಗೆ ಕೆಲಸದ ಅವಶ್ಯಕತೆಯಿದ್ದು, ನಮ್ಮ ಮಾವನವರಾದ ಜಪ್ಪು ಎಂಬುವವರಿಗೆ ಪರಿಚಯವಾದ ಶಿವಮೊಗ್ಗ ನಿವಾಸಿ ಶ್ರೀಮತಿ ನಾಜಿಮ ಎಂಬುವವರನ್ನು ಭೇಟಿ ಮಾಡಿಸಿ ಕೆಲಸಕ್ಕಾಗಿ ಬೇಡಿಕೆ ಇಟ್ಟಾಗ ನಮ್ಮಿಂದ ಸಂಪೂರ್ಣ ದಾಖಲಾತಿಗಳನ್ನು ಪಡೆದುಕೊಂಡು, ಸರ್ಕಾರಿ ಕಛೇರಿಗಳಲ್ಲಿ ಖಾಸಗಿ ಗುತ್ತಿಗೆ ಆಧಾರಿತ ಮಾಸಿಕ ವೇತನದ ಕೆಲಸವನ್ನು ಕೊಡಿಸುವುದಾಗಿ ನಂಬಿಸಿದರು.
ನಂತರ ಹಲವು ಬಾರಿ ಫೋನ್ ಸಂಭಾಷಣೆಯಲ್ಲಿ ಈ ಕೆಲಸದ ವಿಚಾರವಾಗಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಹಣ ಕೊಡಬೇಕಾಗುತ್ತದೆ ಎಂದು ತಿಳಿಸಿ, ಕರ್ನಾಟಕ ಸರ್ಕಾರದ ಸಚಿವರಾದ ಮಧುಬಂಗಾರಪ್ಪನವರ ಹಾಗೂ ಶಿವಮೊಗ್ಗ ನಗರ ಕ್ಷೇತ್ರ ಶಾಸಕರಾದ ಚನ್ನಬಸಪ್ಪನವರ ಹೆಸರು ಬಳಸಿಕೊಂಡು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ .
ದಿನಾಂಕ: 15.09.2025 ರಂದು ನಮ್ಮಿಂದ ಆಯನೂರು ಗೇಟ್ ಬಳಿಯಲ್ಲಿರುವ ಅಶೋಕ ಗ್ರಾಂಡ್ ಹೋಟೆಲ್ ಒಳ ಭಾಗದಲ್ಲಿ ಕರೆಸಿ ನಮ್ಮಿಂದ ಮಧ್ಯಾಹ್ನ 13.30 ರಿಂದ 15.00 ಮಧ್ಯದ ಸಮಯದಲ್ಲಿ 2 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಡೆದುಕೊಂಡು, ಅದರಂತೆ ಗುತ್ತಿಗೆದಾರರಾದ ಕಮಲ್ ಹಾಗೂ ತಿಮ್ಮರಾಜುರವರ ಮಧ್ಯಸ್ಥಿಕೆಯಲ್ಲಿ ಕೆಲಸದ ಆದೇಶ ಪತ್ರವನ್ನು ಕೊಡಿಸುವುದಾಗಿ ನಂಬಿಸಿದರು.
ದಿನಾಂಕ: 30.09.2025 ರಂದು ಮತ್ತೊಮ್ಮೆ ಅದೇ ಸ್ಥಳದಲ್ಲಿ ಕರೆಯಿಸಿ 15 ರಿಂದ 16.45 ರ ಸಮಯದ ಮಧ್ಯದಲ್ಲಿ 1 ಲಕ್ಷ ರೂಪಾಯಿಗಳನ್ನು ಪಡೆದಿರುತ್ತಾರೆ. ಅದರಂತೆ ಈಗಲ್ ಡಿಟೆಕ್ಟಿವ್ ಫೋರ್ಸ್ ಆದೇಶ ಪತ್ರವನ್ನು ನೀಡಿ ನವೆಂಬರ್-2025 ರಲ್ಲಿ ಶಿವಮೊಗ್ಗ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಅಟೆಂಡರ್ ಆಗಿ ಕರ್ತವ್ಯದ ಕೆಲಸಕ್ಕೆ ಹಾಜರಾಗಬೇಕೆಂದು ತಿಳಿಸಿದರು.
1 ತಿಂಗಳ ನಂತರ ಅದರಂತೆ ದಿನಾಂಕ: 01.12.2025 ರಂದು ನನ್ನನ್ನು ಕಂಪ್ಯೂಟರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿ, ಉಪ ಅರಣ್ಯ ಸಂರಕ್ಷಣಾ ವನ್ಯಜೀವಿ ವಿಭಾಗದ ಅಧಿಕಾರಿಯಾದ ಜಗದೀಶ್ ರವರು ಈಗಲ್ ಡಿಟೆಕ್ಟಿವ್ ಫೋರ್ಸ್ ರವರಾದ ಕಮಲ್ ಎಂಬುವವರ ಆದೇಶದ ಮೇರೆಗೆ ನನ್ನನ್ನು 1 ತಿಂಗಳು ಎತಿ ಇ ಎಸ್ ಟಿ ಸೆಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸಲು ಆದೇಶ ನೀಡಿರುತ್ತಾರೆ.
ತಿಂಗಳಾದರೂ ಇವರ ವರ್ತನೆಯ ಮೇಲೆ ನನಗೆ ಅನುಮಾನ ಬಂದಿದ್ದು, ನನಗೆ ಯಾವುದೇ ರೀತಿಯ ಕಾನೂನು ಬದ್ಧವಾದ ಗುತ್ತಿಗೆ ಆಧಾರಿತ ನೇಮಕಾತಿ ನಕಲಿ ಆದೇಶ ಪತ್ರವನ್ನು ನಾಜಿಮಾರವರು ನೀಡಿ ವಂಚಿಸಿರುವುದು ತಿಳಿದುಬಂದಿದ್ದರಿಂದ ನನ್ನ ಮಾವನವರಾದ ಜಪ್ಪು ರವರಿಗೆ ಸಂಪೂರ್ಣ ವಿಚಾರವನ್ನು ತಿಳಿಸಿದೆ.
ಹಾಗೂ ನಾವು ನೀಡಿದ ಹಣವನ್ನು ಹಿಂದಿರುಗಿಸಬೇಕೆಂದು ಕೇಳಿದಾಗ, ನಿಮ್ಮ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಫೋನ್ ಸಂಭಾಷಣೆಯಲ್ಲಿ ತಿಳಿಸಿರುತ್ತಾರೆ.

ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ನಮ್ಮ ಮಾವನವರು ಭೇಟಿಯಾದ ಸಂದರ್ಭದಲ್ಲಿ ಹಣವನ್ನು ಹಿಂದಿರುಗಿಸುತ್ತೇನೆಂದು ಒಪ್ಪಿಕೊಂಡು ದಿನಾಂಕ:05.01.2026 ರಂದು ಠಾಣಾಧಿಕಾರಿಗಳ ಸಮ್ಮುಖದಲ್ಲಿ ಅಸ್ಮಾಬಾನು ಎಂಬುವವರ ಹೆಸರಿನಲ್ಲಿ ದೂರು ಸ್ವೀಕರಿಸಿಕೊಂಡು ನಮ್ಮಿಂದ ಪಡೆದ 3 ಲಕ್ಷ ರೂ.ಗಳ ಬದಲಿಗೆ ರೂ.1.60,000/- ಗಳನ್ನು ನಗದು ರೂಪದಲ್ಲಿ ಹಿಂದಿರುಗಿಸಿ ಉಳಿದ ಹಣವನ್ನು ಈಗಲ್ ಡಿಟೆಕ್ಟಿವ್ ಫೋರ್ಸ್ ರವರಾದ ಕಮಲ್ ಹಾಗೂ ಅರಣ್ಯ ಅಧಿಕಾರಿಗಳಿಂದ ಪಡೆದುಕೊಳ್ಳಿ ಎಂದು ತೀರ್ಮಾನ ಮಾಡಿಸಿರುತ್ತಾರೆ.
ನಂತರ ಇಲ್ಲಿಯವರೆಗೂ ಹಣ-ಹಿಂದಿರುಗಿಸಿದ ಕಾರಣ, ಶ್ರೀಮತಿ ನಾಜಿಮಾರವರು ಈ ವಿಚಾರವನ್ನು ಮಹಿಳಾ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಅರುಣ್ ಕುಮಾರ್ ಎಂಬುವವರ ಬಳಿಯಲ್ಲಿ ಫೋನ್ ಕರೆ ಮಾಡಿಸಿ, ಹಣವನ್ನು ಹಿಂದಿರುಗಿಸಿ ಸಮಸ್ಯೆಯನ್ನು ಬಗೆಹರಿಸಿ ಕೊಡುತ್ತೇನೆಂದು ತಿಳಿಸಿರುತ್ತಾಳೆ.
ದಿನಾಂಕ:22.01.2026 ರಂದು ನಮ್ಮ ಬಾಕಿ ಹಣ ರೂ. 1,40,000/-ಗಳನ್ನು ಹಿಂದಿರುಗಿಸದ ಕಾರಣ ಶ್ರೀಮತಿ ನಾಜಿಮಾ ರವರು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಬಳಸಿಕೊಂಡು, ಹಾಗೂ ಕರ್ನಾಟಕ ಸರ್ಕಾರ ಉನ್ನತ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ಮಹಿಳಾ ಠಾಣೆಯಲ್ಲಿ ಕುಳಿತುಕೊಂಡು ಜನಸಾಮಾನ್ಯರನ್ನು ನಂಬಿಸಿ, ಸಮಸ್ಯೆಯನ್ನು ಬಗೆಹರಿಸುವ ಅಧ್ಯಕ್ಷಳು ಎಂದು ಹೇಳಿಕೊಂಡು, ತಾನು ಸಾಂತ್ವನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿ ವಂಚಿಸಿರುತ್ತಾರೆ.
ಆದ್ದರಿಂದ ನನಗೆ ಕೆಲಸ ಕೊಡಿಸುವ ನೆಪದಲ್ಲಿ ಹಣ ತೆಗೆದುಕೊಂಡು ವಂಚಿಸಿರುವ ಶ್ರೀಮತಿ ನಾಜಿಮಾ, ಉಪ ಅರಣ್ಯ ಸಂರಕ್ಷಣಾ ವನ್ಯಜೀವಿ ವಿಭಾಗಾಧಿಕಾರಿಗಳು-ಶಿವಮೊಗ್ಗ, ಗುತ್ತಿಗೆ ಆಧಾರಿತ ಈಗಲ್ ಡಿಟೆಕ್ಟಿವ್ ಫೋರ್ಸ್ ರವರಾದ ಕಮಲ್, ತಿಮ್ಮರಾಜು ಮತ್ತು ಸಹಕರಿಸುತ್ತಿರುವ ಹಾಗೂ ದೂರು ಸ್ವೀಕರಿಸಿರುವ ಮಹಿಳಾ ಠಾಣಾ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ರೀತ್ಯಾ ತನಿಖೆ ನಡೆಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ದೂರು ನೀಡಿರುತ್ತಾರೆ .
ಇದಕ್ಕೆ ಸಂಬಂಧಪಟ್ಟಂತೆ ಹಣ ಪಡೆದವರ ಆದೇಶದ ಪ್ರತಿ, ಮೊಬೈಲ್ ದೃಶ್ಯಮಾಧ್ಯಮ, ಆಡಿಯೋ, ಸಂಬಂಧಪಟ್ಟವರ ದೂರವಾಣಿ ಸಂಭಾಷಣೆ ದಾಖಲೆಯ ರೆಕಾರ್ಡಿಂಗ್ ಸಹ ಇರುತ್ತದೆ. ನಾಜಿಮಾ ರವರು ಈ ರೀತಿ ಸರ್ಕಾರಿ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ರೀತ್ಯ ಅಧಿಕಾರಿಗಳ ಸಹಯೋಗದೊಂದಿಗೆ ಬಡವರಾದ ನಮ್ಮನ್ನು ಸುಳ್ಳು ಆಶ್ವಾಸನೆಗಳನ್ನು ನೀಡಿ ಕಾನೂನು ದುರ್ಬಳಕೆ ಮಾಡಿಕೊಂಡು ಸಮಾಜಘಾತುಕ ವಿಚಾರಗಳನ್ನು ಇಟ್ಟುಕೊಂಡು ಜನಸಾಮಾನ್ಯರಿಗೆ ದಿಕ್ಕು ತಪ್ಪಿಸುತ್ತಿರುವುದರಿಂದ ನಾಜಿಮ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮಕ್ಕಾಗಿ ಹಾಗೂ ನ್ಯಾಯ ಒದಗಿಸಿಕೊಡಬೇಕೆಂದು ಸಂತ್ರಸ್ತೆ ದೂರು ನೀಡಿದ್ದಾರೆ .



