ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್

ಉತ್ತರ ಕನ್ನಡ

ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ, ನೈಋತ್ಯ ರೈಲ್ವೆ ಯಶವಂತಪುರದಿಂದ ತಾಳಗುಪ್ಪಕ್ಕೆ ವಿಶೇಷ ರೈಲು ಸೇವೆಗಳನ್ನು ಪ್ರಕಟಿಸಿದೆ. ಫೆಬ್ರವರಿ 27ರಿಂದ ಪ್ರಾರಂಭವಾಗುವ ಈ ರೈಲುಗಳು ಭಕ್ತರಿಗೆ ಅನುಕೂಲಕರ ಪ್ರಯಾಣ ಒದಗಿಸುತ್ತವೆ. ರೈಲು ಸಂಖ್ಯೆಗಳು, ಹೊರಡುವ ಮತ್ತು ತಲುಪುವ ಸಮಯಗಳು, ಬೋಗಿಗಳ ವಿವರಗಳನ್ನು ನೀಡಲಾಗಿದೆ. ಮಾರ್ಚ್ 1ರಿಂದ ವಿಸ್ತರಿತ ಸೇವೆಗಳೂ ಇವೆ. ಜನಸಂದಣಿಯಿಂದಾಗಿ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಸಲಹೆ ನೀಡಲಾಗಿದೆ.

ಎರಡು ವರ್ಷಕ್ಕೊಮ್ಮೆ ನಡೆಯುವ ನಾಡಿನ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ನೈಋತ್ಯ ರೈಲ್ವೆಯು ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ಬೆಂಗಳೂರಿನ ಯಶವಂತಪುರ ಮತ್ತು ತಾಳಗುಪ್ಪ ನಡುವೆ ಈ ಸೇವೆ ಲಭ್ಯವಿರಲಿದೆ. ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 27 ರಂದು ಸಂಚರಿಸಲಿದೆ. ರೈಲು ಸಂಖ್ಯೆ 06587 ಫೆಬ್ರವರಿ 27 (ಶುಕ್ರವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಫೆಬ್ರವರಿ 28 ರಂದು ಮುಂಜಾನೆ 05:05ಕ್ಕೆ ತಾಳಗುಪ್ಪ ತಲುಪಲಿದೆ. ಮತ್ತೆ ವಾಪಸ್​​​​​​ ಬೆಂಗಳೂರಿಗೆ ರೈಲು ಸಂಖ್ಯೆ 06588 ಫೆಬ್ರವರಿ 28 (ಶನಿವಾರ) ಬೆಳಿಗ್ಗೆ 09:30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 05:15ಕ್ಕೆ ಯಶವಂತಪುರ ತಲುಪಲಿದೆ.

ಒಟ್ಟು 20 ಬೋಗಿಗಳು (1 ಪ್ರಥಮ ದರ್ಜೆ/AC 2-ಟೈರ್, 2 AC 3-ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದರ್ಜೆ ಮತ್ತು 2 ಎಸ್‌ಎಲ್‌ಆರ್) ಇರಲಿದೆ. ಈಗಾಗಲೇ ಇರುವ ಇರುವ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ.

ಇನ್ನು ಮಾರ್ಚ್​​ ಒಂದರಿಂದ ರೈಲು ಸಂಖ್ಯೆ 16581 ಮಧ್ಯರಾತ್ರಿ 12:15ಕ್ಕೆ ಯಶವಂತಪುರದಿಂದ ಹೊರಟು ಬೆಳಿಗ್ಗೆ 09:00ಕ್ಕೆ ತಾಳಗುಪ್ಪ ತಲುಪಲಿದೆ. ಇನ್ನು ಅದೇ ದಿನ ಅಂದರೆ ಮಾರ್ಚ್ 1 ರಂದು ರೈಲು ಸಂಖ್ಯೆ 16582 ( ರಾತ್ರಿ 10:00ಕ್ಕೆ ತಾಳಗುಪ್ಪದಿಂದ ಹೊರಟು ಮರುದಿನ ಮುಂಜಾನೆ 04:45ಕ್ಕೆ ಯಶವಂತಪುರ ತಲುಪಲಿದೆ.

ಇನ್ನು ಈ ರೈಲುಗಳು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಂಸಿ, ಅರಸಾಳು ಹಾಲ್ಟ್, ಕೆಂಚನಾಳು ಹಾಲ್ಟ್, ಆನಂದಪುರಂ, ಅಡ್ಡೇರಿ ಹಾಲ್ಟ್ ಮತ್ತು ಸಾಗರ ಜಂಬಗಾರು ನಿಲುಗಡೆ ಇದೆ. ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಟಿಕೆಟ್ ಬುಕ್ಕಿಂಗ್ ಅನ್ನು ಮುಂಚಿತವಾಗಿಯೇ ಮಾಡಿಕೊಳ್ಳುವುದು ಉತ್ತಮ. ಐಆರ್‌ಸಿಟಿಸಿ (IRCTC) ಅಥವಾ ರೈಲ್ವೆ ಕೌಂಟರ್‌ಗಳಲ್ಲಿ ಈ ರೈಲುಗಳ ಬುಕ್ಕಿಂಗ್ ಲಭ್ಯವಿರುತ್ತದೆ.

.

Author