“ಎನ್. ಎಸ್. ಎಸ್. ಕಲ್ಪಿನೆಯೇ ಅದ್ಭುತ. ತರಗತಿಯಿಂದ ಹೊರಗೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಬದುಕನ್ನು ಅರ್ಥೈಸುವ ಬಹು ದೊಡ್ಡ ವೇದಿಕೆ ಇದಾಗಿದೆ.
ಗಾಂಧಿ ಆಶಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಯೋಜನೆಯೂ ಹೌದು. ಗಾಂಧೀಜಿಯವರು ಹೇಳಿದ ಮಾತು ಇಂದಿಗೂ ನೆನಪಿಸಿಕೊಳ್ಳಬೇಕು. ಅವರ ದೃಷ್ಟಿಯಲ್ಲಿ ನಮಗೆ ಬಂದಿರುವುದು ರಾಜಕೀಯ ಸ್ವಾತಂತ್ರ ಮಾತ್ರ.
ಸಾಮಾಜಿಕ, ನೈತಿಕ, ಆರ್ಥಿಕ ಸ್ವಾತಂತ್ರ ಇನ್ನೂ ನಮಗೆ ಬಂದಿಲ್ಲ. “ಎಂದು ಕರ್ನಾಟಕ ಗಾಂಧಿ ಭವನದ ಅಧ್ಯಕ್ಷರಾದ ನಾಡೋಜ ವೋಡೆ ಪಿ.ಕೃಷ್ಣ ಅವರು,ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್ ಎಸ್ ಕೋಶದ ಸಹಯೋಗದಲ್ಲಿ ಕುವೆಂಪು ವಿಶ್ವ ವಿದ್ಯಾ ಲಯದ ರಾಷ್ಟ್ರೀಯ ಸೇವಾ ಯೋಜನೆಯು ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಕಾರ್ಯಕ್ರಮಾಧಿಕಾರಿಗಳಿಗೆ ಏರ್ಪಡಿಸಿದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಸಿ ಮಾತನಾಡಿದರು.
“ಭಾರತಕ್ಕೆ ಸ್ವಾತಂತ್ರ ಬಂದು 78 ವರ್ಷಗಳು ಸಂದಿವೆ.ಆದರೂ ಅನಕ್ಷರತೆ, ಬಡತನ, ಅಜ್ಞಾನ ದಿಂದ ನಾವು ಬಿಡುಗಡೆ ಹೊಂದಿಲ್ಲ. ಭಾರತದ ನಿಜವಾದ ಅಭಿವೃದ್ಧಿ ಹಳ್ಳಿಗಳನ್ನು ಅವಲಂಬಿಸಿದೆ. ಈ ದೇಶದ ಕಟ್ಟ ಕೆಡೆಯ ಮನುಷ್ಯನು ಸ್ವಾವಲಂಬಿ ಯಾಗಬೇಕು. ಹಳ್ಳಿಗಳು ವಾಸಕ್ಕೆ ಯೋಗ್ಯವಂತಗಬೇಕು.
ಸಮುದಾಯಿಕ ಸಾಮಾಜ ಮತ್ತು ಅಹಿಂಸಾತ್ಮಕ ಸಮಾಜ ನಿರ್ಮಾಣವು ಗಾಂಧಿಯವರ ಕನಸು. ಅದನ್ನು ರಾಷ್ಟ್ರೀಯ ಸೇವಾ ಯೋಜನೆ ಸಕರಾಗೊಳಿಸಬೇಕಿದೆ.” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಎನ್ ಎಸ್ ಎಸ್ ರಾಜ್ಯ ಕೋಶದ ಮಾಜಿ ಅಧಿಕಾರಿಗಳಾದ ಡಾ. ಕೆ. ಬಿ.ಧನಂಜಯ ಅವರು ಮಾತನಾಡಿ, ” ಇಂದು ಭಾವನಾತ್ಮಕ ಸಂಬಂಧಗಳನ್ನು ನಾವು ಕಳೆದು ಕೊಳ್ಳುತ್ತಿದ್ದೇವೆ. ಎನ್. ಎಸ್ ಎಸ್ ಯಾವಾಗಲೂ ಮನುಷ್ಯ ಸಂಬಂಧಗಳನ್ನು ಕಾಪಿಡುವ ಕೆಲಸ ಮಾಡುತ್ತಿದೆ.” ಎಂದರು.
ಅಧ್ಯಕ್ಷತೆ ವಹಿಸಿದ್ದ ಪರೀಕ್ಷಾಂಗ ಕುಲಸಚಿವರಾದಪ್ರೊ.ಆರ್.ತಿಮ್ಮರಾಯಪ್ಪ ಅವರು ಮಾತನಾಡಿ “ಸ್ವಾರ್ಥ ಇಲ್ಲದೆ ಇರುವುದೇ ಸೇವೆ. ಸೇವಾಭಾವಕ್ಕೆ ಆತ್ಮ ತೃಪ್ತಿಯೇ ಮುಖ್ಯ. ಅದನ್ನು ಪಡೆಯಲು ಸೂಕ್ತ ತರಬೇತಿ ಬೇಕು. ಕೌಶಲ್ಯ ಮತ್ತು ಅದರ ಬಗ್ಗೆ ಮಾಹಿತಿ ಬೇಕಾಗುತ್ತದೆ. ಇದನ್ನು ಕೊಡುವುದು ಈ ತರಬೇತಿಯ ಮುಖ್ಯ ಉದ್ದೇಶ ” ಎಂದರು.
ವಿಶ್ವ ವಿದ್ಯಾಲಯದ ಆವರಣದಲಿ ನಡೆಯುವ ಈ ಐದು ದಿನಗಳ ತರಬೇತಿ ನಿರ್ದೇಶಕರಾದ ಪ್ರೊ. ಜಿ. ಬಿ ಶಿವರಾಜು ಅವರು ಕಾರ್ಯಕ್ರಮಾಧಿಕಾರಿಗಳಿಗೆ ತರಬೇತಿ ನೀಡುವ ಇಂತಹ ಕಾರ್ಯಾಗಾರದ ಮಹತ್ವ ವಿವರಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಾಗಾರದ ಸಹ ನಿರ್ದೇಶಕರಾದ ಪ್ರೊ. ಕೆ. ಎಂ. ವೀರಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮಾಧಿಕಾರಿ ಪ್ರಕಾಶ್ ಎನ್ ಜೆ ವಂದಿಸಿದರು. ಕಾರ್ಯಕ್ರಮಾಧಿಕಾರಿ ಶಂಕರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.



